ETV Bharat / bharat

17ನೇ ವಯಸ್ಸಿಗೇ ಲೈಂಗಿಕ ಕಿರುಕುಳ ನೀಡಿದ್ದ 'ಅಂಕಲ್​': ನಟಿ ಕುಬ್ರಾ ಸೇಠ್ ಬಿಚ್ಚಿಟ್ಟರು ಕಹಿ ಅನುಭವ ​ - ಡ್ಯಾನಿಷ್​ ಸೇಠ್​ ಸಹೋದರಿ ಕುಬ್ರಾ ಸೇಠ್​

ನಟಿ ಕುಬ್ರಾ ಸೇಠ್​ ಅವರು ಅನುಭವಿಸಿದ ಲೈಂಗಿಕ ಕಿರುಕುಳದ ಬಗ್ಗೆ ತಾವು ಬರೆದ ಓಪನ್​ ಬುಕ್​ನಲ್ಲಿ ಪ್ರಸ್ತಾಪಿಸಿದ್ದಾರೆ. ಮನೆಯ ಆಪ್ತರೊಬ್ಬರಿಂದಲೇ ತಾವು ಲೈಂಗಿಕ ಶೋಷಣೆಗೆ ಒಳಗಾಗಬೇಕಾಯಿತು ಎಂದು ಬರೆದುಕೊಂಡಿದ್ದಾರೆ.

actor-danish-sait-sister-reveals
ನಟಿ ಕುಬ್ರಾ ಸೇಠ್​
author img

By

Published : Jun 6, 2022, 7:34 PM IST

ನಟಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಗಳು ಪದೇ ಪದೆ ಕೇಳಿಬರುತ್ತಿವೆ. ಕಿರುತೆರೆ ಮತ್ತು ವೆಬ್​ಸೀರಿಸ್​ಗಳಲ್ಲಿ ಮಿಂಚುತ್ತಿರುವ ನಟಿ ಕುಬ್ರಾ ಸೇಠ್ ಕೂಡ ತಾವು 17ನೇ ವಯಸ್ಸಿಗೇ ಲೈಂಗಿಕ ಕಿರುಕುಳಕ್ಕೆ ಒಳಗಾದ ಬಗ್ಗೆ ತಮ್ಮ ಆತ್ಮಕಥನದಲ್ಲಿ ಬರೆದುಕೊಂಡಿದ್ದಾರೆ.

ಸೇಕ್ರೆಡ್ ಗೇಮ್ಸ್ ಮೂಲಕ ಖ್ಯಾತಿಗೆ ಬಂದ ನಟಿ ಕುಬ್ರಾ ಸೇಠ್​ ಅವರು 'ಓಪನ್ ಬುಕ್: ನಾಟ್ ಫುಲ್ ಎ ಮೆಮೊಯಿರ್' ಎಂಬ ಹೊಸ ಪುಸ್ತಕದಲ್ಲಿ 'ಅಂಕಲ್' ಎಂದು ಕರೆಸಿಕೊಳ್ಳುತ್ತಿದ್ದ ವ್ಯಕ್ತಿಯಿಂದ ತಾವು ಲೈಂಗಿಕವಾಗಿ ಶೋಷಣೆಗೆ ಒಳಗಾದ ಬಗ್ಗೆ ಪ್ರಸ್ತಾಪಿಸಿದ್ದಾರೆ.

ನಾನು ಚಿಕ್ಕವಳಿದ್ದಾಗ ನಮ್ಮ ಕುಟುಂಬ ಆರ್ಥಿಕವಾಗಿ ಜರ್ಝರಿತವಾಗಿತ್ತು. ಆಗ ನಮ್ಮ ಕುಟುಂಬದ ಆಪ್ತರೊಬ್ಬರು ನಮಗೆ ಹಣದ ಸಹಾಯ ಮಾಡಿದ್ದರು. ಇದರಿಂದಾಗಿ ಅವರು ನಮ್ಮ ಮನೆಗೆ ಬಂದು ಹೋಗುತ್ತಿದ್ದರು. ನಾನು ಅವರನ್ನು ಅಂಕಲ್​ ಎಂದು ಕರೆಯುತ್ತಿದ್ದೆ. ಅವರು ಬೆಂಗಳೂರಿನಲ್ಲಿ ರೆಸ್ಟೋರೆಂಟ್​ ನಡೆಸುತ್ತಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ.

