ಶ್ರಿನಗರ(ಜಮ್ಮು-ಕಾಶ್ಮೀರ): ಇಂದಿನಿಂದ ಕಾಶ್ಮೀರ ಜಿಲ್ಲೆಯ ಸುಮಾರು 190 ಪ್ರಾಥಮಿಕ ಶಾಲೆಗಳನ್ನು ಪುನಾರಂಭಿಸುವುದಾಗಿ ಯೋಜನೆ ಮತ್ತು ಅಭಿವೃದ್ಧಿ ವಿಭಾಗದ ಪ್ರಧಾನ ಕಾರ್ಯದರ್ಶಿ ರೋಹಿತ್ ಕನ್ಸಾಲ್ ಮಾಹಿತಿ ನೀಡಿದ್ದಾರೆ.
ಕಾಶ್ಮೀರ ಕಣಿವೆಯಾದ್ಯಂತ ಸರ್ಕಾರಿ ಕಚೇರಿಗಳ ಪೂರ್ಣ ಪ್ರಮಾಣದ ಕಾರ್ಯವನ್ನು ಮರುಸ್ಥಾಪಿಸುವುದರ ಜೊತೆಗೆ ಶ್ರೀನಗರ ಜಿಲ್ಲೆಯೊಂದರಲ್ಲೇ 190 ಶಾಲೆಗಳನ್ನು ಮತ್ತೆ ತೆರೆಯಲಾಗುತ್ತಿದೆ.
ಕಾಶ್ಮೀರದಾದ್ಯಂತ ಮೂಲಸೌಕರ್ಯ ಮತ್ತು ಅಭಿವೃದ್ಧಿ ಕಾರ್ಯಗಳ ಮರುಸ್ಥಾಪನೆಗೆ ಸರ್ಕಾರ ಮುಂದಡಿಯಿಟ್ಟಿದೆ ಎಂದು ರೋಹಿತ್ ಕನ್ಸಾಲ್ ತಿಳಿಸಿದ್ದಾರೆ.