ETV Bharat / bharat

ಸೂರ್ಯನನ್ನು ಅನ್ವೇಷಿಸಲು 15 ಲಕ್ಷ ಕಿಮೀ ಪ್ರಯಾಣಕ್ಕೆ ಇಸ್ರೋ ಸಿದ್ಧ, ವಿಶೇಷ ಪೂಜೆ... ಇನ್ನು ಕೆಲವೇ ಗಂಟೆಗಳಲ್ಲಿ ಗಗನಕ್ಕೆ ಚಿಮ್ಮಲಿದೆ ಆದಿತ್ಯ ಎಲ್​1 - ಸೂರ್ಯನ ಸಮೀಪಕ್ಕೆ ಉಪಗ್ರಹವನ್ನು ಉಡಾವಣೆ

ಆಗಸಕ್ಕೆ ಜಿಗಿಯಲು ಆದಿತ್ಯ ಎಲ್​1 ಉಪಗ್ರಹ ಸಜ್ಜಾಗಿದ್ದು, ಕೌಂಟ್ಡೌನ್​ ಶುರುವಾಗಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಸೂರ್ಯನನ್ನು ಅನ್ವೇಷಿಸಲು ಇಸ್ರೋ 15 ಲಕ್ಷ ಕಿಮೀ ಪ್ರಯಾಣವನ್ನು ಆರಂಭಿಸಲಿದೆ.

Aditya L1 will fly into the sky in a few hours  Aditya L1 will fly into the sky from Sriharikota  Aditya L1 launch today  ಸೂರ್ಯನನ್ನು ಅನ್ವೇಷಿಸಲು 15 ಲಕ್ಷ ಕಿಮೀ ಪ್ರಯಾಣ  ಕೆಲವೇ ಗಂಟೆಗಳಲ್ಲಿ ಗಗನಕ್ಕೆ ಚಿಮ್ಮಲಿದೆ ಆದಿತ್ಯ ಎಲ್​1  ಆಗಸಕ್ಕೆ ಜಿಗಿಯಲು ಆದಿತ್ಯ ಎಲ್​1 ಉಪಗ್ರಹ  ಸೂರ್ಯನನ್ನು ಅನ್ವೇಷಿಸಲು ಇಸ್ರೋ 15 ಲಕ್ಷ ಕಿಮೀ ಪ್ರಯಾಣ  ಚಂದ್ರಯಾನ 3ರ ಯಶಸ್ಸಿನಿಂದ ಉತ್ತೇಜಿತ  ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ  ಸೂರ್ಯನ ಸಮೀಪಕ್ಕೆ ಉಪಗ್ರಹವನ್ನು ಉಡಾವಣೆ  ತಿರುಪತಿ ಜಿಲ್ಲೆಯ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ
ಸೂರ್ಯನನ್ನು ಅನ್ವೇಷಿಸಲು 15 ಲಕ್ಷ ಕಿಮೀ ಪ್ರಯಾಣಕ್ಕೆ ಇಸ್ರೋ ಸಿದ್ಧ, ಪೂಜೆ
author img

By ETV Bharat Karnataka Team

Published : Sep 2, 2023, 7:37 AM IST

ಶ್ರೀಹರಿಕೋಟ, ಆಂಧ್ರಪ್ರದೇಶ: ಚಂದ್ರಯಾನ 3ರ ಯಶಸ್ಸಿನಿಂದ ಉತ್ತೇಜಿತವಾಗಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೂರ್ಯನ ಸಮೀಪಕ್ಕೆ ಉಪಗ್ರಹವನ್ನು ಉಡಾವಣೆಗೆ ಸಜ್ಜಾಗಿದೆ. ಈಗಾಗಲೇ ಸಿದ್ಧವಾಗಿರುವ ಈ ಉಡಾವಣೆಗೆ ತಿರುಪತಿ ಜಿಲ್ಲೆಯ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ (ಶಾರ್) ವೇದಿಕೆಯಾಗಲಿದೆ. ಸೂರ್ಯನ ವಾತಾವರಣವನ್ನು ಶೋಧಿಸಿ, ಅದರ ರಹಸ್ಯಗಳನ್ನು ಪತ್ತೆ ಹಚ್ಚಲು ಶುಕ್ರವಾರ ಮಧ್ಯಾಹ್ನ 12.10ಕ್ಕೆ ಕ್ಷಣಗಣನೆ ಆರಂಭವಾಗಿದೆ.