ಮನೆಗೆ ಬರುತ್ತಿದ್ದ ಅವರು ನನ್ನ ಕುತ್ತಿಗೆಗೆ ಮುದ್ದಿಸುತ್ತಿದ್ದರು. ಈ ವೇಳೆ ನಾನು ಹೇಗೆ ಪ್ರತಿಕ್ರಿಯಿಸಬೇಕು ಎಂದು ಗೊತ್ತಾಗದೇ ಸುಮ್ಮನಿರುತ್ತಿದ್ದೆ. ಅವರು ಮನೆಗೆ ಬಂದಾಗಲೆಲ್ಲಾ ಚುಂಬಿಸುತ್ತಿದ್ದರು. ಒಂದು ದಿನ ನನ್ನ ತುಟಿಗೇ ಮುತ್ತಿಕ್ಕಿದ್ದರು. ಇದರಿಂದ ನಾನು ಆಘಾತಕ್ಕೊಳಗಾದೆ. ಇದನ್ನು ಪ್ರತಿರೋಧಿಸುವ ಸ್ಥಿತಿಯಲ್ಲೂ ನಾನಿರಲಿಲ್ಲ. ಕಾರಣ ಅವರು ನನ್ನ ಕುಟುಂಬಕ್ಕೆ ಹಣಕಾಸಿನ ನೆರವು ನೀಡಿದ್ದರು.

ಒಮ್ಮೆ ಕಾರಿನಲ್ಲಿ ಹೋಗುವಾಗ ಅಂಕಲ್​ ತೊಡೆ ಸವರಿ ಲೈಂಗಿಕ ಕಿರುಕುಳ ನೀಡಿದ್ದರು. ಇದಲ್ಲದೇ, ಅವರು ಹೋಟೆಲ್​ಗೆ ಕರೆದುಕೊಂಡು ಹೋಗಿ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದರು. ನನ್ನ ಜೀವನದಲ್ಲಿ ಇಷ್ಟೆಲ್ಲಾ ನಡೆದರೂ ಆಕ್ಷೇಪಿಸುವ ಸ್ಥಿತಿ ನನ್ನದಾಗಿರಲಿಲ್ಲ. ಆಗ ನನ್ನ ಕುಟುಂಬ ಆರ್ಥಿಕ ಸಂಕಷ್ಟದಲ್ಲಿತ್ತು.

ಅಂಕಲ್​ ನನ್ನ ಕುಟುಂಬಕ್ಕೆ ಆರ್ಥಿಕವಾಗಿ ಸಹಾಯ ಮಾಡಿದ್ದರಿಂದ ನಾನು ಎಲ್ಲವನ್ನೂ ಸಹಿಸಿಕೊಂಡಿದ್ದೆ. ಇವರಿಂದ ನಾನು ದೂರವಾಗಲು ಬಯಸಿದ್ದೆ. ಶಾರ್ಜಾಕ್ಕೆ ತೆರಳುವ ಅವಕಾಶ ಸಿಕ್ಕಾಗ ಖುಷಿಪಟ್ಟಿದ್ದೆ. ತಕ್ಷಣವೇ ನಾನು ಶಾರ್ಜಾಗೆ ಹೋದೆ ಎಂದು ನಟಿ ಕುಬ್ರಾ ತಮ್ಮ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ.

ಕುಬ್ರಾ ಸೇಠ್​ ಅವರು ನಟಿಯಲ್ಲದೇ, ಬರಹಗಾರ್ತಿಯೂ ಆಗಿದ್ದಾರೆ. ಸಿನಿಮಾ, ವೆಬ್​ಸಿರೀಸ್​, ಕಿರುತೆರೆಗಳಲ್ಲಿ ನಟಿಸಿದ್ದು, ನಟ ಡ್ಯಾನಿಶ್​ ಸೇಠ್​ ಅವರ ಸಹೋದರಿಯಾಗಿದ್ದಾರೆ.

ಓದಿ: 2006 ರ ವಾರಣಾಸಿ ಬಾಂಬ್ ಸ್ಫೋಟ ಪ್ರಕರಣ.. ಉಗ್ರನಿಗೆ ಮರಣದಂಡನೆ ಶಿಕ್ಷೆ ಪ್ರಕಟ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.