ಮೇಷ
ಭಾವನಾತ್ಮಕವಾಗಿರುವುದು ಸದಾ ನಿಮ್ಮ ದಾರಿಯಲ್ಲಿದೆ. ವಿಷಯಗಳು ನಿಮ್ಮ ದಾರಿಗೆ ಬರದಿದ್ದರೆ ನೀವು ದುಃಖಿತರಾಗುತ್ತೀರಿ. ಆದರೆ ನಿಮಗೆ ದೇವರು ನೀಡಿರುವುದರಲ್ಲಿ ಸಂತೋಷವಾಗಿದ್ದು ಕೃತಜ್ಞತೆ ಸಲ್ಲಿಸಿ.
ವೃಷಭ
ಇಂದು ನಿಮಗೆ ಹಬ್ಬದ ವಾತಾವರಣ, ಇದನ್ನು ಸಂಭ್ರಮಿಸಿ. ಇಂದು ಯಶಸ್ಸು ನಿಮ್ಮ ಮನೆಬಾಗಿಲು ಬಡಿಯುತ್ತದೆ. ನಿಮ್ಮ ಆಲೋಚನೆಗಳು ಆಶಾವಾದದೊಂದಿಗೆ ಸೇರುತ್ತದೆ. ಇಂದು ನೀವು ಪಾರ್ಟಿ, ಶಾಪಿಂಗ್ ಎಂಜಾಯ್ ಮಾಡುತ್ತೀರಿ.
ಮಿಥುನ
ನಿಮ್ಮ ಸಹೋದ್ಯೋಗಿಗಳೊಂದಿಗೆ ಸಭೆ ಹಾಗೂ ಆತ್ಮೀಯರ ಬೇಡಿಕೆಗಳಿಂದ ನೀವು ಒತ್ತಡಕ್ಕೆ ಒಳಗಾಗಬಹುದು. ಆದರೆ ನೀವು ಎಲ್ಲವನ್ನೂ ಸುಸೂತ್ರವಾಗಿ ನಿಭಾಯಿಸುತ್ತೀರಿ.
ಕರ್ಕಾಟಕ
ನೀವು ಇಡೀ ದಿನವನ್ನು ಗೃಹಕೃತ್ಯಗಳಲ್ಲಿ ಕಳೆಯುತ್ತೀರಿ ಮತ್ತು ಜವಾಬ್ದಾರಿಗಳ ಹೊರೆ ಭಾವಿಸುತ್ತೀರಿ ಕೂಡಾ. ಸಂಜೆಯ ವೇಳೆಗೆ, ನೀವು ಪ್ರೀತಿಪಾತ್ರರಿಗೆ ವಿಶೇಷ ಗಮನ ನೀಡಿ ಪ್ರಭಾವಿಸುತ್ತೀರಿ. ನೀವು ಇತರರನ್ನೂ ಸಂತೋಷಗೊಳಿಸುತ್ತೀರಿ.
ಸಿಂಹ
ನೀವು ಇತರರಿಗೆ ನೆರವು ನೀಡುವ ಮೂಡ್ನಲ್ಲಿದ್ದೀರಿ. ಆದರೆ ನಿಮ್ಮ ಪ್ರಯತ್ನದಲ್ಲಿ ಯಶಸ್ವಿಯಾಗುವುದಿಲ್ಲ. ದಿನದ ನಂತರದಲ್ಲಿ ನಿಮ್ಮ ಅನುಮಾನಗಳು ಕರಗಿ ಹೋಗುತ್ತವೆ ಮತ್ತು ಚಿತ್ರ ಸ್ಪಷ್ಟವಾಗುವುದನ್ನು ಕಾಣುತ್ತೀರಿ. ನೀವು ಇಂದು ಬಯಸಿದ ಫಲಿತಾಂಶಗಳನ್ನು ಪಡೆಯಲು ಹೆಚ್ಚು ಶ್ರಮಿಸಬೇಕು.
ಕನ್ಯಾ
ಕೆಲಸ ಮಾಡುವುದು ಆನಂದ, ನಿಮ್ಮ ಕೆಲಸಗಳನ್ನು ವೇಗವಾಗಿ ಮತ್ತು ಸಮರ್ಥವಾಗಿ ಮುಗಿಸುತ್ತೀರಿ. ಕಥೆಯಲ್ಲಿ ತಿರುವು ಬರಬಹುದು, ಚಿಂತೆ ಬೇಡ, ನಿಮ್ಮ ಪ್ರೀತಿಪಾತ್ರರೊಂದಿಗೆ ಸಮಯ ಕಳೆಯುವುದು ನಿಮ್ಮ ಪ್ರೇಮ ಪ್ರಕರಣವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತದೆ.
ತುಲಾ
ಎಲ್ಲಾ ಸಾಧನೆಗಳೂ ಮುಂಚೆಯೇ ರೂಪಿಸಿದ್ದವು. ಆದ್ದರಿಂದ ನಿಮ್ಮ ಯಶಸ್ಸಿನ ನಕ್ಷೆಯನ್ನು ಇತರರೊಂದಿಗೆ ಇಂದು ಹಂಚಿಕೊಳ್ಳಿ. ನೀವು ಮಧ್ಯಾಹ್ನ ಕೆಲಸದಲ್ಲಿ ವಿಧೇಯ ಮತ್ತು ಸಹಕಾರದಲ್ಲಿರುತ್ತೀರಿ.
