ETV Bharat / bharat

ತೈಲ ಬೆಲೆ ಏರಿಕೆ: ಪತ್ರಕರ್ತನ ಮೇಲೆ ಬಾಬಾ ರಾಮ್​ದೇವ್​ ಸಿಟ್ಟಾಗಿದ್ದೇಕೆ? ವಿಡಿಯೋ ನೋಡಿ

ತೈಲ ಬೆಲೆ ಕಡಿಮೆ ಇದ್ದರೆ, ತೆರಿಗೆ ಸಿಗಲ್ಲ ಎಂದು ಸರ್ಕಾರ ಹೇಳುತ್ತದೆ. ತೆರಿಗೆ ಸಂಗ್ರಹವಾಗದೇ ಹೋದರೆ ಅವರು ದೇಶವನ್ನು ಹೇಗೆ ನಡೆಸಬೇಕು?, ನೌಕರರ ಸಂಬಳ ಹೇಗೆ ಭರಿಸಬೇಕು?. ರಸ್ತೆಗಳನ್ನು ಹೇಗೆ ನಿರ್ಮಿಸಬೇಕು ಎಂದೂ ಬಾಬಾ ರಾಮ್​ದೇವ್ ಮರು ಪ್ರಶ್ನಿಸಿದರು.

ಯೋಗ ಗುರು ಬಾಬಾ ರಾಮ್​ದೇವ್
Yoga Guru Baba Ramdev
author img

By

Published : Mar 31, 2022, 3:51 PM IST

ಕರ್ನಾಲ್‌(ಹರಿಯಾಣ): ತೈಲ ಬೆಲೆ ಏರಿಕೆ ಸಂಬಂಧ ಪ್ರಶ್ನಿಸಿದ ಪತ್ರಕರ್ತನ ಮೇಲೆ ಯೋಗ ಗುರು ಬಾಬಾ ರಾಮ್​ದೇವ್​ ಸಿಟ್ಟಾಗಿರುವ ಘಟನೆ ಬುಧವಾರ ಹರಿಯಾಣದ ಕರ್ನಾಲ್​ನಲ್ಲಿ ನಡೆದಿದೆ. 'ಸುಮ್ಮನೆ ಇರಿ. ಮತ್ತೆ ಅದನ್ನೇ ಕೇಳಿದರೆ ಸರಿ ಇರಲ್ಲ' ಎಂದು ಅವರು​ ಎಚ್ಚರಿಕೆ ನೀಡಿದ ಪ್ರಸಂಗವೂ ನಡೆಯಿತು.

ಕರ್ನಾಲ್​ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಾಬಾ ರಾಮ್​ದೇವ್ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಅವರನ್ನು ಪತ್ರಕರ್ತರು ಭೇಟಿ ಮಾಡಿದರು. ಆಗ ತೈಲ ಬೆಲೆ ಕುರಿತಾಗಿ, ಪ್ರತಿ ಲೀಟರ್‌ ಪೆಟ್ರೋಲ್​ಗೆ 40 ರೂ. ಮತ್ತು ಅಡುಗೆ ಅನಿಲ್​ ಸಿಲಿಂಡರ್​​ ಅನ್ನು 300 ರೂ.ಗೆ ನೀಡುವ ಬಗ್ಗೆ ಕೇಂದ್ರ ಸರ್ಕಾರ ಖಾತ್ರಿ ಪಡಿಸಬೇಕೆಂದು ಈ ಹಿಂದೆ ಖುದ್ದು ಬಾಬಾ ರಾಮ್​ದೇವ್ ಅವರೇ ನೀಡಿದ್ದ ಸಲಹೆ ಬಗ್ಗೆ ಪರ್ತಕರ್ತರೊಬ್ಬರು ಕೇಳಿದರು.

