ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಮಹಾಮಾರಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚವಾಗುತ್ತಿದ್ದು, ಇಲ್ಲಿಯವರೆಗೆ 2.35 ಲಕ್ಷ ಜನರಲ್ಲಿ ಈ ಮಾಹಾಮಾರಿ ಕಾಣಿಸಿಕೊಂಡಿದ್ದು, ಸದ್ಯ 6ನೇ ಸ್ಥಾನದಲ್ಲಿ ನಿಂತುಕೊಂಡಿದೆ.
ದೇಶದಲ್ಲಿ ಕೋವಿಡ್ನಿಂದಾಗಿ 6,600 ಜನರು ಸಾವನ್ನಪ್ಪಿದ್ದು, 9ನೇ ಸ್ಥಾನದಲ್ಲಿದ್ದ ಭಾರತ ಕೇವಲ ಒಂದೇ ವಾರದಲ್ಲಿ 6ನೇ ಸ್ಥಾನಕ್ಕೆ ಲಗ್ಗೆ ಹಾಕಿದೆ. ದೇಶದಲ್ಲಿ 1.12 ಲಕ್ಷ ಜನರು ಈ ಸೋಂಕಿನಿಂದ ಗುಣಮುಖರಾಗಿದ್ದು, 1ಲಕ್ಷ ಆ್ಯಕ್ಟಿವ್ ಕೇಸ್ಗಳಿವೆ. ಮಹಾರಾಷ್ಟ್ರದಲ್ಲೇ 80,229 ಕೇಸ್ಗಳು ಕಂಡು ಬಂದಿದ್ದು, ನಿನ್ನೆ ಒಂದೇ ದಿನ 2,436 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಇಲ್ಲಿಯವರೆಗೆ 2,849 ಜನರು ಸಾವನ್ನಪ್ಪಿದ್ದಾರೆ.
ತಮಿಳುನಾಡಿನಲ್ಲಿ 27,256 ಜನರಲ್ಲಿ ಕೋವಿಡ್ ಕಾಣಿಸಿಕೊಂಡಿದ್ದು, 220 ಜನರು ಸಾವನ್ನಪ್ಪಿದ್ದಾರೆ. ದೆಹಲಿಯಲ್ಲಿ 25,004 ಜನರಲ್ಲಿ ಕೊರೊನಾ ಸೋಂಕು ತಗುಲಿದ್ದು, 650 ಜನರು ಸಾವನ್ನಪ್ಪಿದ್ದಾರೆ.
ಗುಜರಾತ್ನಲ್ಲಿ 18,584 ಜನರಲ್ಲಿ ಮಹಾಮಾರಿ ಕಾಣಿಸಿಕೊಂಡಿದ್ದು, 1,115 ಜನರು ಸಾವನ್ನಪ್ಪಿದ್ದಾರೆ. ಇನ್ನು ರಾಜಸ್ಥಾನದಲ್ಲಿ 9,862 ಜನರಲ್ಲಿ ಈ ಸೋಂಕು ಕಾಣಸಿಕ್ಕಿದೆ. ಉತ್ತರಪ್ರದೇಶದಲ್ಲಿ 9,237 ಜನರಲ್ಲಿ, ಮಧ್ಯಪ್ರದೇಶದಲ್ಲಿ 8,762 ಜನರಲ್ಲಿ, ಪಶ್ಚಿಮ ಬಂಗಾಳದಲ್ಲಿ 6,876, ಬಿಹಾರ 4,493 ಹಾಗೂ ಕರ್ನಾಟಕದಲ್ಲಿ 4,320 ಜನರಲ್ಲಿ ಈ ಸೋಂಕು ಕಾಣಿಸಿಕೊಂಡಿದೆ.
ಇನ್ನು ಅಮೆರಿಕದಲ್ಲಿ 18,72,660 ಜನರಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಬ್ರೇಜಿಲ್ನಲ್ಲಿ 6,14,941, ರಷ್ಯಾ 4,40,538,ಯುಕೆಯಲ್ಲಿ 2,83,079, ಸ್ಪೇನ್ 2,40,660, ಭಾರತದಲ್ಲಿ 2.35 ಲಕ್ಷ ಜನರಲ್ಲಿ ಹಾಗೂ ಇಟಲಿಯಲ್ಲಿ 2,34,531 ಜನರಲ್ಲಿ ಈ ಸೋಂಕು ಕಾಣಿಸಿಕೊಂಡಿದೆ.