ETV Bharat / bharat

ವಿಮಾನ ನಿಲ್ದಾಣದಲ್ಲಿ ಅಮೃತ್​ಪಾಲ್​ ಸಿಂಗ್​ ಪತ್ನಿ ಪೊಲೀಸ್​ ವಶಕ್ಕೆ: ಲಂಡನ್​ಗೆ ಪರಾರಿ ಯತ್ನ? - amritpal case

ಖಲಿಸ್ತಾನಿ ಪ್ರತ್ಯೇಕತಾವಾದಿ ಅಮೃತ್​ಪಾಲ್​ ಸಿಂಗ್​ ಪತ್ನಿಯನ್ನು ಅಮೃತಸರ ವಿಮಾನನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ. ಅವರು ಲಂಡನ್​ಗೆ ತೆರಳುತ್ತಿದ್ದರು ಎಂದು ಮೂಲಗಳಿಂದ ತಿಳಿದುಬಂದಿತ್ತು.

ಅಮೃತ್​ಪಾಲ್​ ಸಿಂಗ್​ ಪತ್ನಿ
ಅಮೃತ್​ಪಾಲ್​ ಸಿಂಗ್​ ಪತ್ನಿ
author img

By

Published : Apr 20, 2023, 1:48 PM IST

ಚಂಡೀಗಢ/ಅಮೃತಸರ: ಬಿಂದ್ರನ್​ವಾಲಾ 2.0 ಎಂದೇ ಕುಖ್ಯಾತಿ ಪಡೆದಿರುವ ಖಲಿಸ್ತಾನಿ ಹೋರಾಟಗಾರ ಅಮೃತ್‌ಪಾಲ್ ಸಿಂಗ್ ಪೊಲೀಸರಿಂದ ತಪ್ಪಿಸಿಕೊಂಡು ಕಣ್ಮರೆಯಾಗಿದ್ದು, ತೀವ್ರ ಶೋಧ ಮುಂದುವರಿದಿದೆ. ಈ ಮಧ್ಯೆ ಅವರ ಪತ್ನಿ ದೇಶಬಿಟ್ಟು ಪರಾರಿಯಾಗುವ ಮುನ್ಸೂಚನೆ ಸಿಕ್ಕ ಬೆನ್ನಲ್ಲೇ ಅವರನ್ನು ಅಮೃತಸರ ವಿಮಾನ ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಮೃತ್​ಪಾಲ್​ ಸಿಂಗ್​ ಪರಾರಿಯಾದ ಬಳಿಕ ಪೊಲೀಸರು ಅವರ ಕುಟುಂಬಸ್ಥರು, ಆಪ್ತರ ಮೇಲೆ ನಿಗಾ ವಹಿಸಿದ್ದಾರೆ. ಇಂದು ಅಮೃತ್​ ಪತ್ನಿ ಅಮೃತಸರ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಅವರು ಲಂಡನ್​ಗೆ ತೆರಳುತ್ತಿದ್ದಾರೆ ಎಂಬ ಮಾಹಿತಿ ಅರಿತ ಪೊಲೀಸರು ತಕ್ಷಣವೇ ಅವರನ್ನು ನಿಲ್ದಾಣದಲ್ಲೇ ವಶಕ್ಕೆ ಪಡೆದಿದ್ದಾರೆ. ಪೊಲೀಸರು ಕೈಗೊಂಡ ಈ ಕ್ರಮದ ನಂತರ, ಶೀಘ್ರದಲ್ಲೇ ಅಮೃತಪಾಲ್ ಸಿಂಗ್ ಕೂಡ ಪೊಲೀಸರಿಗೆ ಶರಣಾಗುವ ಸಾಧ್ಯತೆಯಿದೆ.

ಶರಣಾಗಲಿದ್ದಾರಾ ಅಮೃತ್​ಪಾಲ್​: ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ, ವಾರಿಸ್ ಪಂಜಾಬ್ ಸಂಘಟನೆಯ ಮುಖ್ಯಸ್ಥ ಅಮೃತ್​​ಪಾಲ್​ ಸಿಂಗ್​ ಮಾರ್ಚ್ 18 ರಿಂದ ಪೊಲೀಸರ ಕಣ್ತಪ್ಪಿಸಿ ತಲೆಮರೆಸಿಕೊಂಡಿದ್ದಾರೆ. ಆತನ ಸಹಚರ ಪಾಪಲ್​ಪ್ರೀತ್​ ಸಿಂಗ್ ಬಂಧನದ ನಂತರ ಅಮೃತ್​​ಪಾಲ್ ಒತ್ತಡಕ್ಕೆ ಒಳಗಾಗಿದ್ದು, ಪೊಲೀಸರಿಗೆ ಶರಣಾಗಲಿದ್ದಾರೆ ಎಂದು ಹೇಳಲಾಗಿದೆ.

