ETV Bharat / bharat

ಮೆಟ್ರೋ ರೈಲಿನಲ್ಲಿ 2 ಬಾಟಲಿ ಮದ್ಯ ಕೊಂಡೊಯ್ಯಲು ಅನುಮತಿ: ಆದರೆ ಒಳಗೆ ಕುಡಿಯುವಂತಿಲ್ಲ!

ಇನ್ನು ಮುಂದೆ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸುವ ಪ್ರಯಾಣಿಕರು ತಮ್ಮೊಂದಿಗೆ ಎರಡು ಬಾಟಲಿ ಮದ್ಯವನ್ನು ತೆಗೆದುಕೊಂಡು ಹೋಗಲು ಅನುಮತಿ ನೀಡಲಾಗಿದೆ.

ಮೆಟ್ರೊ ರೈಲಿನಲ್ಲಿ 2 ಬಾಟಲಿ ಮದ್ಯ ಕೊಂಡೊಯ್ಯಲು ಅನುಮತಿ: ಆದರೆ ಒಳಗೆ ಕುಡಿಯುವಂತಿಲ್ಲ!
Delhi metro allows passengers to carry alcohol
author img

By

Published : Jun 30, 2023, 4:15 PM IST

ನವದೆಹಲಿ : ದೆಹಲಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವ ಒಬ್ಬ ವ್ಯಕ್ತಿಯು ಎರಡು ಸೀಲ್ ಮಾಡಿದ ಮದ್ಯದ ಬಾಟಲಿಗಳನ್ನು ತನ್ನೊಂದಿಗೆ ತೆಗೆದುಕೊಂಡು ಹೋಗಲು ಅನುಮತಿ ನೀಡಲಾಗಿದೆ ಎಂದು ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ (ಡಿಎಂಆರ್‌ಸಿ) ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದೆ. ಆದಾಗ್ಯೂ ಮೆಟ್ರೋ ರೈಲಿನ ಒಳಗೆ ಕುಡಿಯುವುದನ್ನು ಈಗಲೂ ನಿಷೇಧಿಸಲಾಗಿದೆ. "ದೆಹಲಿ ಮೆಟ್ರೋ ಏರ್‌ಪೋರ್ಟ್ ಎಕ್ಸ್‌ಪ್ರೆಸ್ ಲೈನ್‌ನ ನಿಬಂಧನೆಗಳಿಗೆ ಅನುಸಾರ ಪ್ರತಿ ವ್ಯಕ್ತಿಯು ಎರಡು ಸೀಲ್ ಮಾಡಿದ ಮದ್ಯದ ಬಾಟಲಿಗಳನ್ನು ಮೆಟ್ರೋದಲ್ಲಿ ಸಾಗಿಸಲು ಅನುಮತಿಸಲಾಗಿದೆ" ಎಂದು ಡಿಎಂಆರ್‌ಸಿ ಬಿಡುಗಡೆ ಮಾಡಿರುವ ಹೇಳಿಕೆ ತಿಳಿಸಿದೆ.

ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ದೆಹಲಿ ಮೆಟ್ರೋ, ಇತ್ತೀಚಿನವರೆಗೂ ಏರ್‌ಪೋರ್ಟ್ ಮೆಟ್ರೋ ಮಾರ್ಗವನ್ನು ಹೊರತುಪಡಿಸಿ ಎಲ್ಲಾ ಮಾರ್ಗಗಳಲ್ಲಿ ಮದ್ಯವನ್ನು ನಿಷೇಧಿಸಲಾಗಿತ್ತು. ಸಿಐಎಸ್‌ಎಫ್ ಮತ್ತು ಡಿಎಂಆರ್‌ಸಿಯ ಅಧಿಕಾರಿಗಳನ್ನು ಒಳಗೊಂಡ ಸಮಿತಿಯು ಹಿಂದಿನ ಆ ಆದೇಶವನ್ನು ಪರಿಶೀಲಿಸಿದೆ ಎಂದು ಹೇಳಿದೆ. ಆದಾಗ್ಯೂ ಮೆಟ್ರೋ ಆವರಣದಲ್ಲಿ ಮದ್ಯಪಾನ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದೆ.

ಮೆಟ್ರೋ ಪ್ರಯಾಣಿಕರು ಮೆಟ್ರೊದಲ್ಲಿ ಸಭ್ಯತೆ ಕಾಪಾಡಿಕೊಳ್ಳುವಂತೆ ಸೂಚಿಸಲಾಗಿದೆ. ಅಲ್ಲದೆ ಯಾವುದೇ ಪ್ರಯಾಣಿಕರು ಮದ್ಯದ ಅಮಲಿನಲ್ಲಿ ಅಸಭ್ಯವಾಗಿ ವರ್ತಿಸುವುದು ಕಂಡುಬಂದಲ್ಲಿ, ಕಾನೂನಿನ ಅಡಿಯಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಸಲಾಗಿದೆ. ಯಾವುದೇ ರೀತಿಯ ಚೂಪಾದ ವಸ್ತುಗಳು, ಸ್ಫೋಟಕ ವಸ್ತುಗಳು, ಉಪಕರಣಗಳು, ಸುಡುವ ವಸ್ತುಗಳು, ರಾಸಾಯನಿಕಗಳು ಮತ್ತು ಇತರ ಅಪಾಯಕಾರಿ ವಸ್ತುಗಳು, ಬಂದೂಕುಗಳು ಇತರ ಆಕ್ರಮಣಕಾರಿ ವಸ್ತುಗಳನ್ನು ಮೆಟ್ರೊದಲ್ಲಿ ಸಾಗಿಸುವಂತಿಲ್ಲ. ಈ ವಸ್ತುಗಳನ್ನು ಮೆಟ್ರೊದ ನಿಷೇಧಿತ ವಸ್ತುಗಳ ಪಟ್ಟಿಗೆ ಸೇರಿಸಲಾಗಿದೆ.

ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ (DMRC) ತನ್ನದೇ ಆದ ಆ್ಯಪ್ ಒಂದನ್ನು ಬಿಡುಗಡೆ ಮಾಡಲಿದೆ. ಇದರ ಮೂಲಕ ಪ್ರಯಾಣಿಕರು ಆನ್‌ಲೈನ್‌ನಲ್ಲಿ QR ಕೋಡ್ ಆಧಾರಿತ ಟಿಕೆಟ್‌ಗಳನ್ನು ಖರೀದಿಸಬಹುದು. ಪ್ರಯಾಣಿಕರು ಮನೆಯಲ್ಲಿಯೇ ಕುಳಿತು ಟಿಕೆಟ್‌ಗಳನ್ನು ಖರೀದಿಸಲು ಇದು ಅವಕಾಶ ನೀಡುತ್ತದೆ. ಇದರಿಂದ ಮೆಟ್ರೋ ನಿಲ್ದಾಣಗಳಲ್ಲಿ ಟೋಕನ್‌ಗಳನ್ನು ಖರೀದಿಸಲು ಸರತಿ ಸಾಲಿನಲ್ಲಿ ಕಾಯುವುದನ್ನು ತಪ್ಪಿಸಬಹುದಾಗಿದೆ.

ಅಧಿಕೃತ ಮೂಲಗಳ ಪ್ರಕಾರ, ಪ್ರಯಾಣಿಕರು ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು ಅದರಲ್ಲಿ ನೋಂದಾಯಿಸಿಕೊಳ್ಳಬಹುದು ಮತ್ತು ಟಿಕೆಟ್ ಖರೀದಿಸಬಹುದು. ಅಲ್ಲದೆ ಆ್ಯಪ್ ಬಳಸಿ ನೇರವಾಗಿ ತಮ್ಮ ಫೋನ್‌ಗಳಿಂದ ಗೇಟ್‌ನಲ್ಲಿ ಸ್ಕ್ಯಾನ್ ಮಾಡಬಹುದು. ಪ್ರಯಾಣದ ಅವಧಿಯೊಳಗೆ ಪ್ರಯಾಣಿಕರ ಫೋನ್ ಕಳೆದುಹೋದರೆ ಅಥವಾ ಡೆಡ್ ಆದರೆ ಅವರು ಕಸ್ಟಮರ್ ಕೇರ್ ಕಿಯೋಸ್ಕ್‌ನಿಂದ ಟಿಕೆಟ್ ಅನ್ನು ಮರುಖರೀದಿ ಮಾಡಬೇಕಾಗುತ್ತದೆ.

ಕೋವಿಡ್ ಅಲೆ ಬಂದ ನಂತರ ಟೋಕನ್‌ ಸಿಸ್ಟಮ್ ಅನ್ನು ಕೊನೆಗಾಣಿಸಲು ಡಿಎಂಆರ್​ಸಿ ಯೋಜಿಸುತ್ತಿದೆ. ಮೆಟ್ರೋ ಪ್ರಾಧಿಕಾರವು ಆರಂಭದಲ್ಲಿ ಪೇಪರ್ QR ಕೋಡ್ ಟಿಕೆಟ್‌ಗಳನ್ನು ಪರಿಚಯಿಸಿತ್ತು. ನಂತರ ಏರ್‌ಪೋರ್ಟ್ ಎಕ್ಸ್‌ಪ್ರೆಸ್ ಲೈನ್ (AEL) ನಲ್ಲಿ ವಾಟ್ಸ್​ ಆ್ಯಪ್ ಆಧಾರಿತ ಟಿಕೆಟ್ ಸೇವೆಯನ್ನು ಪರಿಚಯಿಸಿತ್ತು. ಪ್ರಯಾಣಿಕರು Ridlr ಅಪ್ಲಿಕೇಶನ್ ಮೂಲಕ AEL ಗಾಗಿ ಟಿಕೆಟ್‌ಗಳನ್ನು ಖರೀದಿಸಬಹುದು.

ಇದನ್ನೂ ಓದಿ : ಸಾಮಾಜಿಕ ಮಾಧ್ಯಮಗಳು ಕಾನೂನು ಪಾಲಿಸುವುದು ಕಡ್ಡಾಯ: ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.