ETV Bharat / bharat

ಗ್ರಾಹಕರ ಗಮನಕ್ಕೆ: ಇಂದಿನಿಂದ ಎಟಿಎಂ ವಿನಿಮಯ ಶುಲ್ಕ ಹೆಚ್ಚಳ

ಈಗಾಗಲೇ ಜನಸಾಮಾನ್ಯರು ಕೊರೊನಾದಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಬೆನ್ನಲ್ಲೇ ಭಾರತೀಯ ರಿಸರ್ವ್ ಬ್ಯಾಂಕ್(RBI) ಎಟಿಎಂ ವಿನಿಮಯ ಶುಲ್ಕ ಹೆಚ್ಚಳ ಮಾಡಿದ್ದು ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.​

ATM cash
ATM cash
author img

By

Published : Aug 1, 2021, 9:25 AM IST

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಸೂಚನೆ ಮೇರೆಗೆ ಇಂದಿನಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲವು ಹೊಸ ಬದಲಾವಣೆಗಳನ್ನು ಜಾರಿಗೆ ತರಲಾಗುತ್ತಿದೆ.

ಜೂನ್‌ನಲ್ಲಿ ಎಟಿಎಂ ನಗದು ಹಿಂಪಡೆಯುವಿಕೆಯ ವಿನಿಮಯ ಶುಲ್ಕಗಳ ಮೇಲೆ ಹೊಸ ಬದಲಾವಣೆ ಮಾಡಲಾಗಿತ್ತು. ಇಂಟರ್ಚೇಂಜ್ ವಹಿವಾಟು ಶುಲ್ಕವನ್ನು ₹15 ರಿಂದ ₹17ಕ್ಕೆ ಹೆಚ್ಚಿಸಲಾಗಿತ್ತು. ಇದರ ಜೊತೆಗೆ, ಹಣಕಾಸೇತರ ವ್ಯವಹಾರಗಳ ಶುಲ್ಕವನ್ನು 5 ರೂ. ಯಿಂದ 6 ರೂ.ಗೆ ಏರಿಸಿ ಆದೇಶ ಹೊರಡಿಸಲಾಗಿತ್ತು. ಈ ಬದಲಾವಣೆಯು ಇಂದಿನಿಂದ ಜಾರಿಗೆ ಬರಲಿದೆ.
ಹೊಸ ನಿಯಮ ಹೀಗಿದೆ..

1. ಬೇರೆ ಬ್ಯಾಂಕಿನ ಎಟಿಎಂ ಮೂಲಕ ಮಾಡುವ ಪ್ರತಿಯೊಂದು ಹಣಕಾಸು ವಹಿವಾಟಿನಲ್ಲೂ ಎಟಿಎಂ ಇಂಟರ್ಚೇಂಜ್ ಶುಲ್ಕವನ್ನು 15 ರಿಂದ 17 ರೂ.ಗೆ ಹೆಚ್ಚಿಸಿದೆ.

2. ಯಾವುದೇ ಬ್ಯಾಂಕಿನ ಗ್ರಾಹಕರು ಪ್ರತಿ ತಿಂಗಳು ಸ್ವೀಕರಿಸುವ ಉಚಿತ ಎಟಿಎಂ ವಹಿವಾಟಿನ ನಂತರ ಗ್ರಾಹಕರ ಮೇಲೆ ವಿಧಿಸುವ ಗ್ರಾಹಕ ಶುಲ್ಕದ ಗರಿಷ್ಠ ಮಿತಿಯನ್ನು ಹೆಚ್ಚಿಸಲಾಗಿದೆ.

3. ಬ್ಯಾಂಕ್ ಗ್ರಾಹಕರು ಪ್ರತಿ ತಿಂಗಳು ಎಟಿಎಂನಿಂದ 5 ಉಚಿತ ವಹಿವಾಟುಗಳನ್ನು ಮಾಡಬಹುದು. ಇನ್ನೊಂದು ಬ್ಯಾಂಕಿನ ಎಟಿಎಂನಿಂದ 5 ಕ್ಕಿಂತಲೂ ಹೆಚ್ಚಿನ ಬಾರಿ ಹಣ ತೆಗೆದರೆ ಇಂಟರ್‌ಚೇಂಜ್‌ ಶುಲ್ಕ ಅನ್ವಯವಾಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.