ETV Bharat / bharat

ಬಿಟೆಕ್​​​​ ವಿದ್ಯಾರ್ಥಿನಿ ಕೊಲೆ ಕೇಸ್​: ಅಪರಾಧಿಗೆ ಮರಣದಂಡನೆ

ಕೋರ್ಟ್ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೃತಳ ತಂದೆ, ರಮ್ಯಾಗೆ ಆಗಿರುವ ದುರಂತ ಯಾರಿಗೂ ಆಗಬಾರದು ಎಂದಿದ್ದಾರೆ.

ಬಿಟೆಕ್​​​​ ವಿದ್ಯಾರ್ಥಿ ಕೊಲೆ ಕೇಸ್​: ಅಪರಾಧಿಗೆ ಮರಣದಂಡನೆ

author img

By

Published : Apr 30, 2022, 10:21 AM IST

Updated : Apr 30, 2022, 10:32 AM IST

ಅಮರಾವತಿ( ಆಂಧ್ರಪ್ರದೇಶ): 2021ರ ಆಗಸ್ಟ್ 15ರಂದು ಚಾಕುವಿನಿಂದ ಇರಿದು ಬಿಟೆಕ್ ವಿದ್ಯಾರ್ಥಿನಿ ನಲ್ಲಪು ರಮ್ಯಾ ಕೊಲೆ ಮಾಡಿದ ಆರೋಪಿಗೆ ಗುಂಟೂರು ಫಾಸ್ಟ್ ಟ್ರ್ಯಾಕ್ ಸೆಷನ್ಸ್ ನ್ಯಾಯಾಲಯ ಮರಣ ದಂಡನೆ ವಿಧಿಸಿ ಆದೇಶಿಸಿದೆ.

2021ರ ಆಗಸ್ಟ್ 15ರಂದು ಆರೋಪಿ ಶಶಿಕೃಷ್ಣ ಚಾಕುವಿನಿಂದ ಇರಿದು ರಮ್ಯಾ ಕೊಂದಿದ್ದ. ಮೃತನ ತಂದೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡು , ಘಟನೆ ನಡೆದ 10 ಗಂಟೆಯೊಳಗೆ ನರಸರಾವ್‌ಪೇಟೆ ಸಮೀಪದ ಮೊಳಕ್ಲೂರು ಗ್ರಾಮದಲ್ಲಿ ಆರೋಪಿಯನ್ನು ಬಂಧಿಸಿದ್ದರು. ಫೋರೆನ್ಸಿಕ್ ತಂಡಗಳು ಎರಡು ದಿನಗಳಲ್ಲಿ ಡಿಎನ್ಎ ವರದಿ ಸಲ್ಲಿಸಿದವು. ತ್ವರಿತ ತನಿಖೆ ನಡೆಸಿದ ಪೊಲೀಸರು ಒಂದು ವಾರದಲ್ಲೇ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು.

ದಿಶಾ ಉಪಕ್ರಮದ ಅಡಿಯಲ್ಲಿ, ತ್ವರಿತವಾಗಿ ವಿಚಾರಣೆ ನಡೆಸಿದ ಕೋರ್ಟ್​ ನಾಲ್ಕು ತಿಂಗಳೊಳಗೆ ಕೇಸ್​ ಪೂರ್ಣಗೊಳಿಸಿದೆ. ನ್ಯಾಯಾಲಯವು ಪ್ರಕರಣಕ್ಕೆ ಸಂಬಂಧಿಸಿದಂತೆ 28 ಸಾಕ್ಷಿಗಳನ್ನು ಪಡೆದುಕೊಂಡು ಈ ಮಹತ್ವದ ತೀರ್ಪು ನೀಡಿದೆ.

ತಮ್ಮ ಮಗಳಿಗೆ ಆದ ಗತಿ ಇನ್ಯಾರಿಗೂ ಆಗಬಾರದು: ಕೋರ್ಟ್ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೃತಳ ತಂದೆ, ರಮ್ಯಾಗೆ ಆಗಿರುವ ದುರಂತ ಯಾರಿಗೂ ಆಗಬಾರದು. ದಿಶಾ ಉಪಕ್ರಮದಿಂದಾಗಿ ಈ ನ್ಯಾಯ ಸಿಕ್ಕಿದೆ. ಹುಡುಗಿಯರು ಮತ್ತು ಮಹಿಳೆಯರಿಗೆ ಕಿರುಕುಳ ನೀಡುವವರಿಗೆ ಈ ರೀತಿಯ ಶಿಕ್ಷೆಯಾಗಬೇಕು. ಆಗ ಅಪರಾಧಗಳ ಪ್ರಮಾಣ ಕಡಿಮೆಯಾಗುತ್ತದೆ. ಸರ್ಕಾರ ಮತ್ತು ಪೊಲೀಸರಿಗೆ ಧನ್ಯವಾದಗಳು ಎಂದಿದ್ದಾರೆ.

ತೀರ್ಪು ಶ್ಲಾಘಿಸಿದ ಸಿಎಂ ಜಗನ್​​ಮೋಹನ್​ ರೆಡ್ಡಿ: ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ, ನ್ಯಾಯಾಲಯದ ತೀರ್ಪನ್ನು ಶ್ಲಾಘಿಸಿದ್ದು, ರಮ್ಯಾ ಹತ್ಯೆ ಪ್ರಕರಣದಲ್ಲಿ ತ್ವರಿತ ನ್ಯಾಯಾಲಯ ನೀಡಿರುವ ಐತಿಹಾಸಿಕ ತೀರ್ಪನ್ನು ನಾನು ಸ್ವಾಗತಿಸುತ್ತೇನೆ ಎಂದಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ತ್ವರಿತವಾಗಿ ತನಿಖೆ ನಡೆಸಿ ಚಾರ್ಜ್​ಶೀಟ್​ ಸಲ್ಲಿಸಿದ್ದಕ್ಕೆ ಪೊಲೀಸರಿಗೂ ಸಿಎಂ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನು ಓದಿ:ಭದ್ರಾವತಿ: ವಿದ್ಯುತ್ ಶಾಕ್​​​​ನಿಂದ ಬಾಲಕಿ ಸಾವು

Last Updated : Apr 30, 2022, 10:32 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.