ಕೊಚ್ಚಿ(ಕೇರಳ): ದೇವರನಾಡು ಕೇರಳದಲ್ಲಿ ನಡೆಯುವ ಸಾಂಪ್ರದಾಯಿಕ ಹಬ್ಬವಾದ ಓಣಂ ಪ್ರಯುಕ್ತ ಆಯೋಜನೆಗೊಂಡಿದ್ದ ಬಂಪರ್ ಲಾಟರಿಯಲ್ಲಿ ಆಟೋ ರಿಕ್ಷಾ ಚಾಲಕನಿಗೆ ಜಾಕ್ಪಾಟ್ ಹೊಡೆದಿದ್ದು, ಬರೋಬ್ಬರಿ 12 ಕೋಟಿ ರೂ. ಗೆದ್ದಿದ್ದಾರೆ.
ಕೇರಳದ ಮರಡು ಮೂಲಕ ಆಟೋ ರಿಕ್ಷಾ ಚಾಲಕ ಜಯಪಾಲನ್ TE 645465 ಸಂಖ್ಯೆಯ ಟಿಕೆಟ್ ಖರೀದಿ ಮಾಡಿದ್ದರು. ಇದೀಗ ಫಲಿತಾಂಶ ಪ್ರಕಟಗೊಂಡಿದ್ದು, ಈ ಟಿಕೆಟ್ಗೆ 12 ಕೋಟಿ ರೂ ಬಂದಿದೆ.
ಇದನ್ನೂ ಓದಿ: 'ಜೋಡಿ ಯೋಗ'ದೊಂದಿಗೆ ನಿಮ್ಮ ಸಂಗಾತಿಗೆ ಹೆಚ್ಚು ಆತ್ಮೀಯರಾಗಿ..
ಟಿಕೆಟ್ಗೆ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆ ಮಾತನಾಡಿರುವ ಜಯಪಾಲನ್, ಸೆಪ್ಟೆಂಬರ್ 10ರಂದು ಫ್ಯಾನ್ಸಿ ನಂಬರ್ ಎಂದು ತಾವು ಟಿಕೆಟ್ ಖರೀದಿ ಮಾಡಿರುವುದಾಗಿ ತಿಳಿಸಿದ್ದಾರೆ. ಬಹುಮಾನ ಘೋಷಣೆಯಾಗುತ್ತಿದ್ದಂತೆ ಕೆನರಾ ಬ್ಯಾಂಕಿನ ಕೊಚ್ಚಿ ಶಾಖೆಗೆ ಟಿಕೆಟ್ ಸಲ್ಲಿಕೆ ಮಾಡಿದ್ದಾರೆ. ಇದೀಗ ಅವರಿಗೆ ತೆರಿಗೆ ಕಡಿತಗೊಂಡು 7.56 ಕೋಟಿ ರೂ. ಸಿಗಲಿದೆ. ಓಣಂ ಹಬ್ಬದ ಬಂಪರ್ ಲಾಟರಿ ನಡೆಸಲಾಗುತ್ತಿದ್ದು, ಒಟ್ಟು 54 ಲಕ್ಷ ಲಾಟರಿ ಟಿಕೆಟ್ ಮಾರಾಟವಾಗಿವೆ ಎಂದು ತಿಳಿದು ಬಂದಿದೆ.