ETV Bharat / bharat

ಅತೀಕ್, ಅಶ್ರಫ್ ಹತ್ಯೆ ಪ್ರಕರಣ: ವಿಡಿಯೋ ಜರ್ನಲಿಸ್ಟ್‌ಗಳಂತೆ ನಟಿಸಲು ಸಹಾಯ ಮಾಡಿದವರು ಅರೆಸ್ಟ್​​

ಅತೀಕ್​ ಅಹ್ಮದ್​​ ಹತ್ಯೆಯ ಆರೋಪಿಗಳಿಗೆ ಸಹಾಯ ಮಾಡಿದ ಮೂವರನ್ನು ಉತ್ತರಪ್ರದೇಶದ ಪೊಲೀಸರು ಬಂಧಿಸಿದ್ದು, ವಿಚಾರಣೆ ಚುರುಕುಗೊಂಡಿದೆ.

Atiq, Ashraf murder case
ಅತೀಕ್, ಅಶ್ರಫ್ ಹತ್ಯೆ ಪ್ರಕರಣ
author img

By

Published : Apr 20, 2023, 4:09 PM IST

ಬಂದಾ (ಉತ್ತರ ಪ್ರದೇಶ): ಅತೀಕ್, ಅಶ್ರಫ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳು ಮತ್ತು ಆತನ ಸಹೋದರ ಪತ್ರಕರ್ತರಂತೆ ನಟಿಸಲು ಸಹಾಯ ಮಾಡಿದ ಮೂವರನ್ನು ವಿಶೇಷ ತನಿಖಾ ತಂಡ ಬಂಧಿಸಿದೆ. ಸ್ಥಳೀಯ ಸುದ್ದಿ ಮಾಧ್ಯಮವೊಂದರಲ್ಲಿ ಕೆಲಸ ಮಾಡುವ ಬಂಧಿತ ಮೂವರು ಆರೋಪಿಗಳಿಗೆ ವರದಿ ಮಾಡುವ ಕುರಿತಂತೆ ತರಬೇತಿ ನೀಡಿದ್ದರು. ಜೊತೆಗೆ ಕ್ಯಾಮರಾ ಖರೀದಿಸಲು ಸಹಾಯ ಮಾಡಿದ್ದಾರೆ. ಈ ಪ್ರಮುಖ ಆರೋಪಿಗಳು, ಅತೀಕ್ ಹಾಗೂ ಅಶ್ರಫ್​ ಅವರನ್ನು ಹತ್ತಾರು ಪೊಲೀಸರು ಹಾಗೂ ಟಿವಿ ಕ್ಯಾಮೆರಾಗಳ ಮುಂದೆ ಕೊಲ್ಲುವ ಮುನ್ನವೇ ಇಡೀ ದಿನ ಪತ್ರಕರ್ತರಂತೆ ನಟಿಸಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ.

ಪೊಲೀಸರು ಹೇಳಿದ್ದೇನು?: ಪೊಲೀಸ್ ಮೂಲಗಳ ಪ್ರಕಾರ, ಮೂವರು ಆರೋಪಿಗಳು ವಿಡಿಯೋ ಜರ್ನಲಿಸ್ಟ್‌ಗಳಂತೆ ಒಂದು ಘಟಕವಾಗಿ ಹೇಗೆ ಕೆಲಸ ಮಾಡಬೇಕೆಂದು ಮೂವರಿಗೆ ತರಬೇತಿ ನೀಡಿದ್ದಾರೆ. ಬುಧವಾರ ಬಂಧಿತ ಮೂವರು ಲವ್ಲೇಶ್ ಮತ್ತು ಅವರ ಒಡನಾಡಿಗೆ ವಿಡಿಯೋ ಕ್ಯಾಮರಾ ಮತ್ತು ಮಾಧ್ಯಮ ಘಟಕದಂತೆ ನಟಿಸಲು ಅಗತ್ಯವಿರುವ ಇತರ ತಾಂತ್ರಿಕ ಸಾಧನಗಳನ್ನು ಖರೀದಿಸಲು ಸಹಾಯ ಮಾಡಿದ್ದರು. ಬಂದಾ ರೈಲು ನಿಲ್ದಾಣದಲ್ಲಿ ಈ ಮೂವರು ಸಿಕ್ಕಿಬಿದ್ದಿದ್ದಾರೆ. ಎಸ್‌ಐಟಿ ತಂಡಗಳು ಹಮೀರ್‌ಪುರ ಮತ್ತು ಕಾಸ್‌ಗಂಜ್‌ಗೆ ತೆರಳಿ ಹೆಚ್ಚಿನ ಸಾಕ್ಷ್ಯಾಧಾರಗಳು ಮತ್ತು ಪ್ರಾಸಿಕ್ಯೂಷನ್‌ಗೆ ಅಗತ್ಯವಾದ ಮಾಹಿತಿಯನ್ನು ಸಂಗ್ರಹಿಸಿವೆ.