ಅಲ್ಲದೇ, ನಿಮ್ಮ ಈ ಹಿಂದಿನ ಸಲಹೆಯನ್ನು ಸರ್ಕಾರವನ್ನು ಪರಿಗಣಿಸಬೇಕೇ? ಎಂದೂ ಆ ಪತ್ರಕರ್ತ ಪ್ರಶ್ನಿಸಿದರು. ಇದಕ್ಕೆ 'ಹೌದು, ನಾನು ಹೇಳಿದ್ದೆ. ಇಂತಹ ಪ್ರಶ್ನೆಗಳನ್ನೀಗ ಕೇಳಬೇಡಿ. ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು ನಾನೇನು ನಿಮ್ಮ ಗುತ್ತಿಗೆದಾರನೇ?' ಎಂದು ರಾಮ್​ದೇವ್​ ಗರಂ ಆಗರು. ಅಷ್ಟೇ ಅಲ್ಲ, ಮತ್ತೆ ಅದೇ ಪ್ರಶ್ನೆಯನ್ನು ಕೇಳಿದಾಗ, 'ನಾನು ಈಗಾಗಲೇ ಹೇಳಿದ್ದೇನೆ. ಸುಮ್ಮನಿರಿ. ಮತ್ತೆ ನೀವು ಇದನ್ನೇ ಕೇಳಿದರೆ ಸರಿ ಇರಲ್ಲ. ಇಂತಹದ್ದನ್ನೆಲ್ಲ ಮಾತನಾಡಬೇಡಿ. ಸಭ್ಯ ತಂದೆ-ತಾಯಿಗಳ ಮಕ್ಕಳಂತೆ ವರ್ತಿಸಿ' ತಾಕೀತು ಮಾಡಿದರು.

  • Yoga Guru Ramdev was seen on camera losing his cool and threatening a journalist, who asked him about his comments in the past on reducing petrol price. @ndtv pic.twitter.com/kHYUs49umx

    — Mohammad Ghazali (@ghazalimohammad) March 30, 2022 " class="align-text-top noRightClick twitterSection" data=" ">

'ದೇಶ ಹೇಗೆ ನಡೆಸಬೇಕು?': ಇದೇ ವೇಳೆ ಬಾಬಾ ರಾಮ್​ದೇವ್​, ಇಂತಹ ಕಠಿಣ ಸಮಯದಲ್ಲಿ ಶ್ರಮಿಜೀವಿಗಳಾಗಿ ಎಂದು ಜನರಿಗೆ ಕರೆ ಕೊಟ್ಟಿದ್ದಾರೆ. 'ತೈಲ ಬೆಲೆ ಕಡಿಮೆ ಇದ್ದರೆ, ತೆರಿಗೆ ಸಿಗಲ್ಲ ಎಂದು ಸರ್ಕಾರ ಹೇಳುತ್ತದೆ. ತೆರಿಗೆ ಸಂಗ್ರಹವಾಗದೇ ಹೋದರೆ ಅವರು ದೇಶವನ್ನು ಹೇಗೆ ನಡೆಸಬೇಕು?, ನೌಕರರ ಸಂಬಳ ಹೇಗೆ ಭರಿಸಬೇಕು?. ರಸ್ತೆಗಳನ್ನು ಹೇಗೆ ನಿರ್ಮಿಸಬೇಕು' ಎಂದೂ ಪ್ರಶ್ನಿಸಿದರು.

ಇದರ ಜೊತೆಗೆ, 'ನಿಜ, ಹಣದುಬ್ಬರ ಕಡಿಮೆಯಾಗಬೇಕೆಂದು ಅನ್ನೋದನ್ನು ನಾನೂ ಒಪ್ಪುತ್ತೇನೆ. ಆದರೆ, ಜನತೆ ಕಠಿಣವಾಗಿ ಶ್ರಮ ಪಡಬೇಕು. ನಾನು ಬೆಳಗಿನ ಜಾವ 4 ಗಂಟೆಗೆ ಎದ್ದು, ರಾತ್ರಿ 10ರವರೆಗೆ ಕೆಲಸ ಮಾಡುತ್ತೇನೆ ಎಂದು ಹೇಳಿದರು. ಈ ವೇಳೆ ಅವರ ಸುತ್ತಲೂ ಇದ್ದ ಬೆಂಬಲಿಗರು ಚಪ್ಪಾಳೆ ಬಾರಿಸಿದರು. ಇದೆಲ್ಲವೂ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್​ ಆಗುತ್ತಿದೆ.

ಇದನ್ನೂ ಓದಿ: ನೆರವಿಗೆ ಬಂದ ಆತ್ಮರಕ್ಷಣೆ ಕಲೆ.. ತಡರಾತ್ರಿ ಮನೆಗೆ ನುಗ್ಗಿದ ದರೋಡೆಕೋರರನ್ನು ಹಿಮ್ಮೆಟ್ಟಿಸಿದ ಯುವತಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.