ETV Bharat / bharat

ಗೆಳತಿಯನ್ನು ವಿಮಾನದ ಕಾಕ್​ಪಿಟ್​ಗೆ ಕರೆದೊಯ್ದ ಪ್ರಕರಣ: ಏರ್​ ಇಂಡಿಯಾಗೆ ಶೋಕಾಸ್​ ನೋಟಿಸ್​​ - ಈಟಿವಿ ಭಾರತ ಕನ್ನಡ

ಏರ್​​ ಇಂಡಿಯಾ ವಿಮಾನದಲ್ಲಿ ಗೆಳತಿಯನ್ನು ಕಾಕ್​ಪಿಟ್​​​ಗೆ ಕರೆದೊಯ್ದ ಪ್ರಕರಣ ಸಂಬಂಧ ಏರ್​ ಇಂಡಿಯಾ ಸಿಇಒ ಹಾಗೂ ಭದ್ರತಾ ಮುಖ್ಯಸ್ಥ ಹೆನ್ರಿ ಡೊನೊಹೊ ಅವರಿಗೆ ಡಿಜಿಸಿಎ ಶೋಕಾಸ್​ ನೋಟಿಸ್​ ಜಾರಿ ಮಾಡಿದೆ.

allowing-female-friend-into-cockpit-air-india-ceo-head-of-flight-safety-get-showcause-notice-from-dgca
ಗೆಳತಿಯನ್ನು ವಿಮಾನದ ಕಾಕ್​ಪಿಟ್​ಗೆ ಕರೆದೊಯ್ದ ಪ್ರಕರಣ : ಏರ್​ ಇಂಡಿಯಾಗೆ ಡಿಜಿಸಿಎ ಶೋಕಾಸ್​ ನೊಟೀಸ್​​
author img

By

Published : Apr 30, 2023, 7:56 PM IST

ಮುಂಬೈ (ಮಹಾರಾಷ್ಟ್ರ) : ಪೈಲೆಟ್​​ ಒಬ್ಬರು ವಿಮಾನದ ಸುರಕ್ಷತಾ ಕ್ರಮಗಳನ್ನು ಉಲ್ಲಂಘಿಸಿ ತನ್ನ ಗೆಳತಿಯನ್ನು ವಿಮಾನದ ಕಾಕ್​ಪಿಟ್​​ ಪ್ರವೇಶಿಸಲು ಅನುಮತಿಸಿದ ಪ್ರಕರಣ ಸಂಬಂಧ ಏರ್​ ಇಂಡಿಯಾ ಸಿಇಒ ಕ್ಯಾಂಪ್​ ಬೆಲ್​ ವಿಲ್ಸನ್​ ಅವರಿಗೆ ಡಿಜಿಸಿಎ (ನಾಗರಿಕ ವಿಮಾನಯಾನ ನಿರ್ದೇಶನಾಲಯ) ಶೋಕಾಸ್​ ನೋಟಿಸ್​​ ಜಾರಿ ಮಾಡಿದೆ. ಜೊತೆಗೆ, ಏರ್​ಲೈನ್​ ಸುರಕ್ಷತೆ, ಭದ್ರತಾ ಮುಖ್ಯಸ್ಥ ಹೆನ್ರಿ ಡೊನೊಹೊ ಅವರಿಗೂ ನೋಟಿಸ್​ ನೀಡಲಾಗಿದೆ.

ಕಳೆದ ಫೆಬ್ರವರಿ 27ರಂದು ದುಬೈನಿಂದ ದೆಹಲಿಗೆ ಬರುತ್ತಿದ್ದ ಏರ್​ ಇಂಡಿಯಾ ವಿಮಾನದಲ್ಲಿ ಪೈಲೆಟ್​ ಒಬ್ಬರು ತನ್ನ ಗೆಳತಿಯನ್ನು ವಿಮಾನದ ಕಾಕ್​ ಪಿಟ್​ಗೆ ಪ್ರವೇಶಿಸಲು ಅನುಮತಿಸಿದ್ದರು ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಪೈಲೆಟ್​ ವಿರುದ್ಧ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ ಆರೋಪ ಕೇಳಿಬಂದಿತ್ತು. ಈ ಬಗ್ಗೆ ವಿಮಾನಯಾನ ಸಿಬ್ಬಂದಿಯೊಬ್ಬರು ಡಿಜಿಸಿಎಗೆ ದೂರು ಸಲ್ಲಿಸಿದ್ದರು.

ಸಿಬ್ಬಂದಿ ಪ್ರಕಾರ, ಪೈಲೆಟ್​ ತನ್ನ ಗೆಳತಿಯನ್ನು ಕಾಕ್‌ಪಿಟ್‌ಗೆ ಕರೆತರುವಂತೆ ಸಿಬ್ಬಂದಿಗೆ ತಿಳಿಸಿದರು ಮತ್ತು ಅವಳಿಗಾಗಿ ಕೆಲ ದಿಂಬುಗಳನ್ನು ತಂದು ಕೊಡುವಂತೆ ಹೇಳಿದ್ದರು ಎನ್ನಲಾಗಿತ್ತು. ಮಹಿಳೆ ಮೊದಲ ವೀಕ್ಷಕ ಸೀಟಿನಲ್ಲಿ ಕುಳಿತಿದ್ದರು ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು.

