ETV Bharat / bharat

ಮದ್ರಾಸ್​ ಹೈಕೋರ್ಟ್​ ಹೆಚ್ಚುವರಿ ಜಡ್ಜ್​ ಆಗಿ ವಿಕ್ಟೋರಿಯಾ ಗೌರಿ ಪ್ರಮಾಣ.. ನೇಮಕ ಪ್ರಶ್ನಿಸಿ ಸಲ್ಲಿಸಿದ ಅರ್ಜಿ ವಜಾ - ಮದ್ರಾಸ್​ ಹೈಕೋರ್ಟ್​ ಹೆಚ್ಚುವರಿ ಜಡ್ಜ್​ ಆಗಿ ಪ್ರಮಾಣ

ಲಕ್ಷ್ಮಣ ಚಂದ್ರ ವಿಕ್ಟೋರಿಯಾ ಗೌರಿಗೆ ಪದೋನ್ನತಿ - ಮದ್ರಾಸ್​ ಹೈಕೋರ್ಟ್​ ಹೆಚ್ಚುವರಿ ಜಡ್ಜ್​​ ಆಗಿ ಪ್ರಮಾಣ ಸ್ವೀಕಾರ - ಗೌರಿ ವಿರುದ್ಧದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್​

lekshmana-chandra-victoria
ಮದ್ರಾಸ್​ ಹೈಕೋರ್ಟ್​ ಹೆಚ್ಚುವರಿ ಜಡ್ಜ್​ ಆಗಿ ಪ್ರಮಾಣ
author img

By

Published : Feb 7, 2023, 11:12 AM IST

Updated : Feb 7, 2023, 12:33 PM IST

ನವದೆಹಲಿ: ಹಿರಿಯ ವಕೀಲೆ ಲಕ್ಷ್ಮಣ ಚಂದ್ರ ವಿಕ್ಟೋರಿಯಾ ಗೌರಿ ಅವರನ್ನು ಮದ್ರಾಸ್​ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸಿದರು. ಇವರ ನೇಮಕ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಪ್ರಮಾಣವಚನ ಸ್ವೀಕಾರಕ್ಕೂ ಕೆಲವೇ ನಿಮಿಷಗಳ ಮೊದಲು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​ ಆ ಅರ್ಜಿಯನ್ನು ವಜಾ ಮಾಡಿ ಆದೇಶಿಸಿದೆ. ವಿಕ್ಟೋರಿಯಾ ಗೌರಿ ಅವರನ್ನು ನ್ಯಾಯಮೂರ್ತಿಗಳಾಗಿ ನೇಮಕ ಮಾಡಿದ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಮದ್ರಾಸ್ ಹೈಕೋರ್ಟ್‌ನ ಕೆಲವು ಬಾರ್ ಸದಸ್ಯರು ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದರು. ವಿಚಾರಣೆಯ ಬಳಿಕ ಅರ್ಜಿ ತಿರಸ್ಕೃತಗೊಂಡಿದೆ.

ಪ್ರಮಾಣಕ್ಕೂ ಮೊದಲು ಸುಪ್ರೀಂನಲ್ಲಿ ನಡೆಯಿತು ವಿಚಾರಣೆ: ಹಿರಿಯ ವಕೀಲೆ ಲಕ್ಷ್ಮಣ ಚಂದ್ರ ವಿಕ್ಟೋರಿಯಾ ಗೌರಿ ಅವರನ್ನು ಮದ್ರಾಸ್ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಇಂದು ನಡೆಯಿತು. ಅದೂ ವಿಕ್ಟೋರಿಯಾ ಗೌರಿ ಅವರು ಪ್ರಮಾಣ ವಚನ ಸ್ವೀಕರಿಸುವ ಕೆಲವೇ ನಿಮಿಷಗಳ ಮೊದಲು ಬಾರ್​ ಕೌನ್ಸಿಲ್​ ಸದಸ್ಯರು, ಗೌರಿ ಅವರ ವಿರುದ್ಧ ಸುಪ್ರೀಂಕೋರ್ಟ್​​ಗೆ ಅರ್ಜಿ ಸಲ್ಲಿಸಿ, ಪದೋನ್ನತಿ ವಾಪಸ್​ ಪಡೆಯಬೇಕು ಎಂದು ಕೋರಿದ್ದರು.

ಬೆಳಗ್ಗೆ 10.25ರ ಸುಮಾರಿಗೆ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್‌, ಗೌರಿ ಅವರ ವಿರುದ್ಧದ ಆರೋಪವನ್ನು ಕೈಬಿಟ್ಟು, ಈ ಬಗ್ಗೆ ಸಲ್ಲಿಕೆಯಾಗಿದ್ದ ಅರ್ಜಿಯನ್ನು ವಜಾ ಮಾಡಿತು. ಸುಪ್ರೀಂ ಆದೇಶ ಬಂದ 5 ನಿಮಿಷಗಳ ಬಳಿಕ ಮದ್ರಾಸ್‌ ಹೈಕೋರ್ಟ್‌ನಲ್ಲಿ ಸರಿಯಾಗಿ 10.30ಕ್ಕೆ ವಿಕ್ಟೋರಿಯಾ ಗೌರಿ ಅವರು, ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಪದೋನ್ನತಿ ವಿರುದ್ಧದ ಅರ್ಜಿಯನ್ನು ಫೆಬ್ರವರಿ 10 ರಂದು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಈ ಹಿಂದೆ ಒಪ್ಪಿಕೊಂಡಿತ್ತು. ಆದರೆ, ತುರ್ತು ವಿಚಾರಣೆ ನಡೆಸಲು ಎರಡನೇ ಬಾರಿಗೆ ಕೋರಿಕೆ ಸಲ್ಲಿಸಿದ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ಇಂದು ವಿಚಾರಣೆ ನಿಗದಿಪಡಿಸಿತ್ತು. ಗೌರಿ ಅವರ ಹೆಸರನ್ನು ಜಡ್ಜ್​ ಪದೋನ್ನತಿಗಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ ನಂತರ ಅದರ ವಿರುದ್ಧ ಆಕ್ಷೇಪ ಕೇಳಿ ಬಂದಿತ್ತು. ವಿಚಾರಣೆ ವೇಳೆ ಪೀಠ, ಕೊಲಿಜಿಯಂ "ಆಗುತ್ತಿರುವ ಕೆಲವು ಬೆಳವಣಿಗೆಗಳನ್ನು" ಗಮನಿಸುತ್ತಿದೆ ಎಂದೂ ಹೇಳಿದೆ.

ಹಿರಿಯ ವಕೀಲೆ ವಿಕ್ಟೋರಿಯಾ ಗೌರಿ ಅವರು ಕೆಲ ಸಮುದಾಯಗಳ ಬಗ್ಗೆ ದ್ವೇಷ ಭಾಷಣ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್​ ನಡೆಸಿತು. ಇದು ಸಮಂಜಸ ನ್ಯಾಯಕ್ಕೆ ತೊಡಕಾಗಲಿದೆ ಎಂದು ಹೇಳಿ ಮದ್ರಾಸ್ ಹೈಕೋರ್ಟ್‌ನ ಕೆಲವು ಬಾರ್ ಸದಸ್ಯರು ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದರು.

ಓದಿ: ಬೆಂಗಳೂರಲ್ಲಿ ಎಟಿಎಂಗೆ ತುಂಬಿಸಬೇಕಿದ್ದ 1 ಕೋಟಿ ಹಣದೊಂದಿಗೆ ಕಸ್ಟೋಡಿಯನ್ ನಾಪತ್ತೆ

Last Updated : Feb 7, 2023, 12:33 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.