ETV Bharat / bharat

ದೆಹಲಿ ಪಾಲಿಕೆ ಗುದ್ದಾಟದಲ್ಲಿ ಗೆದ್ದು ಬೀಗಿದ ಆಪ್‌ನ ತೃತೀಯಲಿಂಗಿ ಅಭ್ಯರ್ಥಿ ಬಾಬಿ ಕಿನ್ನರ್ - ಆಮ್ ಆದ್ಮಿ ಪಕ್ಷ

ದೆಹಲಿ ಮಹಾನಗರ ಪಾಲಿಕೆ ಚುನಾವಣೆ: ಎಸ್‌ಸಿ ಮಹಿಳೆಯರಿಗೆ ಮೀಸಲಾಗಿದ್ದ 43ನೇ ವಾರ್ಡ್‌ ಸುಲ್ತಾನ್‌ಪುರಿ-ಎಯಿಂದ ಬಾಬಿ ಕಿನ್ನರ್‌ ಅವರಿಗೆ ಆಮ್‌ ಆದ್ಮಿ ಪಕ್ಷ ಟಿಕೆಟ್‌ ನೀಡಿತ್ತು.

ಟ್ರಾನ್ಸ್ಜೆಂಡರ್ ಅಭ್ಯರ್ಥಿ ಬಾಬಿ ಕಿನ್ನರ್
ಟ್ರಾನ್ಸ್ಜೆಂಡರ್ ಅಭ್ಯರ್ಥಿ ಬಾಬಿ ಕಿನ್ನರ್
author img

By

Published : Dec 7, 2022, 6:32 PM IST

ನವ ದೆಹಲಿ: ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ತೃತೀಯ ಲಿಂಗಿ ಅಭ್ಯರ್ಥಿ ಬಾಬಿ ಕಿನ್ನರ್ ಗೆಲುವು ಸಾಧಿಸಿದ್ದಾರೆ. ಇವರು ಪಾಲಿಕೆ ಚುನಾವಣೆಯಲ್ಲಿ ಗೆದ್ದ ಮೊದಲ ತೃತೀಯ ಲಿಂಗಿ ಅಭ್ಯರ್ಥಿ ಕೂಡಾ ಹೌದು. 38 ವರ್ಷದ ಬಾಬಿ ಕಿನ್ನರ್ 'ಹಿಂದೂ ಯುವ ಸಮಾಜ ಏಕತಾ ಅವಾಮ್ ಭಯೋತ್ಪಾದನಾ ವಿರೋಧಿ ಸಮಿತಿ'ಯ ದೆಹಲಿ ಘಟಕದ ಅಧ್ಯಕ್ಷರಾಗಿದ್ದಾರೆ. ಲೋಕಪಾಲ್‌ಗಾಗಿ ಅಣ್ಣಾ ಹಜಾರೆ ನಡೆಸುತ್ತಿದ್ದ ಆಂದೋಲನದ ಸಂದರ್ಭದಲ್ಲೂ ಬಾಬಿ ಕ್ರಿಯಾಶೀಲರಾಗಿದ್ದರು.

ಎಸ್‌ಸಿ ಮಹಿಳೆಯರಿಗೆ ಮೀಸಲಾಗಿದ್ದ 43ನೇ ವಾರ್ಡ್‌ ಸುಲ್ತಾನ್‌ಪುರಿ-ಎಯಿಂದ ಬಾಬಿ ಕಿನ್ನರ್‌ಗೆ ಟಿಕೆಟ್‌ ನೀಡಲಾಗಿತ್ತು. 2017ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

'ನನ್ನ ಸಮುದಾಯದ ಜನರೂ ಮುಂದೆ ಬರಬೇಕು': ನಾನು ಗೆದ್ದು ಬಂದರೆ ಮೊದಲು ನನ್ನ ವಾರ್ಡ್‌ನಲ್ಲಿ ಸ್ವಚ್ಛತೆಯ ಕೆಲಸ ಮಾಡುತ್ತೇನೆ. ಚುನಾವಣೆಗೆ ಸ್ಪರ್ಧಿಸಲು ನನ್ನ ಬಳಿ ಹಣವಿಲ್ಲ. ಆದರೆ, ನಾನು ಸ್ಪರ್ಧಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದರು. ನನ್ನಂತೆ ನನ್ನ ಸಮುದಾಯದ ಜನರೂ ಮುಂದೆ ಬರಬೇಕು ಮತ್ತು ರಾಜಕೀಯದಲ್ಲಿ ಪಾಲ್ಗೊಳ್ಳಬೇಕು' ಎಂದು ಬಾಬಿ ಕಿನ್ನರ್‌ ಕರೆ ಕೊಟ್ಟರು.

ಇದನ್ನೂ ಓದಿ: ದಿಗ್ಬ್ರಮೆ ಹುಟ್ಟಿಸಿದ ಪಕ್ಷದ ಆಂತರಿಕ ಸಮೀಕ್ಷೆ.. ಹಿಮಾಚಲದಲ್ಲಿ ಮತ್ತೆ ಅಧಿಕಾರ ಹಿಡಿಯಲೂ ಬಿಜೆಪಿ ಪ್ಲಾನ್ ಬಿ ರೆಡಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.