ಪೂರ್ವ ಗೋದಾವರಿ(ಆಂಧ್ರ ಪ್ರದೇಶ): ಕಚ್ಚಾ ತೈಲ ಕಳ್ಳತನ ಮಾಡುವ ಉದ್ದೇಶದಿಂದ ಗ್ಯಾಂಗ್ವೊಂದು ಒಎನ್ಜಿಸಿ ಪೈಪ್ಲೈನ್ಗೆ ರಂಧ್ರ ಕೊರೆದು ಕಳ್ಳತನ ಯತ್ನ ನಡೆಸಿರುವ ಘಟನೆ ನಡೆದಿದೆ.
ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಉಪ್ಪಳಗುಪ್ತಮ್ ಮಂಡಲದ ವಸಲಾ ತಿಪ್ಪ ಗ್ರಾಮದ ಕರಾವಳಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ತೈಲ ಕಳ್ಳತನ ಮಾಡಲು ಮಧ್ಯರಾತ್ರಿ ಒಎನ್ಜಿಸಿ ಪೈಪ್ಲೈನ್ಗೆ ರಂಧ್ರ ಕೊರೆಯಲು ಪ್ರಯತ್ನಿಸಿದ್ದಾರೆ. ಇದನ್ನ ನೋಡಿರುವ ಸ್ಥಳೀಯರು ಅವರನ್ನ ಬೆನ್ನಟ್ಟಿದ್ದಾರೆ.
ಇದನ್ನೂ ಓದಿ: ಕೋವಿಡ್ನಿಂದ ಸತ್ತವರ ಶವ ಸಾಗಿಸಲು ಇಲ್ಲ ವಾಹನ.. ಟ್ರಕ್ನಲ್ಲಿ ತುಂಬಿ ಶವಾಗಾರಕ್ಕೆ ರವಾನೆ!
ಈ ವೇಳೆ ಕಳ್ಳರು ತಪ್ಪಿಸಿಕೊಳ್ಳುವ ಉದ್ದೇಶದಿಂದ ಓಡಿ ಹೋಗಿದ್ದಾರೆ. ಘಟನಾ ಸ್ಥಳದಲ್ಲಿ ವಾಹನ ಹಾಗೂ ತೈಲ ತುಂಬಲು ತಂದಿದ್ದ ಕ್ಯಾನ್ ಪತ್ತೆಯಾಗಿವೆ. ಪೈಪ್ಲೈನ್ ಕಳ್ಳತನಕ್ಕಾಗಿ ರಂಧ್ರ ಕೊರೆದಿರುವ ಕಾರಣ ಕಚ್ಚಾ ತೈಲ ದೊಡ್ಡ ಪ್ರಮಾಣದಲ್ಲಿ ಸೋರಿಕೆಯಾಗುತ್ತಿರುವುದು ಬೆಳಕಿಗೆ ಬಂದಿದೆ.