ETV Bharat / bharat

ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೊಳಿಸುವಂತೆ ಹೈಕೋರ್ಟ್​ಗೆ ಅರ್ಜಿ

ವಕೀಲರ ರಕ್ಷಣೆಗಾಗಿ ವಿಶೇಷ ಕಾನೂನು ಜಾರಿಗೊಳಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಇಬ್ಬರು ವಕೀಲರು ದೆಹಲಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

author img

By

Published : Apr 7, 2023, 7:22 PM IST

Lawyers move Delhi HC seeking law for their protection safe atmosphere to practice

ನವದೆಹಲಿ : ವಕೀಲರ ರಕ್ಷಣೆಗಾಗಿ ಕಾನೂನು ಜಾರಿಗೆ ತರುವಂತೆ ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಇಬ್ಬರು ವಕೀಲರು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ವಕೀಲರೊಬ್ಬರ ಹತ್ಯೆಯ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ವಕೀಲರಾದ ದೀಪಾ ಜೋಸೆಫ್ ಮತ್ತು ಆಲ್ಫಾ ಫಿರಿಸ್ ದಯಾಳ್ ಅವರು ತಮ್ಮ ಅರ್ಜಿಯಲ್ಲಿ, ನಗರದ ನ್ಯಾಯಾಲಯದ ಆವರಣದಲ್ಲಿ ನಡೆಯುತ್ತಿರುವ ಹಿಂಸಾಚಾರದ ಘಟನೆಗಳಲ್ಲಿ ಆತಂಕಕಾರಿ ಏರಿಕೆ ಕಂಡುಬಂದಿದೆ ಮತ್ತು ಕಾನೂನು ಜಾರಿಗೆ ತರಲು ಇದು ಸರಿಯಾದ ಸಮಯ ಎಂದು ತಿಳಿಸಿದ್ದಾರೆ. ಹೀಗಾಗಿ ವಕೀಲರ ಸಮೂಹಕ್ಕೆ ರಕ್ಷಣೆ ನೀಡಲು ಮತ್ತು ಅವರ ಮನಸ್ಸಿನಲ್ಲಿ ಹುದುಗಿರುವ ಭಯ ನಿವಾರಿಸಲು ವಕೀಲರ ರಕ್ಷಣಾ ಕಾಯಿದೆ ಜಾರಿಗೆ ತರುವಂತೆ ಅವರು ಕೋರಿದ್ದಾರೆ.

ಬಾರ್‌ ಅಸೋಸಿಯೇಶನ್​​ ಪ್ರಭಾವಿ ಮತ್ತು ಹಿರಿಯ ಸದಸ್ಯರೊಬ್ಬರನ್ನು ಕೊಲೆಗೈದ ಭೀಕರ ದೃಶ್ಯಾವಳಿಗಳನ್ನು ನೋಡಿದ ನಂತರ ಸ್ವತಃ ನಮಗೆ ನಮ್ಮ ರಕ್ಷಣೆಯ ಬಗ್ಗೆ ಕಾಳಜಿ ಉಂಟಾಗಿದೆ. ಈ ಪರಿಸ್ಥಿತಿಯಲ್ಲಿ ಒಂದು ವೇಳೆ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಯಾಗದಿದ್ದರೆ ವಕೀಲರ ವಿರುದ್ಧ ಅಪರಾಧ ಎಸಗುವ ಅಪರಾಧಿಗಳ ಧೈರ್ಯ ಇನ್ನೂ ಹೆಚ್ಚಾಗುತ್ತದೆ ಎಂದು ಅರ್ಜಿದಾರರು ಹೇಳಿದ್ದಾರೆ. ನೈಋತ್ಯ ದೆಹಲಿಯ ದ್ವಾರಕಾ ಪ್ರದೇಶದಲ್ಲಿ 53 ವರ್ಷದ ವಕೀಲ ವೀರೇಂದ್ರ ಕುಮಾರ್ ನರ್ವಾಲ್ ಅವರನ್ನು ಎಪ್ರಿಲ್ 1 ರಂದು ಇಬ್ಬರು ಮೋಟಾರು ಸೈಕಲ್‌ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು.