ಹತ್ಯೆ ಆರೋಪಿಗಳನ್ನ ಈ ಮೊದಲೇ ಬಂಧಿಸಿದ್ದ ಪೊಲೀಸರು: ಅತೀಕ್, ಅಶ್ರಫ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರನ್ನು ಬಂಧಿಸಲಾಗಿತ್ತು. ಅವರನ್ನು ಅರುಣ್ ಮೌರ್ಯ, ಸನ್ನಿ ಸಿಂಗ್ ಮತ್ತು ಲವ್ಲೇಶ್ ತಿವಾರಿ ಎಂದು ಗುರುತಿಸಲಾಗಿದೆ. ಮೂವರೂ ದಾಳಿಕೋರರು ಅತಿಕ್ ಮತ್ತು ಅವನ ಸಹೋದರನನ್ನು ವಿಡಿಯೋ ಜರ್ನಲಿಸ್ಟ್​ಗಳ ಸೋಗಿನಲ್ಲಿ ಬಂದು ಗುಂಡಿನ ದಾಳಿ ನಡೆಸಿದ್ದರು. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿರುವ ಸಿಜೆಎಂ ನ್ಯಾಯಾಲಯ ಬುಧವಾರ, ಈ ಹತ್ಯೆ ಪ್ರಕರಣದ ಆರೋಪಿಗಳನ್ನು ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಪೊಲೀಸ್​ ಕಸ್ಟಡಿಯಲ್ಲಿದ್ದಾರೆ ಆರೋಪಿಗಳು: ಮೂವರು ಆರೋಪಿಗಳನ್ನು ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ಎಸ್‌ಐಟಿ ಸಲ್ಲಿಸಿದ ಅರ್ಜಿಯ ಮೇರೆಗೆ ಕೋರ್ಟ್​ ಕಸ್ಟಡಿಗೆ ನೀಡಲಾಗಿದೆ. ಈ ಹಿಂದೆ ಏಪ್ರಿಲ್ 16 ರಂದು ಜಿಲ್ಲಾ ನ್ಯಾಯಾಲಯ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತ್ತು. ಪೊಲೀಸ್ ವಿಚಾರಣೆ ವೇಳೆ, ಆರೋಪಿಗಳು ಹತ್ಯೆ ಮಾಡಲು ಬಳಸಿದ ಆಯುಧ ಮತ್ತು ಆ ಶಸ್ತ್ರಾಸ್ತ್ರಗಳನ್ನು ಹೇಗೆ ಪಡೆದರು ಎಂಬುದರ ಕುರಿತು ಮಾಹಿತಿ ಕಲೆಹಾಕಿದ್ದಾರೆ.

