ನವದೆಹಲಿ: ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ಕೇಂದ್ರ ಸರ್ಕಾರ 21ದಿನಗಳ ಲಾಕ್‌ಡೌನ್ ಘೋಷಿಸಿದೆ. ನಿರ್ಬಂಧಗಳನ್ನು ಜನ ಕಟ್ಟುನಿಟ್ಟಾಗಿ ಪಾಲಿಸಬೇಕಾದ ಒತ್ತಡ ಒಂದೆಡೆಯಾದ್ರೆ, ಒಪ್ಪೊತ್ತಿನ ಊಟಕ್ಕೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇದನ್ನು ಮನಗಂಡಿರುವ ಕೇಂದ್ರ ಸರ್ಕಾರ ವೃದ್ಧರು, ದಿವ್ಯಾಂಗರು, ಬಡ ಜನ ಸೇರಿದಂತೆ ಎಲ್ಲಾ ವರ್ಗದವರಿಗೆ ಆರ್ಥಿಕ ಪರಿಹಾರ ಘೋಷಿಸಿ ಆದೇಶ ಹೊರಹಾಕಿದೆ.
ಇದರ ಜೊತೆ ಕೇಸರಿ ನಾಯಕರು, ತಮ್ಮ ಪಕ್ಷದ ಕಾರ್ಯಕರ್ತರು 5 ಕೋಟಿ ಬಡ ಜನರಿಗೆ ಅಗತ್ಯ ಆಹಾರ ನೀಡಬೇಕೆಂದು ಸೂಚಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಬಿಜೆಪಿ ನಡ್ಡಾ ಇವತ್ತು ತಮ್ಮ ನಿವಾಸದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು, ಪೊಲೀಸ್ ಸಿಬ್ಬಂದಿ ಮೂಲಕ ಅಗತ್ಯ ಇರುವವರಿಗೆ ಆಹಾರದ ಪೊಟ್ಟಣಗಳನ್ನು ನೀಡಿದ್ದಾರೆ.
ಬಳಿಕ ಮಾತನಾಡಿಗ ಜೆಪಿ ನಡ್ಡಾ, ಪ್ರಧಾನಿ ನರೇಂದ್ರ ಮೋದಿ ಅವರ ಮನವಿ ಮೇರೆಗೆ 1 ಕೋಟಿ ಬಿಜೆಪಿ ಕಾರ್ಯಕರ್ತರು ಪ್ರತಿದಿನ ತಲಾ 5 ಪ್ಯಾಕೆಟ್ ಆಹಾರದ ಪೊಟ್ಟಣಗಳನ್ನು ವಿತರಣೆ ಮಾಡುತ್ತಾರೆ. ಈವೊಂದು ಕಾರ್ಯ ಇಂದಿನಿಂದ ಆರಂಭವಾಗಿದೆ. ಪೊಲೀಸರ ಮೂಲಕ 10 ಊಟದ ಪೊಟ್ಟಣಗಳನ್ನು ನಾನು ನೀಡಿದ್ದೇನೆ ಅಂತ ಹೇಳಿದ್ದಾರೆ.