ವೃಶ್ಚಿಕ
ನಿಮ್ಮ ಸುತ್ತಲಿನ ಜನರು ನಿಮ್ಮ ಕೌಶಲ್ಯ ಮತ್ತು ಪ್ರತಿಭೆಗಳನ್ನು ಪ್ರಶಂಸೆ ಮಾಡುತ್ತಾರೆ. ಆದರೆ, ನೀವು ಬಯಸಿದ್ದು ಪಡೆಯಲು ಹೆಚ್ಚು ತೆರಬೇಕು. ಅಸಾಧಾರಣ ಬಂಧ ನಿಮ್ಮನ್ನು ಮತ್ತು ನಿಮ್ಮ ಸಂಗಾತಿಯನ್ನು ಒಗ್ಗೂಡಿಸಿದ್ದು ಹಿಂದೆಂದಿಗಿಂತ ಹತ್ತಿರವಾಗಿಸಿದೆ.
ಧನು
ವ್ಯಾಪಾರ ಸಂಬಂಧಿತ ಕೆಲಸದಲ್ಲಿ ಚಲನೆಯಲ್ಲಿರುವುದನ್ನು ನಿರೀಕ್ಷಿಸಿ. ಹಣಕಾಸಿನ ವಿಷಯಗಳು ಮಧ್ಯಾಹ್ನದ ಪ್ರಮುಖ ಸಮಸ್ಯೆಯಾಗುತ್ತದೆ. ತಂಡದ ನಾಯಕರಾಗಿರಿ ಮತ್ತು ನಿಮ್ಮ ಸಹ-ಕೆಲಸಗಾರರ ದಾರಿಯಲ್ಲಿ ಬರುವ ಎಲ್ಲವನ್ನೂ ಹಿಡಿದುಕೊಳ್ಳಿ. ಸಂಜೆಯ ವೇಳೆಗೆ ರೊಮ್ಯಾಂಟಿಕ್ ಬಯಕೆಯಲ್ಲಿ ಉತ್ಸಾಹದಲ್ಲಿರಿ.
ಮಕರ
ನಿಮ್ಮ ಸಂಗಾತಿ ನಿಮಗೆ ಹಲವು ಬಾರಿ ಕೆಲಸಕ್ಕೆ ಹೆಚ್ಚು ಆದ್ಯತೆ ನೀಡಿ ತಮ್ಮ ಕುರಿತು ಕಾಳಜಿ ವಹಿಸುತ್ತಿಲ್ಲ ಎಂದು ದೂರುತ್ತಿರುತ್ತಾರೆ. ಇಂದು ಆತ/ಆಕೆ ಸಂತೋಷದಿಂದ ಇರುತ್ತಾರೆ, ಏಕೆಂದರೆ ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಸಮಯ ಕಳೆಯುತ್ತೀರಿ. ಕೆಲಸದಲ್ಲಿ ವಿಜೇತರಾಗಿರಿ, ನಿಮ್ಮ ಸ್ಪರ್ಧಿಗಳನ್ನು ಮೀರುತ್ತೀರಿ ಮತ್ತು ನಿಮ್ಮ ಬಾಸ್ ಹೊಗಳಿಕೆಗೆ ಪಾತ್ರರಾಗುತ್ತೀರಿ.
ಕುಂಭ
ನೀವು ಅಂತಿಮವಾಗಿ ನಿಮ್ಮ ಹಳೆಯ ಮಿತ್ರರೊಂದಿಗೆ ಸಂಪರ್ಕ ಸಾಧಿಸುತ್ತೀರಿ. ಕೆಲಸದಲ್ಲಿ ನಿಮ್ಮ ಸಾರ್ವಜನಿಕ ಸಂಪರ್ಕ ಕೌಶಲ್ಯಗಳು ದಿಢೀರ್ ಎಂದು ಹೆಚ್ಚಾಗುತ್ತವೆ ಮತ್ತು ನಿಮ್ಮ ವಿರೋಧಿಗಳೂ ನಿಮಗೆ ಸೆಲ್ಯೂಟ್ ಮಾಡುತ್ತಾರೆ. ಸಹಜವಾಗಿ ಅತ್ಯಂತ ಸಂತೋಷ ಹೊಂದಿರುವುದು ನಿಮ್ಮ ಪ್ರೀತಿಪಾತ್ರರು. ಅವರು ನೀವು ಹೇಳಿದ ಎಲ್ಲವನ್ನೂ ಶ್ಲಾಘಿಸುತ್ತಾರೆ. ಕೊನೆಯಾಗುವ ಮೊದಲು ಆನಂದಿಸಿ.
ಮೀನ
ಈ ದಿನ ಕೆಲಸದ ದೃಷ್ಟಿಯಿಂದ ಸಾಕಷ್ಟು ಒತ್ತಡ ತುಂಬಿದೆ. ನಿಮ್ಮ ಅದ್ಭುತ ಬುದ್ಧಿಶಕ್ತಿಯಿಂದ ಮತ್ತು ಮನ ಒಲಿಸುವ ಶಕ್ತಿಯಿಂದ ಸ್ಪರ್ಧಿಗಳಿಗಿಂತ ಮುಂದಿರುತ್ತೀರಿ. ನೀವು ಇಂದು ಪ್ರಾಜೆಕ್ಟ್ಗಳನ್ನು ನಿಭಾಯಿಸುವ ರೀತಿಗೆ ಹಲವು ಪುರಸ್ಕಾರಗಳನ್ನು ಪಡೆಯುತ್ತೀರಿ.