  • #WATCH | Aditya-L1 Mission will be launched today by the Indian Space Research Organisation (ISRO) from Sriharikota

    (Visuals from Satish Dhawan Space Centre in Sriharikota, Andhra Pradesh) pic.twitter.com/wvJZTyE0iW

    — ANI (@ANI) September 2, 2023 " class="align-text-top noRightClick twitterSection" data=" ">

ಶನಿವಾರ ಬೆಳಗ್ಗೆ 11.50ಕ್ಕೆ ಆದಿತ್ಯ-ಎಲ್1 ಉಪಗ್ರಹದೊಂದಿಗೆ ಉಡಾವಣಾ ವಾಹನ ಪಿಎಸ್‌ಎಲ್‌ವಿ-ಸಿ57 ಆಕಾಶಕ್ಕೆ ಜಿಗಿಯಲಿದೆ. ಆದಿತ್ಯ-ಎಲ್1 ಉಪಗ್ರಹವು ಭೂಮಿಯಿಂದ ಸೂರ್ಯನ ಕಡೆಗೆ 'L1' (Lagrange) ಬಿಂದುವನ್ನು ತಲುಪಲು ನಾಲ್ಕು ತಿಂಗಳ ಕಾಲ ಪ್ರಯಾಣಿಸಲಿದೆ. 15 ಲಕ್ಷ ಕಿ.ಮೀ ದೂರದಲ್ಲಿರುವ ಈ ಬಾಹ್ಯಾಕಾಶಕ್ಕೆ ಭಾರತ ಉಪಗ್ರಹವನ್ನು ಉಡಾವಣೆ ಮಾಡಿರುವುದು ಇದೇ ಮೊದಲು. ಈ ಸ್ಥಳದಿಂದ ಸೂರ್ಯನನ್ನು ಯಾವುದೇ ಅಡೆತಡೆಯಿಲ್ಲದೆ ನಿರಂತರವಾಗಿ ಅಧ್ಯಯನ ಮಾಡಬಹುದಾಗಿದೆ.

ಈ ಉಪಗ್ರಹ 7 ಸಂಶೋಧನಾ ಸಾಧನಗಳನ್ನು ಹೊಂದಿದೆ. ಅವರು ದ್ಯುತಿಗೋಳ ಮತ್ತು ಕ್ರೋಮೋಸ್ಪಿಯರ್, ಹೊರಗಿನ ಕರೋನಾ ವಲಯ ಸೇರಿದಂತೆ ಸೂರ್ಯನ ಹೊರ ಪದರಗಳನ್ನು ಅಧ್ಯಯನ ಮಾಡುತ್ತದೆ. ಇದು ಸೌರ ಜ್ವಾಲೆಗಳು, ಸೌರ ಕಣಗಳು ಮತ್ತು ಅಲ್ಲಿನ ವಾತಾವರಣದ ಹಲವು ಅಂಶಗಳನ್ನು ಪರಿಶೋಧಿಸುತ್ತದೆ. ಇದು ಸೌರ ಚಂಡಮಾರುತಗಳಿಂದ ಬಾಹ್ಯಾಕಾಶದಲ್ಲಿನ ಆಸ್ತಿಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ ಎಂದು ವಿಜ್ಞಾನಿಗಳು ನಂಬಿದ್ದಾರೆ.

Aditya L1 will fly into the sky in a few hours  Aditya L1 will fly into the sky from Sriharikota  Aditya L1 launch today  ಸೂರ್ಯನನ್ನು ಅನ್ವೇಷಿಸಲು 15 ಲಕ್ಷ ಕಿಮೀ ಪ್ರಯಾಣ  ಕೆಲವೇ ಗಂಟೆಗಳಲ್ಲಿ ಗಗನಕ್ಕೆ ಚಿಮ್ಮಲಿದೆ ಆದಿತ್ಯ ಎಲ್​1  ಆಗಸಕ್ಕೆ ಜಿಗಿಯಲು ಆದಿತ್ಯ ಎಲ್​1 ಉಪಗ್ರಹ  ಸೂರ್ಯನನ್ನು ಅನ್ವೇಷಿಸಲು ಇಸ್ರೋ 15 ಲಕ್ಷ ಕಿಮೀ ಪ್ರಯಾಣ  ಚಂದ್ರಯಾನ 3ರ ಯಶಸ್ಸಿನಿಂದ ಉತ್ತೇಜಿತ  ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ  ಸೂರ್ಯನ ಸಮೀಪಕ್ಕೆ ಉಪಗ್ರಹವನ್ನು ಉಡಾವಣೆ  ತಿರುಪತಿ ಜಿಲ್ಲೆಯ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ
ಸೂರ್ಯನನ್ನು ಅನ್ವೇಷಿಸಲು 15 ಲಕ್ಷ ಕಿಮೀ ಪ್ರಯಾಣಕ್ಕೆ ಇಸ್ರೋ ಸಿದ್ಧ

