ETV Bharat / bharat

ಭಯಾನಕ ದೃಶ್ಯ.. ದೋಣಿ ಮುಳುಗಿ ಮೂವರ ಸಾವು, 8 ಮಂದಿ ನಾಪತ್ತೆ...VIDEO - Amravati boat accident

ಜಿಲ್ಲೆಯ ಜುಂಜ್ ಹಳ್ಳಿಯ ಮೂಲಕ ಹರಿಯುವ ವಾರ್ಧಾ ನದಿಯಲ್ಲಿ ಮಂಗಳವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ದೋಣಿ ಮುಳುಗಿದ್ದು, ಇದರಲ್ಲಿ ಮೂವರು ಸಾವಿಗೀಡಾದರೆ ಇನ್ನೂ 8 ಜನ ನಾಪತ್ತೆಯಾಗಿದ್ದು, ಕಾರ್ಯಾಚರಣೆ ಮುಂದುವರೆದಿದೆ.

Amravati boat accident: Video came to light before the boat sank
ದೋಣಿ ಮುಳುಗಿ ಮೂವರ ಸಾವು, 8 ಮಂದಿ ನಾಪತ್ತೆ
author img

By

Published : Sep 16, 2021, 7:13 AM IST

Updated : Sep 16, 2021, 8:11 AM IST

ಅಮರಾವತಿ: ಮಹಾರಾಷ್ಟ್ರದ ಅಮರಾವತಿ ನದಿಯಲ್ಲಿ ದೋಣಿ ಮುಳುಗುವ ಮುನ್ನದ ವಿಡಿಯೋ ಭಾರೀ ವೈರಲ್​ ಆಗುತ್ತಿದೆ. ದೋಣಿ ಮಗುಚಿ ಬೀಳುವ ಮುನ್ನದ ವಿಡಿಯೋ ಇದಾಗಿದ್ದು, ಜಿಲ್ಲೆಯ ಜುಂಜ್ ಹಳ್ಳಿಯ ಮೂಲಕ ಹರಿಯುವ ವಾರ್ಧಾ ನದಿಯಲ್ಲಿ ಮಂಗಳವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದೆ.

ಘಟನೆಯಲ್ಲಿ ಮೂವರ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಇನ್ನಿಬ್ಬರು ಬದುಕುಳಿದಿದ್ದಾರೆ. ಉಳಿದ ಎಂಟು ಮಂದಿ ನಾಪತ್ತೆಯಾಗಿದ್ದಾರೆ.

ದೋಣಿ ಮುಳುಗಿ ಮೂವರ ಸಾವು, 8 ಮಂದಿ ನಾಪತ್ತೆ...VIDEO

ದೋಣಿಯಲ್ಲಿ ಕುಳಿತಿದ್ದವರು ವಿಹಾರಕ್ಕೆ ಎಂದು ಬಂದಿದ್ದರು ಎನ್ನಲಾಗಿದೆ. ದೋಣಿಯಲ್ಲಿ ಕುಳಿತಿದ್ದ ವೇಳೆ ಭೋರ್ಗರೆದು ಹರಿಯುತ್ತಿದ್ದ ನದಿಗೆ ನಿಯಂತ್ರಣ ತಪ್ಪಿ ದೋಣಿ ಮಗುಚಿ ಬಿದ್ದಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಶಾಸಕ ದೇವೇಂದ್ರ ಅವರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಇನ್ನುಳಿದವರ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ.

Last Updated : Sep 16, 2021, 8:11 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.