ಲಖನೌ : ಅಪರ್ಣಾ ಯಾದವ್ ಬಿಜೆಪಿ ಸೇರಿದ ಕೆಲವೇ ಗಂಟೆಗಳಲ್ಲಿ ಪಕ್ಷವು ಮಹಿಳಾ ಭದ್ರತೆಯನ್ನು ಕೇಂದ್ರೀಕರಿಸುವ ಹೊಸ ಪೋಸ್ಟರ್ವೊಂದನ್ನು ಬಿಡುಗಡೆಗೊಳಿಸಿದೆ.
'ಸುರಕ್ಷಾ ಚಕ್ರ' ಶೀರ್ಷಿಕೆಯ ಪೋಸ್ಟರ್‌ನಲ್ಲಿ ಅಪರ್ಣಾ ಯಾದವ್ ಮತ್ತು ಬಿಜೆಪಿ ಎಂಪಿ ಸಂಘಮಿತ್ರ ಮೌರ್ಯ ಕಾಣಿಸಿಕೊಂಡಿದ್ದಾರೆ. ಅವರ ತಂದೆ ಸ್ವಾಮಿ ಪ್ರಸಾದ್ ಮೌರ್ಯ ಅವರು ಇತ್ತೀಚೆಗೆ ಬಿಜೆಪಿ ತೊರೆದು ಸಮಾಜವಾದಿ ಪಕ್ಷಕ್ಕೆ ಸೇರಿದ್ದಾರೆ. 'ಸುರಕ್ಷಾ ಜಹಾ, ಬೇಟಿಯಾ ವಹಾ' (ಸುರಕ್ಷತೆ ಎಲ್ಲಿಯೋ, ಹೆಣ್ಣುಮಕ್ಕಳು ಅಲ್ಲೇ) ಎಂದು ಶೀರ್ಷಿಕೆ ಬರೆಯಲಾಗಿದೆ.
ಓದಿ: ಜನರಿಗೆ ಕಷ್ಟ ಕೊಡುವುದು ನಮ್ಮ ಉದ್ದೇಶವಲ್ಲ, ವೀಕೆಂಡ್ ಕರ್ಫ್ಯೂ ವಿನಾಯಿತಿ ಬಗ್ಗೆ ನಾಳೆ ನಿರ್ಧಾರ : ಸುಧಾಕರ್
ಈ ಪೋಸ್ಟರ್ ಅನ್ನು ಪ್ರಿಯಾಂಕಾ ಗಾಂಧಿ ವಾದ್ರಾ ಅವರ 'ಲಡ್ಕಿ ಹೂ, ಲಡ್ ಸಕ್ತಿ ಹೂ' ಎಂಬ ಕಾಂಗ್ರೆಸ್ ಪ್ರಚಾರಕ್ಕೆ ಪ್ರತಿಯಾಗಿ ಬಿಂಬಿಸಲಾಗಿದೆ. ಇದೇ ವೇಳೆ ಬಿಜೆಪಿ ಸಂಸದೆ ಸಂಘಮಿತ್ರ ಮೌರ್ಯ, ತನ್ನ ತಂದೆ ಎಸ್‌ಪಿಗೆ ಪಕ್ಷಾಂತರ ಆಗಿದಕ್ಕೆ ಆಕೆಯನ್ನು ಟ್ರೋಲ್ ಮಾಡುತ್ತಿರುವವರ ವಿರುದ್ಧ ವಾಗ್ದಾಳಿ ನಡೆಸಿದರು.
ಟ್ವೀಟ್‌ನಲ್ಲಿ, ಸಂಸ್ಕಾರ ಎಂಬುದು ಒಳ್ಳೆಯ ಪದ. ಆದರೆ ಅದು ಯಾರ ಬಳಿ ಇದೆ?. ವಾರದ ಹಿಂದೆ ತಂದೆ ಪಕ್ಷ ಬದಲಾಯಿಸಿದರು. ಮಗಳನ್ನು ಹೊಡೆದರು, ಇಂದು ಸೊಸೆ ಪಕ್ಷ ಬದಲಾಯಿಸಿದ್ದಾರೆ. ಅವಳನ್ನು ಸ್ವಾಗತಿಸಲಾಗುತ್ತಿದೆ. ಮಗಳು ಹಿಂದುಳಿದ ಜಾತಿಗೆ ಸೇರಿದವಳು ಮತ್ತು ಸೊಸೆ ಮೇಲ್ಜಾತಿಯವಳು ಎಂಬುದಕ್ಕೆ ಇದನ್ನು ಜೋಡಿಸಬೇಕೇ ಎಂದು ಪ್ರಶ್ನಿಸಿದ್ದಾರೆ.