ಅಮೃತ್​ಪಾಲ್​ ಸಿಂಗ್​ ಪತ್ನಿ
ಅಮೃತ್​ಪಾಲ್​ ಸಿಂಗ್​ ಪತ್ನಿ

ಮತ್ತೊಂದೆಡೆ, ಪಂಜಾಬ್​ ಪೊಲೀಸರು ಅಮೃತ್​​ಪಾಲ್ ಪತ್ತೆಗೆ ನಿರಂತರವಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಇದೇ ಏಪ್ರಿಲ್​ 10ರಂದು ದೆಹಲಿ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಆಪ್ತ ಪಾಪಲ್​ಪ್ರೀತ್​ ಸಿಂಗ್​ಗೆ ಬಲೆ ಹಾಕುವಲ್ಲಿ ಯಶಸ್ವಿಯಾಗಿದ್ದರು. ಇದರ ಬೆನ್ನಲ್ಲೇ ಅಮೃತ್​ಪಾಲ್ ಶರಣಾಗಬಹುದು ಎಂಬ ಮಾಹಿತಿ ಪೊಲೀಸರಿಗೆ ಬಂದಿತ್ತು. ಹರ್ಮಂದಿರ್ ಸಾಹಿಬ್, ದಮ್ದಾಮಾ ಸಾಹಿಬ್ ಅಥವಾ ಆನಂದಪುರ ಸಾಹಿಬ್‌ನಲ್ಲಿ ಅಮೃತ್​ಪಾಲ್​ ಶರಣಾಗತಿ ಆಗಲಿದ್ದಾನೆ ಎನ್ನಲಾಗಿತ್ತು. ಆದರೆ, ಈವರೆಗೂ ಆತನ ಸುಳಿವು ಕೂಡ ಪತ್ತೆಯಾಗಿಲ್ಲ. ಇದೀಗ ಆತನ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅಮೃತ್​ಪಾಲ್ ಮುಂದಿನ ನಡೆ ಏನಾಗಲಿದೆ ಎಂಬುದರ ಮೇಲೆ ಎಲ್ಲರ ಕಣ್ಣು ಬಿದ್ದಿದೆ.

ದಾಳಿ ಮಾಡಿದ್ದ ಅಮೃತ್​ಪಾಲ್​; ಖಲಿಸ್ತಾನಿ ಪರ ಒಲವು ಹೊಂದಿರುವ ಅಮೃತ್​​ಪಾಲ್ ಪಂಜಾಬ್​ ಸರ್ಕಾರ ಮತ್ತು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದ್ದಾನೆ. ಕಳೆದ ಫೆಬ್ರವರಿಯಲ್ಲಿ ಅಮೃತ್‌ಪಾಲ್ ಸಿಂಗ್​ನ ಸಹಾಯಕ ಲವ್‌ಪ್ರೀತ್‌ನನ್ನು ಬಿಡುಗಡೆ ಮಾಡಿಸುವ ನಿಟ್ಟಿನಲ್ಲಿ ಅಜ್ನಾಲ್ ಪೊಲೀಸ್​ ಠಾಣೆ ಮೇಲೆ ಬೆಂಬಲಿಗರು ದಾಳಿ ಮಾಡಿದ್ದರು. ಈ ಮೂಲಕ ಅಮೃತ್​​ಪಾಲ್ ತನ್ನ ಪುಂಡಾಟ ಆರಂಭಿಸಿದ್ದ. ಇದರ ಬೆನ್ನಲ್ಲೇ ಪೊಲೀಸರು ಈತನ ಬಂಧನಕ್ಕೆ ಮಾರ್ಚ್​ 18ರಂದು ಬೃಹತ್​ ಕಾರ್ಯಾಚರಣೆ ಶುರು ಮಾಡಿದ್ದರು. ಅಪಾರ ಸಂಖ್ಯೆಯ ಪೊಲೀಸರ ಕಾರ್ಯಾಚರಣೆ ನಡುವೆಯೂ ಅಮೃತ್​​ಪಾಲ್ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ಅಂದಿನಿಂದಲೂ ಪೊಲೀಸರ ಕೈಗೆ ಸಿಗದೇ ಚಳ್ಳೆಹಣ್ಣು ತಿನ್ನಿಸುತ್ತಾ, ಬೇರೆ - ಬೇರೆ ಸ್ಥಳಗಳಿಗೆ ತನ್ನ ಮೊಕ್ಕಾಂ ಬದಲಾಯಿಸುತ್ತಿದ್ದಾನೆ.

ಪೋಸ್ಟರ್‌ಗಳ ಅಂಟಿಸಿದ ಪೊಲೀಸರು: ಅಜ್ಞಾತವಾಗಿರುವ ಅಮೃತ್​ಪಾಲ್​ಗಾಗಿ ಪೊಲೀಸರು ಏನೆಲ್ಲಾ ಕಸರತ್ತು ನಡೆಸುತ್ತಿದ್ದಾರೆ. ರಾಜ್ಯದ ಅನೇಕ ರೈಲು ನಿಲ್ದಾಣಗಳಲ್ಲಿ ಪಾಲ್​ನ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ಈತ ವಿವಿಧ ಪ್ರಕರಣಗಳಲ್ಲಿ ಬೇಕಾಗಿದ್ದಾನೆ. ಈತನ ಬಗ್ಗೆ ಯಾರಿಗಾದರೂ ಮಾಹಿತಿ ಸಿಕ್ಕಲ್ಲಿ ಪೊಲೀಸರಿಗೆ ತಿಳಿಸಬೇಕು. ಅಂಥವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಮತ್ತು ಮಾಹಿತಿದಾರರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಪೋಸ್ಟರ್‌ಗಳಲ್ಲಿ ಉಲ್ಲೇಖಿಸಲಾಗಿದೆ.

ಓದಿ: ಅಮೃತ್​ಪಾಲ್​ ಸಿಂಗ್​ ಸಹಚರ ಪಾಪಲ್​ಪ್ರೀತ್​ ಸಿಂಗ್​ ಬಂಧನ: ಹೋಶಿಯಾರ್​ಪುರದಲ್ಲಿ ಬಲೆಗೆ ಕೆಡವಿದ ಪಂಜಾಬ್​ ಪೊಲೀಸರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.