ETV Bharat / bharat

'ಮಗಳ ಕೊಂದ ಹಂತಕ ಅಫ್ತಾಬ್​​ನನ್ನು ಗಲ್ಲಿಗೇರಿಸಿ': ಶ್ರದ್ಧಾ ತಂದೆ ವಿಕಾಸ್​ ವಾಲ್ಕರ್​ ಆಗ್ರಹ - ಮಹಾರಾಷ್ಟ್ರದ ಡಿಸಿಎಂ ದೇವೇಂದ್ರ ಫಡ್ನವೀಸ್

2020ರಲ್ಲಿ ನನ್ನ ಮಗಳು ಶ್ರದ್ಧಾ ವಾಲ್ಕರ್ ನೀಡಿದ್ದ ದೂರಿನ ಬಗ್ಗೆ ಪೊಲೀಸರು ಅಂದೇ ತಕ್ಷಣದ ಕ್ರಮ ಕೈಗೊಂಡಿದರೆ ಇಂದು ಆಕೆ ಜೀವಂತವಾಗಿರುತ್ತಿದ್ದಳು ಎಂದು ತಂದೆ ವಿಕಾಸ್​ ವಾಲ್ಕರ್​ ನೊಂದು ನುಡಿದರು.

aaftab-poonawala-should-be-hanged-for-killing-my-daughter-shraddha-walkars-father
ಶ್ರದ್ಧಾ ಹಂತಕ ಅಫ್ತಾಬ್​​ನನ್ನು ಗಲ್ಲಿಗೇರಿಸಿ: ತಂದೆ ವಿಕಾಸ್​ ವಾಲ್ಕರ್​ ಆಗ್ರಹ
author img

By

Published : Dec 9, 2022, 3:59 PM IST

ಮುಂಬೈ (ಮಹಾರಾಷ್ಟ್ರ): ದೇಶವನ್ನೇ ಬೆಚ್ಚಿ ಬೀಳಿಸಿರುವ ಲಿವಿ-ಇನ್​ ರಿಲೇಷನ್​ಶಿಪ್​ನಲ್ಲಿದ್ದ ಶ್ರದ್ಧಾ ವಾಲ್ಕರ್ ಕೊಲೆ ಪ್ರಕರಣದ ಪಾತಕಿ ಅಫ್ತಾಬ್​​ ಪೂನಾವಾಲಾನನ್ನು ಗಲ್ಲಿಗೇರಿಸಬೇಕೆಂದು ಶ್ರದ್ಧಾ ತಂದೆ ವಿಕಾಸ್​​​ ವಾಲ್ಕರ್​ ಆಗ್ರಹಿಸಿದರು. ಇಂದು ಮುಂಬೈನಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ಅವರನ್ನು ವಿಕಾಸ್ ವಾಲ್ಕರ್​ ಭೇಟಿ ಮಾಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮಗಳನ್ನು ಕೊಲೆಗೈದಿರುವ ಅಫ್ತಾಬ್​​ ಪೂನಾವಾಲಾನಿಗೆ ಗರಿಷ್ಠ ಕಠಿಣ ಶಿಕ್ಷೆಯನ್ನು ವಿಧಿಸಬೇಕು ಎಂದು ಮನವಿ ಮಾಡಿದರು.

ಪೊಲೀಸರ ವಿರುದ್ಧವೂ ತನಿಖೆ ನಡೆಸಿ:​ 2020ರಲ್ಲಿ ಮಗಳು ನೀಡಿದ್ದ ದೂರಿನ ಬಗ್ಗೆ ಪೊಲೀಸರು ಅಂದೇ ತಕ್ಷಣದ ಕ್ರಮ ಕೈಗೊಂಡಿದರೆ, ಇಂದು ಆಕೆ ಜೀವಂತವಾಗಿರುತ್ತಿದ್ದಳು. ಶ್ರದ್ಧಾ ದೂರಿನ ಬಗ್ಗೆ ತನಿಖೆಗೆ ವಿಳಂಬ ಧೋರಣೆ ತೋರಿದ ಪಲ್ಘಾರ್​ ಜಿಲ್ಲೆಯ ವಾಸೈ ಮತ್ತು ನಲಸೋಪಾರ ಮತ್ತು ತುಳಿಂಜ್ ಪೊಲೀಸ್​ ಠಾಣೆಯ ಅಧಿಕಾರಿಗಳ ವಿರುದ್ಧವೂ ತನಿಖೆಯಾಗಲಿ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಶ್ರದ್ಧಾ ಹತ್ಯೆ ಪ್ರಕರಣ: ಆರೋಪಿ ಅಫ್ತಾಬ್ ನ್ಯಾಯಾಂಗ ಬಂಧನ 14 ದಿನಗಳವರೆಗೆ ವಿಸ್ತರಿಸಿದ ಕೋರ್ಟ್​​

