ನವದೆಹಲಿ : ಸಾವಿರಾರು ಕೋಟಿಗಳ ಸಾಲ ಮಾಡಿ ದೇಶ ಬಿಟ್ಟ ಹೋಗಿರುವ ಉದ್ಯಮಿಗಳಾದ ವಿಜಯ್ ಮಲ್ಯ, ನೀರವ್ ಮೋದಿ ಹಾಗೂ ಮೇಹುಲ್ ಚೋಕ್ಸಿಗೆ ಸಂಬಂಧಿಸಿದ 19,111 ಕೋಟಿ ರೂ. ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಹೇಳಿದೆ.
ದೇಶ ಬಿಟ್ಟು ಹೋದ ನಂತರದಿಂದ 2022ರ ಮಾ.15ರವರೆಗೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಒಟ್ಟಾರೆ 19,111 ಕೋಟಿ ರೂ. ಆಸ್ತಿ-ಪಾಸ್ತಿಯನ್ನು ವಶಕ್ಕೆ ಪಡೆಯಲಾಗಿದೆ.
ಇದರಲ್ಲಿ 15,113 ಕೋಟಿ ಮೌಲ್ಯದ ಆಸ್ತಿಯನ್ನು ಸಾಲ ನೀಡಿದ ಸಾರ್ವಜನಿಕ ವಲಯದ ಬ್ಯಾಂಕ್ಗಳಿಗೆ ಮರು ಹೊಂದಿಸಲಾಗಿದೆ. ಉಳಿದ 335.06 ಮೌಲ್ಯದ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ.
ಇಂದು ವಿಷಯವನ್ನು ರಾಜ್ಯಸಭೆಯಲ್ಲಿ ಹಣಕಾಸು ಇಲಾಖೆಯ ರಾಜ್ಯ ಖಾತೆ ಸಚಿವ ಪಂಕಜ್ ಚೌಧರಿ ತಮ್ಮ ಲಿಖಿತ ಉತ್ತರದ ಮೂಲಕ ಬಹಿರಂಗ ಪಡಿಸಿದ್ದಾರೆ. ಅಲ್ಲದೇ, ಈ ಮೂವರಿಗೆ ಸೇರಿದ ಕಂಪನಿಗಳಿಂದ ಬ್ಯಾಂಕ್ಗಳಿಗೆ 22,585 ಕೋಟಿ ರೂ. ನಷ್ಟ ಉಂಟಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪೆಟ್ರೋಲ್,ಡಿಸೇಲ್, ಸಿಲಿಂಡರ್ ಬೆಲೆಯಲ್ಲಿ ಏರಿಕೆ: ಗ್ರಾಹಕರಿಗೆ ಶಾಕ್.. ಬೆಂಗಳೂರಿನಲ್ಲಿ ದರ ಎಷ್ಟು?