ETV Bharat / bharat

ಬಂಗಾಳ ಸರ್ಕಾರ ಕಿತ್ತೊಗೆಯಲು ಅಮಿತ್ ಶಾ ಸಂಚು: ಮಮತಾ ಬ್ಯಾನರ್ಜಿ ವಾಕ್​ ಸಮರ - ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ಪುಲ್ವಾಮಾ ಭಯೋತ್ಪಾದಕ ದಾಳಿ ಪ್ರಕರಣದ ಪೂರ್ಣ ಪ್ರಮಾಣದ ತನಿಖೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒತ್ತಾಯಿಸಿದರು. "ನಾವು ಭಾರತೀಯ ಸೇನೆಯನ್ನು ಗೌರವಿಸುತ್ತೇವೆ. ಅವರ ತ್ಯಾಗದ ಬಗ್ಗೆ ಹೆಮ್ಮೆಪಡುತ್ತೇವೆ. ಪುಲ್ವಾಮಾ ಪ್ರಕರಣದ ಸಂಪೂರ್ಣ ತನಿಖೆ ಕೈಗೊಳ್ಳಲು ನಾವು ಬಯಸುತ್ತೇವೆ" ಎಂದು ಅವರು ಆಗ್ರಹಿಸಿದರು.

Mamata Banerjee attacks Amit Shah
ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
author img

By

Published : Apr 17, 2023, 4:55 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ): ''ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯದಲ್ಲಿ ಚುನಾಯಿತ ಸರ್ಕಾರವನ್ನು ಕಿತ್ತೊಗೆಯಲು ಪಿತೂರಿ ನಡೆಸುತ್ತಿದ್ದಾರೆ'' ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದರು. ರಾಜ್ಯ ಸೆಕ್ರೆಟರಿಯೇಟ್‌ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ''ರಾಜ್ಯ ಸರ್ಕಾರವನ್ನು ಪದಚ್ಯುತಗೊಳಿಸುವ ಬಗ್ಗೆ ಯಾವ ಕಾನೂನಿನ ಅಡಿ ಅಮಿತ್ ಶಾ ಅವರು ಮಾತನಾಡುತ್ತಿದ್ದಾರೆ'' ಎಂದು ಅವರು ಪ್ರಶ್ನಿಸಿದರು.

ಕೇಂದ್ರ ಗೃಹ ಸಚಿವ ಅಮಿತ್​ ಹೇಳಿದ್ದೇನು?: ಇದಕ್ಕೂ ಮೊದಲು, ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯಲ್ಲಿ ನಡೆದ ಪಕ್ಷದ ರ‍್ಯಾಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಅವರು, 2024ರ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 35 ಸ್ಥಾನಗಳನ್ನು ಪಡೆದರೆ, ನಂತರ ಮಮತಾ ಸರ್ಕಾರವು 2025ರ ಮೊದಲು ಪತನವಾಗಲಿದೆ ಎಂದು ಹೇಳಿದರು. ಇದು ಅವರ ಸರ್ಕಾರವು ಐದು ವರ್ಷದ ಅವಧಿ ಪೂರ್ಣಗೊಳಿಸುವುದಿಲ್ಲ ಎಂದು ಸೂಚಿಸುತ್ತದೆ. ಮಮತಾ ಎಷ್ಟೇ ಪ್ರಯತ್ನಿಸಿದರೂ ತನ್ನ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರನ್ನು ಪಶ್ಚಿಮ ಬಂಗಾಳದ ಮುಂದಿನ ಮುಖ್ಯಮಂತ್ರಿಯನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಶಾ ಹೇಳಿದ್ದಾರೆ.

''ಕೇಂದ್ರ ಗೃಹ ಸಚಿವರು ಸಾಂವಿಧಾನಿಕ ಮಾನದಂಡಗಳನ್ನು ಉಲ್ಲಂಘಿಸಿದ್ದಾರೆ'' ಎಂದು ಆರೋಪಿಸಿದ ಮಮತಾ ಅವರು, ''ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 35 ಸ್ಥಾನಗಳನ್ನು ಪಡೆದರೆ, ಟಿಎಂಸಿ ಸರ್ಕಾರವನ್ನು ಕಿತ್ತೊಗೆಯುವುದಾಗಿ ಹೇಗೆ ಹೇಳಬಹುದು'' ಎಂದು ಅವರು ಗರಂ ಆಗಿಯೇ ಪ್ರಶ್ನಿಸಿದರು.