ಪ್ರಕರಣದಲ್ಲಿ ನಮ್ಮ ಕುಟುಂಬಕ್ಕೆ ನ್ಯಾಯ ಕೊಡಿಸುವ ಬಗ್ಗೆ ದೆಹಲಿ ರಾಜ್ಯಪಾಲರು, ಮಹಾರಾಷ್ಟ್ರದ ಡಿಸಿಎಂ ದೇವೇಂದ್ರ ಫಡ್ನವೀಸ್​ ಹಾಗೂ ದೆಹಲಿ ದಕ್ಷಿಣ ವಿಭಾಗದ ಡಿಸಿಪಿ ಭರವಸೆ ನೀಡಿದ್ದಾರೆ ಎಂದು ವಿಕಾಸ್ ವಾಲ್ಕರ್​ ತಿಳಿಸಿದರು.

ಶ್ರದ್ಧಾ ವಾಲ್ಕರ್ ಕೊಲೆ ಪ್ರಕರಣದ ವಿವರ: ಶ್ರದ್ಧಾ ವಾಲ್ಕರ್ ಮತ್ತು ಆರೋಪಿ ಅಫ್ತಾಬ್​​ ಪೂನಾವಾಲಾ ಲಿವ್‌- ಇನ್​ ರಿಲೇಷನ್​ಶಿಪ್​ನಲ್ಲಿದ್ದರು. ದಕ್ಷಿಣ ದೆಹಲಿಯಲ್ಲಿ ಇಬ್ಬರೂ ವಾಸವಾಗಿದ್ದರು. ಆದರೆ, ಇದೇ ವರ್ಷದ ಮೇನಲ್ಲಿ ಅಫ್ತಾಬ್ ಪೂನಾವಾಲಾ, ಶ್ರದ್ಧಾ ವಾಲ್ಕರ್​ರನ್ನು ಕೊಂದು 35 ತುಂಡಗಳಾಗಿ ಕತ್ತರಿಸಿದ್ದ. ದೇಹದ ತಂಡುಗಳನ್ನು 300 ಲೀಟರ್​ ಫ್ರಿಡ್ಜ್​​ನಲ್ಲಿ ಸುಮಾರು 3 ವಾರಗಳ ಕಾಲ ಇರಿಸಿದ್ದ. ಇದಾದ ನಂತರ ನಾನಾ ದೇಹದ ಭಾಗಗಳನ್ನು ಬೇರೆ ಬೇರೆ ಕಡೆಗಳಲ್ಲಿ ಅಫ್ತಾಬ್​ ಎಸೆದಿದ್ದ ಎಂಬ ಆಘಾತಕಾರಿ ಮಾಹಿತಿ ಬಯಲಿಗೆ ಬಂದಿತ್ತು.

ಅಫ್ತಾಬ್ ಪೂನಾವಾಲಾನ ದುಷ್ಕೃತ್ಯ ಇಡೀ ದೇಶದಲ್ಲಿ ತಲ್ಲಣವನ್ನೇ ಸೃಷ್ಟಿಸಿತ್ತು. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ಅನೇಕ ಮಹತ್ವದ ಅಂಶಗಳು ಬೆಳಕಿಗೆ ಬಂದಿವೆ. ಅಫ್ತಾಬ್​ ಗಾಂಜಾ ವ್ಯಸನಿಯಾಗಿದ್ದ. ಅಲ್ಲದೇ, 2020ರಲ್ಲೇ ಹಲ್ಲೆ, ನಿಂದನೆ ಮತ್ತು ಕೊಲೆ ಮಾಡುವ ಬಗ್ಗೆ ಬೆದರಿಕೆ ಹಾಕುತ್ತಿದ್ದ ಆರೋಪಿಯ ವಿರುದ್ಧ ಮಹಾರಾಷ್ಟ್ರದ ಪಲ್ಘಾರ್​ ಜಿಲ್ಲೆಯ ತುಳಿಂಜ್ ಪೊಲೀಸ್​ ಠಾಣೆಗೆ ಶ್ರದ್ಧಾ ದೂರು ನೀಡಿದ್ದರು ಎಂದು ದಾಖಲೆಗಳಿಂದ ಬಯಲಾಗಿತ್ತು.

ಇದನ್ನೂ ಓದಿ: ಶ್ರದ್ಧಾ ಶವದ ಪಕ್ಕ ಕುಳಿತು ಗಾಂಜಾ ಸೇದಿದ್ದ ಅಫ್ತಾಬ್: ಮತ್ತೊಂದು ಬ್ಯಾಗ್​ ಪತ್ತೆ, ಸ್ನೇಹಿತರ ಚಾಟಿಂಗ್​ ಪರಿಶೀಲನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.