ETV Bharat / bharat

ನಿವೃತ್ತ ಲೆಫ್ಟಿನೆಂಟ್​ ಜನರಲ್​ ಅನಿಲ್​ ಚೌಹಾಣ್​ ನೂತನ ಸಿಡಿಎಸ್.. ದೇಶದ 2ನೇ ಅತ್ಯುನ್ನತ ಸೇನಾ ಮುಖ್ಯಸ್ಥ

ಮೂರು ಸೇನಾಪಡೆಗಳ ಮುಖ್ಯಸ್ಥ ಹುದ್ದೆಯಾದ ಸಿಡಿಎಸ್​ ಸ್ಥಾನಕ್ಕೆ ನಿವೃತ್ತ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ಅವರನ್ನು ಕೇಂದ್ರ ಸರ್ಕಾರ ಮಂಗಳವಾರ ನೇಮಿಸಿದೆ.

anil-chauhan-appointed-as-new-cds
ನಿವೃತ್ತ ಲೆಫ್ಟಿನೆಂಟ್​ ಜನರಲ್​ ಅನಿಲ್​ ಚೌಹಾಣ್​ ನೂತನ ಸಿಡಿಎಸ್
author img

By

Published : Sep 28, 2022, 8:24 PM IST

ನವದೆಹಲಿ: ಜನರಲ್​ ಬಿಪಿನ್​ ರಾವತ್​ ಅವರ ಅಕಾಲಿಕ ಸಾವಿನಿಂದಾಗಿ ತೆರವಾಗಿದ್ದ ಮೂರು ಸೇನಾಪಡೆಗಳ ಮುಖ್ಯಸ್ಥ(ಸಿಡಿಎಸ್​) ಸ್ಥಾನಕ್ಕೆ ನಿವೃತ್ತ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ಅವರನ್ನು ಕೇಂದ್ರ ಸರ್ಕಾರ ಮಂಗಳವಾರ ನೇಮಿಸಿದೆ.

ಅನಿಲ್​ ಚೌಹಾಣ್​​ ಅವರು ಕಳೆದ ವರ್ಷ ಪೂರ್ವ ಸೇನಾ ಕಮಾಂಡರ್ ಆಗಿ ನಿವೃತ್ತರಾಗಿದ್ದರು. ರಾಷ್ಟ್ರೀಯ ಭದ್ರತಾ ಮಂಡಳಿಯ ಮಿಲಿಟರಿ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದರು. ಸುಮಾರು 40 ವರ್ಷಗಳ ವೃತ್ತಿಜೀವನದಲ್ಲಿ ಲೆಫ್ಟಿನೆಂಟ್ ಜನರಲ್ ಚೌಹಾಣ್ ಅವರು ಹಲವಾರು ಕಮಾಂಡ್, ಸಿಬ್ಬಂದಿ ಮತ್ತು ಇನ್​ಸ್ಟ್ರುಮೆಂಟಲ್​ ನೇಮಕಾತಿಗಳನ್ನು ಹೊಂದಿದ್ದಾರೆ. ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ಭಾರತದ ಬಂಡಾಯ ದಮನ ಕಾರ್ಯಾಚರಣೆಗಳಲ್ಲಿ ವ್ಯಾಪಕ ಅನುಭವವನ್ನು ಹೊಂದಿದ್ದಾರೆ.

ಮೇ 18, 1961 ರಂದು ಜನಿಸಿದ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ಅವರು 1981 ರಲ್ಲಿ ಭಾರತೀಯ ಸೇನೆಯ 11 ಗೂರ್ಖಾ ರೈಫಲ್ಸ್‌ಗೆ ನಿಯೋಜಿಸಲ್ಪಟ್ಟರು. ಖಡಕ್​ವಾಸ್ಲಾದ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ಡೆಹ್ರಾಡೂನ್‌ನ ಇಂಡಿಯನ್ ಮಿಲಿಟರಿ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾಗಿದ್ದಾರೆ. ಹಲವಾರು ಸೇನಾ ವಿಭಾಗಗಳಲ್ಲಿ ಸೇವೆ ಸಲ್ಲಿಸಿರುವ ಅನಿಲ್​ ಚೌಹಾಣ್​ ಅವರು 2021ರ ಮೇ 31 ರಂದು ಭಾರತೀಯ ಸೇನೆಯಿಂದ ನಿವೃತ್ತರಾಗಿದ್ದರು.

