ETV Bharat / bharat

ಅಣ್ಣನ ಮೇಲೆ ಹಲ್ಲೆಗೈದು ಏಳು ಮಂದಿ ಕಾಮುಕರಿಂದ ಯುವತಿ ಮೇಲೆ ಅತ್ಯಾಚಾರ

author img

By

Published : May 1, 2020, 9:42 AM IST

ಮನೆಗೆ ತೆರಳುತ್ತಿದ್ದ ವೇಳೆ ಕಾಮುಕರ ಗುಂಪೊಂದು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಅಮಾನವೀಯ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

18-year-old woman gang-raped in MP
18-year-old woman gang-raped in MP

ಭೋಪಾಲ್ ​(ಮಧ್ಯಪ್ರದೇಶ): ಅಣ್ಣನೊಂದಿಗೆ ಮನೆಗೆ ಹಿಂತಿರುಗುತ್ತಿದ್ದ ಯುವತಿಯ ಮೇಲೆ ಮೂವರು ಅಪ್ರಾಪ್ತರು ಸೇರಿ ಒಟ್ಟು ಏಳು ಮಂದಿ ಅತ್ಯಾಚಾರ ಎಸಗಿರುವ ಘಟನೆ ಮಧ್ಯಪ್ರದೇಶದ ಬಿತುಲ್​​ನಲ್ಲಿ ನಡೆದಿದೆ.

ಮೋಟಾರ್​ ಸೈಕಲ್​ ಮೇಲೆ 18 ವರ್ಷದ ಯುವತಿ ಹಾಗೂ ಆಕೆಯ 21 ವರ್ಷದ ಸಹೋದರ ಊರಿಗೆ ಹಿಂತಿರುಗುತ್ತಿದ್ದರು. ಈ ವೇಳೆ ನಡು ರಸ್ತೆಯಲ್ಲಿ ಅವರನ್ನು ಈ ಕೀಚಕರು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ. ರಾತ್ರಿ ಸುಮಾರು 8 ಗಂಟೆಗೆ ಘಟನೆ ನಡೆದಿದ್ದು, ಆಕೆಯ ಮೇಲೆ ಕಾಮುಕರು ಮಧ್ಯರಾತ್ರಿ 2 ಗಂಟೆವರೆಗೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕೃತ್ಯವೆಸಗಿದವರನ್ನು 22 ವರ್ಷದ ಲೋಕೇಶ್​, 24 ವರ್ಷದ ಪವನ್​, 22 ವರ್ಷದ ಶುಭಂ, 23 ವರ್ಷದ ಸಂದೀಪ್​ ಎನ್ನಲಾಗಿದ್ದು, ಮೂವರು ಅಪ್ರಾಪ್ತರ ಹೆಸರುಗಳನ್ನು ಪೊಲೀಸರು ಬಹಿರಂಗಪಡಿಸಿಲ್ಲ.

ಆರೋಪಿಗಳ ವಿರುದ್ಧ ಐಪಿಸಿ ಕಲಂಗಳಾದ 376 (ಅತ್ಯಾಚಾರ), 365 (ಅಪಹರಣ) ಹಾಗೂ 307 (ಕೊಲೆಯತ್ನ)ದಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಈಗಾಗಲೇ ಮೂವರು ಅಪ್ರಾಪ್ತರು ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಇಬ್ಬರು ತಲೆಮರೆಸಿಕೊಂಡಿದ್ದಾರೆ ಎಂದು ಕೋತ್ವಾಲಿ ಪೊಲೀಸ್​ ಠಾಣೆ ವರಿಷ್ಠಾಧಿಕಾರಿ ರಾಜೇಂದ್ರ ದೃವ್​ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.