ನಾಪತ್ತೆಯಾದ ಅತೀಕ್ ಪತ್ನಿ ಶೈಸ್ತಾ ಪರ್ವೀನ್: ಬುಧವಾರ, ಯುಪಿ ಪೊಲೀಸರು ಕೌಶಂಬಿಯಲ್ಲಿ ಕೊಲೆಯಾದ ಅತೀಕ್ ಅಹ್ಮದ್ ಅವರ ಪತ್ನಿ ಶೈಸ್ತಾ ಪರ್ವೀನ್ ಅವರನ್ನು ಪತ್ತೆ ಮಾಡುವ ಪ್ರಯತ್ನದಲ್ಲಿ ಅನೇಕ ಸ್ಥಳಗಳಲ್ಲಿ ದಾಳಿ ನಡೆಸಿದರು. ''ದರೋಡೆಕೋರ ಅತೀಕ್ ಅಹ್ಮದ್ ಅವರ ಪತ್ನಿ ಶೈಸ್ತಾ ಪರ್ವೀನ್ ಅವರ ಹುಡುಕಾಟದ ಹಿನ್ನೆಲೆ ವಿವಿಧೆ ದಾಳಿ ಮಾಡಲಾಗಿದೆ. ಇನ್ನೂ ಕೆಲವು ಕ್ರಿಮಿನಲ್​ಗಳು ಅಡಗಿರುವ ಬಗ್ಗೆ ಮಾಹಿತಿ ಪಡೆದ ನಂತರ, ಶೋಧ ಕಾರ್ಯಾಚರಣೆ ನಡೆಸಲಾಯಿತು. ಸುಮಾರು 2 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಲಾಗಿದೆ. ಕಾರ್ಯಾಚರಣೆಯಲ್ಲಿ ಡ್ರೋನ್ ಕ್ಯಾಮೆರಾವನ್ನು ಸಹ ಬಳಸಲಾಯಿತು. ಆದರೆ, ಕಾರ್ಯಾಚರಣೆ ಇಂದು ಯಶಸ್ವಿಯಾಗಲಿಲ್ಲ'' ಎಂದು ಕೌಶಂಬಿ ಎಸ್‌ಎಪಿ ಸಮರ್ ಬಹದ್ದೂರ್ ಹೇಳಿದ್ದಾರೆ.

ಇಲ್ಲಿಯವರೆಗೆ ನಡೆದ ಘಟನಾವಳಿಗಳೇನು?: ಅತೀಕ್ ಅಹ್ಮದ್ ಅವರ ಪುತ್ರ ಅಸದ್ ಈ ಹಿಂದೆ ಝಾನ್ಸಿಯಲ್ಲಿ ನಡೆದ ಎನ್​ಕೌಂಟರ್​ನಲ್ಲಿ ಹತರಾಗಿದ್ದರು. ಕೆಲವು ದಿನಗಳ ನಂತರ, ಮಾಫಿಯಾ -ರಾಜಕಾರಣಿ ಮತ್ತು ಅವನ ಸಹೋದರನನ್ನು ಏಪ್ರಿಲ್ 15ರಂದು ವೈದ್ಯಕೀಯ ಪರೀಕ್ಷೆಗಾಗಿ ಪ್ರಯಾಗ್‌ರಾಜ್‌ಗೆ ಕರೆದೊಯ್ಯುವಾಗ ಮಾಧ್ಯಮದ ಸಂಪೂರ್ಣ ಪ್ರಜ್ವಲಿಸುವಿಕೆಯಲ್ಲಿ ಕೊಲ್ಲಲಾಯಿತು. 2005ರಲ್ಲಿ ನಡೆದ ಬಿಎಸ್‌ಪಿ ಶಾಸಕ ರಾಜು ಪಾಲ್‌ ಹತ್ಯೆ ಪ್ರಕರಣದಲ್ಲಿ ಅತೀಕ್‌ ಆರೋಪಿಯಾಗಿದ್ದ. ಈ ವರ್ಷದ ಫೆಬ್ರವರಿಯಲ್ಲಿ ಬಿಎಸ್‌ಪಿ ನಾಯಕನ ಹತ್ಯೆಯ ಪ್ರಮುಖ ಸಾಕ್ಷಿ ಉಮೇಶ್‌ ಪಾಲ್‌ನ ಹತ್ಯೆಗೆ ಸಂಬಂಧಿಸಿದಂತೆ ಯುಪಿ ಪೊಲೀಸರು ಆತನನ್ನು ಬಂಧಿಸಿದ್ದರು.

ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಅಮೃತ್​ಪಾಲ್​ ಸಿಂಗ್​ ಪತ್ನಿ ಪೊಲೀಸ್​ ವಶಕ್ಕೆ: ಲಂಡನ್​ಗೆ ಪರಾರಿ ಯತ್ನ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.