ಅಮಿತ್​ ಶಾ ವಿರುದ್ಧ ಮಮತಾ ವಾಗ್ದಾಳಿ: ''ಗೃಹ ಸಚಿವರು ಸಾಂವಿಧಾನಿಕ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ದೇಶದ ಸುರಕ್ಷತೆ ಖಾತ್ರಿಪಡಿಸುವ ಬದಲು ಅವರು ಷಡ್ಯಂತ್ರಗಳನ್ನು ರೂಪಿಸುತ್ತಿದ್ದಾರೆ. ರಾಜ್ಯ ಸರ್ಕಾರವನ್ನು ಪದಚ್ಯುತಗೊಳಿಸುವ ಬಗ್ಗೆ ಯಾವ ಕಾನೂನಿನ ಅಡಿ ಶಾ ಮಾತನಾಡುತ್ತಿದ್ದಾರೆ. ಸಂವಿಧಾನವನ್ನು ಬದಲಾಯಿಸಲಾಗುತ್ತಿದೆಯೇ?" ಇಂತಹ ಟೀಕೆಗಳನ್ನು ಮಾಡಿದ ನಂತರ ಕೇಂದ್ರ ಗೃಹ ಸಚಿವ ಸ್ಥಾನದಲ್ಲಿ ಮುಂದುವರಿಯಲು ಶಾ ಅವರಿಗೆ ಯಾವುದೇ ನೈತಿಕ ಹಕ್ಕಿಲ್ಲ'' ಎಂದು ಮಮತಾ ತೀವ್ರ ವಾಕ್​ ಸಮರ್​ ನಡೆಸಿದರು.

ಪುಲ್ವಾಮಾ ಭಯೋತ್ಪಾದಕ ದಾಳಿ ಪ್ರಕರಣದ ತನಿಖೆಕ್ಕೆ ಆಗ್ರಹ: ''ಪುಲ್ವಾಮಾ ಭಯೋತ್ಪಾದಕ ದಾಳಿ ಪ್ರಕರಣದ ಸಂಪೂರ್ಣ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು. "ನಾವು ಭಾರತೀಯ ಸೇನೆಯನ್ನು ಗೌರವಿಸುತ್ತೇವೆ ಮತ್ತು ಅವರ ತ್ಯಾಗದ ಬಗ್ಗೆ ಹೆಮ್ಮೆಪಡುತ್ತೇವೆ. ಪುಲ್ವಾಮಾ ಪ್ರಕರಣದ ಸಂಪೂರ್ಣ ತನಿಖೆಯನ್ನು ನಾವು ಬಯಸುತ್ತೇವೆ" ಎಂದು ಅವರು ತೀವ್ರ ಆಗ್ರಹ ಮಾಡಿದರು.

ಅಮಿತ್​ ಶಾ ವಿರುದ್ಧ ಮಮತಾ ತೀವ್ರ ಟೀಕಾಸ್ತ್ರ: ಬಂಗಾಳದಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ಹಿನ್ನೆಲೆ ಪ್ರತಿಕ್ರಿಯಿಸಿದ ಮಮತಾ ಅವರು, ಕೇಂದ್ರ ಸಚಿವ ಅಮಿತ್​ ಶಾ ವಿರುದ್ಧ ತೀವ್ರ ಟೀಕಾಸ್ತ್ರ ಪ್ರಯೋಗಿಸಿದರು. ''ಚುನಾವಣೋತ್ತರ ಹಿಂಸಾಚಾರವನ್ನು ಎದುರಿಸಲು 151 ತಂಡಗಳನ್ನು ಕಳುಹಿಸಲಾಗಿದೆ. ನಮ್ಮ ಪಕ್ಷದ ನಾಯಕರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲಾಗಿದೆ. ಈಗ ಇತ್ತೀಚೆಗೆ ರಾಮನವಮಿ ದಿನ ಸೃಷ್ಟಿಯಾದ ಹಿಂಸಾಚಾರದಿಂದ ನಾನು ದಿಗ್ಭ್ರಮೆಗೊಂಡಿದ್ದೇನೆ. ಬಂಗಾಳದಲ್ಲಿ ಸರ್ಕಾರಕ್ಕೆ ನೇರ ಸಂಬಂಧವಿಲ್ಲದೇ ಇರುವ ಏನಾದರೂ ಘಟನೆಗಳು ನಡೆದಾಗ ಕೇಂದ್ರ ತಂಡವನ್ನು ಕಳುಹಿಸಲಾಗುತ್ತದೆ. ಆದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಯೋಧರ ಹತ್ಯೆ ಮಾಡಿದ ಘಟನೆಗೆ ಎಷ್ಟು ಕೇಂದ್ರ ತಂಡಗಳನ್ನು ಕಳುಹಿಸಲಾಗಿದೆ?'' ಎಂದು ಮಮತಾ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: 62 ದಿನಗಳ ಅಮರನಾಥ ಯಾತ್ರೆಗೆ ಆನ್‌ಲೈನ್, ಆಫ್‌ಲೈನ್‌ ನೋಂದಣಿ ಆರಂಭ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.