ETV Bharat / bharat

ಅಫ್ಘಾನಿಸ್ತಾನದಲ್ಲಿ ಭೂಕಂಪನಕ್ಕೆ 12 ಬಲಿ.. ರಿಕ್ಟರ್​ ಮಾಪಕದಲ್ಲಿ 5.6 ತೀವ್ರತೆ ದಾಖಲು - ಅಫ್ಘಾನಿಸ್ತಾನದಲ್ಲಿ ಭೂಕಂಪನ

ತಾಲಿಬಾನ್​ ಸರ್ಕಾರದ ಕ್ರೌರ್ಯಕ್ಕೆ ನಲುಗಿರುವ ಆಫ್ಘನ್​ ಜನರಿಗೆ ಮತ್ತೊಂದು ಆಘಾತ ಉಂಟಾಗಿದೆ. ದೇಶದಲ್ಲಿ ಭಾರಿ ಭೂಕಂಪನ ಸಂಭವಿಸಿದೆ. ಯುಎಸ್ ಜಿಯೋಲಾಜಿಕಲ್ ಸರ್ವೆ ಪ್ರಕಾರ ಭೂಕಂಪದ ತೀವ್ರತೆ 5.3 ಆಗಿತ್ತು. ಆದರೆ, ಅದು 5.6 ಎಂದು ರಿಕ್ಟರ್​ ಮಾಪಕದಲ್ಲಿ ದಾಖಲಾಗಿದೆ.

afghanistan-earthquake
ಅಫ್ಘಾನಿಸ್ತಾನದಲ್ಲಿ ಭೂಕಂಪನ
author img

By

Published : Jan 17, 2022, 9:49 PM IST

ಹೆರಾತ್​(ಅಫ್ಘಾನಿಸ್ತಾನ್​): ಅಫ್ಘಾನಿಸ್ತಾನ ಜನಕ್ಕೆ ತಾಲಿಬಾನ್​ಗಳಷ್ಟೇ ಅಲ್ಲದೆ, ನಿಸರ್ಗವೂ ಶಾಕ್​ ನೀಡಿದೆ. ಪ್ರಜಾಪ್ರಭುತ್ವ ಸರ್ಕಾರವನ್ನು ಬೀಳಿಸಿದ ತಾಲಿಬಾನಿಗಳು ರಕ್ಕಸ ಆಡಳಿತ ನಡೆಸುತ್ತಿದ್ದರೆ, ಇಂದು ಭಾರಿ ತೀವ್ರತೆಯ ಭೂಕಂಪನ ಸಂಭವಿಸಿದ ಪರಿಣಾಮ 12 ಜನರು ಮೃತಪಟ್ಟಿದ್ದಾರೆ.

ಪಶ್ಚಿಮ ಪ್ರಾಂತ್ಯದ ಬದ್ಸ್‌​ಗೀಸ್​ನ ಖಾದಿಸ್ ಜಿಲ್ಲೆಯಲ್ಲಿ 5.6 ತೀವ್ರತೆಯ ಭೂಕಂಪನ ಉಂಟಾಗಿದೆ. ಇದರಿಂದ ಮನೆಗಳ ಮೇಲ್ಚಾವಣಿ ಕುಸಿದ ಘಟನೆಗಳಲ್ಲಿ 12 ಮಂದಿ ಪ್ರಕೃತಿ ವಿಕೋಪಕ್ಕೆ ಬಲಿಯಾಗಿದ್ದಾರೆ. ಅಲ್ಲದೇ ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಜಿಲ್ಲಾ ಗವರ್ನರ್ ಮೊಹಮ್ಮದ್ ಸಲೇಹ್ ಪುರ್​ಡೆಲ್​ ತಿಳಿಸಿದ್ದಾರೆ.

ಯುಎಸ್ ಜಿಯೋಲಾಜಿಕಲ್ ಸರ್ವೆ ಪ್ರಕಾರ ಭೂಕಂಪದ ತೀವ್ರತೆ 5.3 ಆಗಿತ್ತು. ಆದರೆ ಅದು ಮೂಲತಃ 5.6 ಎಂದು ರಿಕ್ಟರ್​ ಮಾಪಕದಲ್ಲಿ ದಾಖಲಾಗಿದೆ. ಭೂಕಂಪದಲ್ಲಿ ಬಲಿಯಾದವರಲ್ಲಿ ಮಹಿಳೆಯರು ಮತ್ತು ಮಕ್ಕಳು ಕೂಡ ಸೇರಿದ್ದಾರೆ.

ಅಫ್ಘಾನಿಸ್ತಾನದ ಹಿಂದೂ ಕುಶ್ ಪರ್ವತ ಶ್ರೇಣಿಯಲ್ಲಿ ಆಗಾಗ್ಗೆ ಭೂಕಂಪನ ಉಂಟಾಗುತ್ತಿರುತ್ತದೆ. ಈ ವೇಳೆ ಕಳಪೆಯಾಗಿ ನಿರ್ಮಿಸಲಾದ ಮನೆಗಳು ಮತ್ತು ಕಟ್ಟಡಗಳು ಕಂಪನಕ್ಕೆ ಅದುರಿ ಬೀಳುವುದರಿಂದ ಪ್ರಾಣ ಹಾನಿ ಉಂಟಾಗುತ್ತದೆ.

ಇದನ್ನೂ ಓದಿ: ನೋಡಿ: ಸೂಪರ್​ ಮಾರ್ಕೆಟ್​​ನಲ್ಲಿದ್ದ ವಸ್ತುಗಳೆಲ್ಲಾ ಪೀಸ್​, ಪೀಸ್​​: ಕುಡಿದ ವ್ಯಕ್ತಿಯ ಪುಂಡಾಟಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.