ETV Bharat / bharat

ಆಕ್ಸಿಜನ್​ ಕೊರತೆಯಿಂದ ದೆಹಲಿ ಆಸ್ಪತ್ರೆಯಲ್ಲಿ 8 ರೋಗಿಗಳು ಸಾವು - batra hospital in Delhi

8 patients died in delhi hospital due to oxygen shortage
ಆಕ್ಸಿಜನ್​ ಕೊರತೆಯಿಂದ 8 ರೋಗಿಗಳು ಸಾವು
author img

By

Published : May 1, 2021, 2:23 PM IST

Updated : May 1, 2021, 3:43 PM IST

14:20 May 01

ಘಟನೆ ನಡೆದ ಸುಮಾರು 2 ಗಂಟೆಯ ನಂತರ ಆಕ್ಸಿಜನ್ ತುಂಬಿದ್ದ ಟ್ಯಾಂಕರ್ ಆಸ್ಪತ್ರೆ ತಲುಪಿದೆ. ಕಳೆದ ಕೆಲ ದಿನಗಳಿಂದ ದೆಹಲಿಯ ಪ್ರಮುಖ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಎದುರಾಗಿದ್ದು, ಅನೇಕರು ಅಸುನೀಗಿದ್ದಾರೆ.

ನವದೆಹಲಿ: ರಾಷ್ಟ್ರ ರಾಜಧಾನಿ ಸೇರಿದಂತೆ ದೇಶದ ವಿವಿಧ ರಾಜ್ಯಗಳು ಆಮ್ಲಜನಕದ ಅಭಾವ ಎದುರಿಸುತ್ತಿವೆ. ಇದೀಗ ಆಕ್ಸಿಜನ್​ ಕೊರತೆಯಿಂದಾಗಿ ದೆಹಲಿಯ ಬಾತ್ರಾ ಆಸ್ಪತ್ರೆಯಲ್ಲಿ 8 ರೋಗಿಗಳು ಕೊನೆಯುಸಿರೆಳೆದಿದ್ದಾರೆ.  

ಮತಪಟ್ಟವರಲ್ಲಿ ಓರ್ವ ವೈದ್ಯ ಸೇರಿದ್ದಾರೆ. ಇದರಲ್ಲಿ 6 ಮಂದಿ ಆಸ್ಪತ್ರೆಯ ಐಸಿಯು ವಾರ್ಡ್​​ನಲ್ಲಿದ್ದರೆ ಇನ್ನಿಬ್ಬರು ಸಾಮಾನ್ಯ ವಾರ್ಡ್​​​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಘಟನೆ ನಡೆದ ಸುಮಾರು 2 ಗಂಟೆಯ ನಂತರ ಆಕ್ಸಿಜನ್ ತುಂಬಿದ್ದ ಟ್ಯಾಂಕರ್ ಆಸ್ಪತ್ರೆ ತಲುಪಿದೆ.  ಕಳೆದ ಕೆಲ ದಿನಗಳಿಂದ ದೆಹಲಿಯ ಪ್ರಮುಖ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಎದುರಾಗಿದ್ದು, ಅನೇಕರು ಅಸುನೀಗಿದ್ದಾರೆ. 

ಇತ್ತ ಹಾಸಿಗೆ ಲಭ್ಯತೆ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ಸಿಎಂ ಕೇಜ್ರಿವಾಲ್​ ಇಲ್ಲಿನ ರಾಧಾ ಸೋಮಿ ಕೇಂದ್ರದಲ್ಲಿ 5,000 ಹಾಸಿಗೆಗಳನ್ನು ಸಿದ್ಧಪಡಿಸಲಾಗಿದೆ. ಆದರೆ, ಅದರಲ್ಲಿ 150 ಹಾಸಿಗೆಗಳು ಮಾತ್ರ ಆಕ್ಸಿಜನ್​ ಸೌಲಭ್ಯ ಹೊಂದಿದೆ. 

ಕಾಮನ್ವೆಲ್ತ್ ಕ್ರೀಡಾಕೂಟ ಮೈದಾನ ಮತ್ತು ಯಮುನಾ ಕ್ರೀಡಾ ಸಂಕೀರ್ಣದಲ್ಲಿ 1,300 ಹಾಸಿಗೆಗಳನ್ನು ಸಿದ್ಧಪಡಿಸಲಾಗಿದೆ. ಬುರಾರಿಯಲ್ಲಿ 2,500 ಹಾಸಿಗೆಗಳನ್ನು ಸಿದ್ಧಪಡಿಸಲಾಗಿದೆ. ಇಂದು ನಾವು ಆಮ್ಲಜನಕವನ್ನು ಪಡೆದರೆ, ದೆಹಲಿಯಲ್ಲಿ 24 ಗಂಟೆಯೊಳಗೆ 9,000 ಆಮ್ಲಜನಕಯುಕ್ತ ಹಾಸಿಗೆಗಳು ಸಿದ್ಧವಾಗಲಿದೆ ಎಂದಿದ್ದಾರೆ. 

Last Updated : May 1, 2021, 3:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.