ವಿಶೇಷವಾಗಿ ವಕೀಲ ವೀರೇಂದ್ರ ನರ್ವಾಲ್ ಅವರ ಸಾವಿನ ನಂತರ ಭಯವಿಲ್ಲದೆ ಕೆಲಸ ಮಾಡಲು ಸಾಧ್ಯವಾಗದ ವಾತಾವರಣವನ್ನು ಸೃಷ್ಟಿಸಿದೆ. ಇದು ಭಾರತದ ಸಂವಿಧಾನದ 19 (1) (ಜಿ) ಅಡಿಯಲ್ಲಿ ಮತ್ತು ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆಯನ್ನು ಖಾತರಿಪಡಿಸುವ ಸಂವಿಧಾನದ 21 ನೇ ವಿಧಿಯನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಲಾದ ಅರ್ಜಿಯಲ್ಲಿ ತಿಳಿಸಲಾಗಿದೆ. ಯಾವುದೇ ವಕೀಲರ ಮೇಲೆ ಹಲ್ಲೆಯಾಗಿದ್ದರೆ ಅಥವಾ ಹಲ್ಲೆಯ ಭಯವಿದ್ದರೆ ಅಂಥವರಿಗೆ ಪೊಲೀಸ್ ರಕ್ಷಣೆಯನ್ನು ನೀಡುವ ಕಾನೂನನ್ನು ರಾಜಸ್ಥಾನ ಸರ್ಕಾರ ಈಗಾಗಲೇ ಜಾರಿಗೆ ತಂದಿದೆ ಎಂದು ವಕೀಲ ರಾಬಿನ್ ರಾಜು ಅವರ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ ಹೇಳಲಾಗಿದೆ.

ವಕೀಲ ವೃತ್ತಿಯನ್ನು ಒಂದು ಪವಿತ್ರವಾದ ವೃತ್ತಿ ಎಂದು ಪರಿಗಣಿಸಲಾಗಿದೆ. ಆದರೆ ಈ ವೃತ್ತಿಯು ಸಾಕಷ್ಟು ಅಪಾಯಗಳನ್ನು ಒಳಗೊಂಡಿರುವುದರಿಂದ ವಕೀಲರಿಗೆ ಸುರಕ್ಷಿತ ವಾತಾವರಣವನ್ನು ನಿರ್ಮಾಣ ಮಾಡುವುದು ಅಗತ್ಯವಾಗಿದೆ. ಒಂದು ಬಾರಿ ಗೂಗಲ್ ಸರ್ಚ್ ಮಾಡಿದರೂ ಸಾಕು, ಭಾರತದಲ್ಲಿ ವಕೀಲರ ಮೇಲೆ ಎಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಹಲ್ಲೆಗಳಾಗುತ್ತಿವೆ ಎಂಬುದು ತಿಳಿಯುತ್ತದೆ ಎಂದು ತಿಳಿಸಲಾಗಿದೆ.

ಘಟನೆಯ ನಂತರ, ವಕೀಲರ ಸಂರಕ್ಷಣಾ ಕಾಯ್ದೆಯನ್ನು ತ್ವರಿತವಾಗಿ ಜಾರಿಗೊಳಿಸುವ ಬೇಡಿಕೆಯನ್ನಿಟ್ಟುಕೊಂಡು ಕೆಲಸದಿಂದ ದೂರವಿರಲು ಜಿಲ್ಲಾ ವಕೀಲರ ಸಂಘಗಳು ನಿರ್ಧರಿಸಿದ್ದವು. ಹೀಗಾಗಿ ಈ ವಿಷಯದಲ್ಲಿ ತ್ವರಿತವಾಗಿ ನ್ಯಾಯಾಲಯ ಹಸ್ತಕ್ಷೇಪ ಮಾಡಬೇಕಿದೆ ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಇದನ್ನೂ ಓದಿ : ಗಂಡು ಮಗುವಿಗೆ ಜನ್ಮ ನೀಡದ ಕಾರಣಕ್ಕೆ ಪತ್ನಿಗೆ ಚಿತ್ರಹಿಂಸೆ ಆರೋಪ: ವಕೀಲ ಅರೆಸ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.