ಘಟನೆಯ ಬಗ್ಗೆ ಏರ್​ ಇಂಡಿಯಾ, ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ ವರದಿ ನೀಡದ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಸಿಇಒ ಮತ್ತು ಫ್ಲೈಟ್ ಸುರಕ್ಷತಾ ಮುಖ್ಯಸ್ಥರಿಗೆ ಏಪ್ರಿಲ್ 21 ರಂದು ಶೋಕಾಸ್ ನೋಟಿಸ್ ನೀಡಲಾಗಿತ್ತು. ಘಟನೆಯ ತನಿಖೆಯಲ್ಲಿ ವಿಳಂಬವಾಗಿದೆ. ಶೋಕಾಸ್ ನೋಟಿಸ್‌ಗೆ ಉತ್ತರಿಸಲು ಇಬ್ಬರಿಗೂ 15 ದಿನಗಳ ಕಾಲಾವಕಾಶ ನೀಡಲಾಗಿತ್ತು. ಈ ಸಂಬಂಧ ಏರ್ ಇಂಡಿಯಾದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಡಿಜಿಸಿಎಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಮೂಲಗಳ ಪ್ರಕಾರ, ಫೆಬ್ರವರಿ 27 ರಂದು ಘಟನೆ ನಡೆದಿದೆ. ಮಾರ್ಚ್ 3ರಂದು ಕ್ಯಾಂಪ್ಬೆಲ್ ಮತ್ತು ಡೊನೊಹೋಗೆ ಅವರಿಗೆ ಘಟನೆ ಸಂಬಂಧ ಇ-ಮೇಲ್ ರವಾನೆಯಾಗಿದೆ. ಡಿಜಿಸಿಎ ಏಪ್ರಿಲ್ 21 ತನಿಖೆಯನ್ನು ಆರಂಭಿಸಿದೆ. ಆದರೆ ಏರ್ ಇಂಡಿಯಾ ಇದಕ್ಕೂ ಮೊದಲು ಯಾವುದೇ ವಿಚಾರಣೆ ನಡೆಸಿಲ್ಲ ಎಂದು ಹೇಳಲಾಗಿದೆ.

ತನಿಖೆಗಳು ಪೂರ್ಣಗೊಳ್ಳುವವರೆಗೆ ದುಬೈ-ದೆಹಲಿ ವಿಮಾನದ ಸಂಪೂರ್ಣ ಸಿಬ್ಬಂದಿಗಳ ಕಾರ್ಯ ನಿರ್ವಹಿಸುವಿಕೆಯನ್ನು ಸ್ಥಗಿತಗೊಳಿಸಲು ಡಿಜಿಸಿಎ ಏರ್ ಇಂಡಿಯಾಗೆ ನಿರ್ದೇಶನ ನೀಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಏರ್​ ಇಂಡಿಯಾ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಈ ಸಂಬಂಧ ತನಿಖೆಗಳು ನಡೆಯುತ್ತಿವೆ ಎಂದು ಹೇಳಿದೆ.

ಸಾಮಾನ್ಯ ಜನರನ್ನು ವಿಮಾನದ ಕಾಕ್‌ಪಿಟ್‌ಗೆ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ. ಈ ರೀತಿ ಪ್ರವೇಶಿಸುವುದು ನಿಯಮಗಳ ಉಲ್ಲಂಘನೆಯಾಗುತ್ತದೆ. ಈ ವರ್ಷದ ಆರಂಭದಲ್ಲಿ ಏರ್ ಇಂಡಿಯಾ ವಿಮಾನಗಳಲ್ಲಿ ಮೂತ್ರ ವಿಸರ್ಜಿಸಿದ ಎರಡು ಘಟನೆಗಳ ಬಗ್ಗೆ ವರದಿ ಮಾಡದಿದ್ದಕ್ಕಾಗಿ ರೂ 30 ಲಕ್ಷ ಮತ್ತು ರೂ 10 ಲಕ್ಷ ದಂಡವನ್ನು ವಿಧಿಸಲಾಗಿತ್ತು.

ಇದನ್ನೂ ಓದಿ : ಏರ್​ ಇಂಡಿಯಾ ವಿಮಾನದ ಕಾಕ್​ಪಿಟ್​ನಲ್ಲಿ ಮಹಿಳೆ ಪ್ರಯಾಣದ ಆರೋಪ: ಡಿಜಿಸಿಎ ತನಿಖೆ ಆರಂಭ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.