ಸಂದ ಪ್ರಶಸ್ತಿಗಳು: ನಿವೃತ್ತ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ಅವರ ಸೇನೆಯಲ್ಲಿನ ವಿಶಿಷ್ಟ ಸೇವೆಗಾಗಿ ಪರಮ ವಿಶಿಷ್ಟ ಸೇವಾ ಪದಕ, ಉತ್ತಮ ಯುದ್ಧ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ, ಸೇನಾ ಪದಕ ಮತ್ತು ವಿಶಿಷ್ಟ ಸೇವಾ ಪದಕಗಳನ್ನು ನೀಡಿ ಗೌರವಿಸಲಾಗಿದೆ.

ವಿಶೇಷ ಎಂದರೆ ಇದೇ ಮೊದಲ ಬಾರಿಗೆ ನಿವೃತ್ತ ಅಧಿಕಾರಿಯೊಬ್ಬರು ಈ ಹುದ್ದೆಗೆ ನೇಮಕ ಆದಂತಾಗಿದೆ. ಇವರ ಆಯ್ಕೆಗಾಗಿ ನೇಮಕಾತಿ ನಿಮಯಗಳಿಗೆ ತಿದ್ದುಪಡಿ ತಂದು ನೇಮಕ ಅಧಿಸೂಚನೆ ಹೊರಡಿಸಲಾಗಿದೆ.

ಅನಿಲ್​ ಚೌಹಾಣ್​ 2ನೇ ಸಿಡಿಎಸ್​: ಮೂರು ಸೇನಾ ಪಡೆಗಳ ಮೊದಲ ಸಿಡಿಎಸ್​ ಆಗಿದ್ದ ಜನರಲ್ ಬಿಪಿನ್ ರಾವತ್ ಅವರು ಕಳೆದ ವರ್ಷ ಸೇನಾ ಹೆಲಿಕಾಪ್ಟರ್​ ದುರಂತದಲ್ಲಿ ಮೃತಪಟ್ಟಿದ್ದರು. 2019 ರಲ್ಲಿ 2ನೇ ಬಾರಿಗೆ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 6 ತಿಂಗಳೊಳಗೆ ಬಿಪಿನ್ ರಾವತ್ ಅವರನ್ನು ಸಿಡಿಎಸ್ ಆಗಿ ನೇಮಿಸಿತ್ತು. ಇದು ದೇಶದ ಮಿಲಿಟರಿ ವ್ಯವಸ್ಥೆಯಲ್ಲಿಯೇ ಅತಿದೊಡ್ಡ ಕ್ರಾಂತಿ ಉಂಟು ಮಾಡಿದ ಪ್ರಶಂಸೆಗೆ ಒಳಗಾಗಿದೆ.

ಏನಿದು ಸಿಡಿಎಸ್​ ಹುದ್ದೆ: ಸಿಡಿಎಸ್​ (ಚೀಪ್​ ಆಫ್​ ಡಿಫೆನ್ಸ್​ ಸ್ಟಾಫ್​) ಸೇನಾ ವ್ಯವಸ್ಥೆಯಲ್ಲಿಯೇ ಅತ್ಯಧಿಕ ಹುದ್ದೆಯಾಗಿದೆ. ಪದಾತಿದಳ, ನೌಕಾಪಡೆ ಮತ್ತು ವಾಯುಪಡೆಗಳಿಗೆ ಪ್ರತ್ಯೇಕ ಮುಖ್ಯಸ್ಥರಿದ್ದರೆ ಅವರೆಲ್ಲರಿಗೂ ಮುಖ್ಯಸ್ಥರಾಗಿರುವುದು ಸಿಡಿಎಸ್​ ಹುದ್ದೆಯಾಗಿದೆ.

ಓದಿ: ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಜಿಲ್ಲಾ ಅಗ್ನಿಶಾಮಕ ಅಧಿಕಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.