ಚೆನ್ನೈ(ತಮಿಳುನಾಡು): ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಜನಪ್ರಿಯ ನಟಿ ಹಾಗು ಭಾರತೀಯ ಜನತಾ ಪಾರ್ಟಿ(BJP)ಯ ನಾಯಕಿ ಖುಷ್ಬೂ ಸುಂದರ್ ಅವರ ಟ್ವಿಟರ್ ಖಾತೆಗೆ ಸೈಬರ್ ದಾಳಿಕೋರರು ಎರಡನೇ ಬಾರಿಗೆ ಕನ್ನ ಹಾಕಿದ್ದಾರೆ. ಇದೀಗ ಅವರ ಟ್ವಿಟರ್ನಲ್ಲಿದ್ದ ಎಲ್ಲ ಟ್ವೀಟ್ಗಳನ್ನು ಅಳಿಸಿ ಹಾಕಲಾಗಿದೆ.
![Kushboo Twitter account hacked](https://etvbharatimages.akamaized.net/etvbharat/prod-images/12517278_twdfdfd.jpg)
2020ರ ಏಪ್ರಿಲ್ ತಿಂಗಳಲ್ಲಿ ಖುಷ್ಬೂ ಟ್ವಿಟರ್ ಖಾತೆ ಹ್ಯಾಕ್ ಆಗಿತ್ತು. ಇದೀಗ ಮತ್ತೆ ಹ್ಯಾಕ್ ಆಗಿರುವ ಮಾಡಿರುವ ದುಷ್ಕರ್ಮಿಗಳು ಅದಕ್ಕೆ ಬ್ರಯಾನ್ ಎಂದು ಹೆಸರಿಟ್ಟಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಖುಷ್ಬೂ ತಮ್ಮ ಟ್ವಿಟರ್ ಅಕೌಂಟ್ ಹ್ಯಾಕ್ ಆಗಿದೆ ಎಂದಿದ್ದಾರೆ. ಕಳೆದ ಮೂರು ದಿನಗಳಿಂದ ನನ್ನ ಟ್ವಿಟರ್ ಖಾತೆ ಬಳಕೆ ಮಾಡಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾನು ದೂರು ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮಹಾನ್ ಕಳ್ಳನ ಹಿಡಿಯಲು ರೈತರಾದ ಪೊಲೀಸರು.. ಯಾವ ಸಿನಿಮಾಗಿಂತ ಕಮ್ಮಿಯಿಲ್ಲ ಈ ಸ್ಟೋರಿ..
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಟ್ವಿಟರ್ ಇಂಡಿಯಾ, ಮುಂದಿನ 48 ಗಂಟೆಗಳಲ್ಲಿ ಇದನ್ನ ಸರಿಪಡಿಸಲಾಗುವುದು ಎಂದು ಸ್ಪಷ್ಟನೆ ನೀಡಿದೆ.