ಇಸ್ರೋ ಮುಖ್ಯಸ್ಥರಿಂದ ಪೂಜೆ: ಉಡಾವಣೆ ಕುರಿತು ಚೆನ್ನೈ ವಿಮಾನ ನಿಲ್ದಾಣದಲ್ಲಿ ಇಸ್ರೋ ಮುಖ್ಯಸ್ಥ ಡಾ.ಸೋಮನಾಥ್ ಮಾತನಾಡಿ.. 'ರಾಕೆಟ್ ಮತ್ತು ಉಪಗ್ರಹ ಸಿದ್ಧವಾಗಿದೆ. ಈಗಾಗಲೇ ರಿಹರ್ಸಲ್ ಯಶಸ್ವಿಯಾಗಿ ಮುಗಿದಿದೆ. ನಿಗದಿತ ಸಮಯದಲ್ಲಿ ನಾವು ಪ್ರಯೋಗವನ್ನು ನಡೆಸುತ್ತೇವೆ. ಚಂದ್ರಯಾನ-3 ಲ್ಯಾಂಡರ್ ಮತ್ತು ರೋವರ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. 14 ದಿನಗಳ ಅಂತ್ಯದೊಳಗೆ ತಮ್ಮ ಗುರಿ ಪೂರ್ಣಗೊಳ್ಳಲಿದೆ ಎಂದು ನಾವು ಭಾವಿಸಿದ್ದೇವೆ ಎಂದರು. ಮತ್ತೊಂದೆಡೆ ಶುಕ್ರವಾರ ಸುಳ್ಳೂರುಪೇಟೆಯ ಚೆಂಗಾಲಮ್ಮ ದೇವಸ್ಥಾನದಲ್ಲಿ ‘ಆದಿತ್ಯ-ಎಲ್1’ ಯಶಸ್ವಿಯಾಗುವಂತೆ ವಿಶೇಷ ಪೂಜೆ ಸಲ್ಲಿಸಿದರು.

ಚಂದ್ರನ ದಕ್ಷಿಣ ಧ್ರುವದ ಮೇಲೆ ಚಂದ್ರಯಾನ-3 ಅನ್ನು ಇಸ್ರೋ ಯಶಸ್ವಿಯಾಗಿ ಇಳಿಸಿದೆ. ಈಗಾಗಲೇ ವಿಕ್ರಮ್​ ಲ್ಯಾಂಡರ್​ ಹಾಗೂ ಪ್ರಜ್ಞಾನ್ ರೋವರ್​ ಮೂಲಕ ಚಂದ್ರನಲ್ಲಿನ ಹೊಸ-ಹೊಸ ವೈಜ್ಞಾನಿಕ ಅಧ್ಯಯನಗಳನ್ನು ಕೈಗೊಳ್ಳಲಾಗುತ್ತಿದೆ. ಇದರ ಬೆನ್ನಲ್ಲೇ ಇಸ್ರೋ ಸೂರ್ಯನ ಅಧ್ಯಯನದಂತಹ ಮಹತ್ವದ ಬಾಹ್ಯಾಕಾಶದ ಪ್ರಯಣ ಆರಂಭಿಸುವ ನಿರ್ಧಾರ ಕೈಗೊಂಡಿದೆ. ಇದು ಚಂದ್ರನಿಗಿಂತ ನಾಲ್ಕು ಪಟ್ಟು ದೂರದ ಪ್ರಯಾಣವಾಗಿದೆ. ಆದಿತ್ಯ-ಎಲ್1 ಇಸ್ರೋ ನಡೆಸುತ್ತಿರುವ ಮೊದಲ ಸೂರ್ಯನ ಅಧ್ಯಯನ ಉಪಗ್ರಹವೂ ಹೌದು.

ಓದಿ: Aditya L1 ಉಡಾವಣೆಗೆ ಕ್ಷಣಗಣನೆ: ಪ್ರತಿ ನಿಮಿಷಕ್ಕೊಂದು ಸೂರ್ಯನ ಫೋಟೋ ಕ್ಲಿಕ್ಕಿಸುತ್ತೆ VELC, ಸಂಶೋಧನೆ ಬಗ್ಗೆ ಇಲ್ಲಿದೆ ವಿವರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.