ETV Bharat / bharat

ಯಶಸ್ವಿ ಚಿಕಿತ್ಸೆ: ಮಹಿಳೆ ಹೊಟ್ಟೆಯಲ್ಲಿದ್ದ 8 ಕೆ.ಜಿ ತೂಕದ ಗಡ್ಡೆ ಹೊರತೆಗೆದ ವೈದ್ಯರು!

ಮಹಿಳೆ ಹೊಟ್ಟೆಯಲ್ಲಿದ್ದ 8 ಕೆ.ಜಿ ತೂಕದ ಬೃಹತ್ ಗಡ್ಡೆ ಹೊರತೆಗೆಯುವಲ್ಲಿ ತಮಿಳುನಾಡು ವೈದ್ಯರು ಯಶಸ್ವಿ ಆಗಿದ್ದಾರೆ.

author img

By ETV Bharat Karnataka Team

Published : Oct 7, 2023, 10:52 AM IST

tumor removed from woman's stomach
ಬೃಹತ್ ಗಡ್ಡೆ ಹೊರತೆಗೆದ ವೈದ್ಯರು

ರಾಣಿಪೇಟ್​ (ತಮಿಳುನಾಡು): ಕಳೆದ ಆರು ತಿಂಗಳಿಂದ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ 49ರ ಹರೆಯದ ಉಮಾ ಎಂಬ ಮಹಿಳೆಯ ಉದರದಲ್ಲಿದ್ದ 8 ಕೆ.ಜಿ ತೂಕದ ಗಡ್ಡೆಯನ್ನು (leiomyoma tumor) ಹೊರತೆಗೆಯುವಲ್ಲಿ ರಾಣಿಪೇಟೆಯ ರಾಜೇಶ್ವರಿ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ.

ಕ್ಲೀನರ್ ಮಣಿ ಅವರ ಪತ್ನಿ ಉಮಾ ತಿಮಿರಿ ಬಳಿಯ ತಮರೈಪಾಕ್ಕಂನವರು. ಸಮರ್ಪಕ ಸೌಲಭ್ಯ ಮತ್ತು ಅರಿವಿನ ಕೊರತೆ ಹಿನ್ನೆಲೆ ಉಮಾ ಅವರು ತಮ್ಮ ಹೊಟ್ಟೆ ನೋವಿಗೆ ವೈದ್ಯಕೀಯ ಚಿಕಿತ್ಸೆ ಪಡೆಯೋದನ್ನು ಸಾಕಷ್ಟು ವಿಳಂಬ ಮಾಡಿದ್ದರು. ನಿರಂತರವಾಗಿ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿತ್ತು. ನಾಲ್ಕು ದಿನಗಳ ಹಿಂದೆ ಮಹಿಳೆಯನ್ನು ರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡಾ. ಕಪಿಲ್ ನಾಗರಾಜ್ ಮತ್ತು ಮೊಹಮ್ಮದ್ ಸಹಿತ್ ನೇತೃತ್ವದ ವೈದ್ಯಕೀಯ ತಂಡ ಸಂಪೂರ್ಣ ತಪಾಸಣೆ ನಡೆಸಿ, ಸ್ಕ್ಯಾನ್ ಕೂಡ ನಡೆಸಿದೆ.

ಮೂರು ಗಂಟೆ ಶಸ್ತ್ರಚಿಕಿತ್ಸೆ: ಸ್ಕ್ಯಾನಿಂಗ್​ನಲ್ಲಿ ಉಮಾ ಅವರ ಗರ್ಭಾಶಯದಲ್ಲಿ 'leiomyoma' ಎಂದು ಹೆಸರಿಸಲ್ಪಡುವ ವೇಗವಾಗಿ ಬೆಳೆಯುವ ಗೆಡ್ಡೆ ಇರುವುದು ಪತ್ತೆ ಆಗಿದೆ. ಸಮಯ ವ್ಯರ್ಥ ಮಾಡದೇ, ಉಮಾ ಅವರಿಗೆ ಚಿಕಿತ್ಸೆ ಕೊಡಲು ವೈದ್ಯಕೀಯ ತಂಡ ಮುಂದಾಯಿತು. ಮಹಿಳೆಗೆ ಮೂರು ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಉಮಾ ಅವರಿಗೆ ಯಾವುದೇ ರೀತಿಯ ಹಾನಿಯಾಗದಂತೆ 8 ಕೆ.ಜಿ ತೂಕದ ಬೃಹತ್ ಗಡ್ಡೆಯನ್ನು ಉದರದಿಂದ ಹೊರತೆಗೆಯುವಲ್ಲಿ ವೈದ್ಯರ ತಂಡ ಯಶಸ್ವಿಯಾಗಿದೆ.

ವೈದ್ಯಕೀಯ ಚಿಕಿತ್ಸೆಯ ಮಹತ್ವ: ಯಶಸ್ವಿ ಶಸ್ತ್ರಚಿಕಿತ್ಸೆ ನಂತರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಡಾ. ಕಪಿಲ್ ನಾಗರಾಜ್​ ಇಂತಹ ವೇಗವಾಗಿ ಬೆಳೆಯುವ ಗಡ್ಡೆಗಳನ್ನು ಶೀಘ್ರ ಪತ್ತೆ ಹಚ್ಚಿ ಚಿಕಿತ್ಸೆ ನೀಡುವುದರ ಮಹತ್ವದ ಬಗ್ಗೆ ವಿವರಣೆ ನೀಡಿದರು. ಇಂತಹ ಪರಿಸ್ಥಿತಿಗಳನ್ನು ನಿರ್ಲಕ್ಷಿಸುವುದು ಕ್ಯಾನ್ಸರ್​ಗೆ ಕಾರಣವಾಗಬಹುದು. ಆರೋಗ್ಯ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಯಾವುದೇ ರೀತಿಯ ರೋಗಲಕ್ಷಣ ಅಥವಾ ಅಸ್ವಸ್ಥತೆ ನಿಮ್ಮ ಗಮನಕ್ಕೆ ಬಂದರೆ ಆ ಕೂಡಲೇ ವೈದ್ಯಕೀಯ ಚಿಕಿತ್ಸೆ ಪಡೆಯುವಂತೆ ಅವರು ಸಲಹೆ ನೀಡಿದರು.

ಇದನ್ನೂ ಓದಿ: ಪ್ರೀತಿಗೆ ಮತ್ತೊಂದು ಅವಕಾಶ: ಮಾಜಿ ಪ್ರೇಯಸಿ ಕೈ ಹಿಡಿಯಲಿದ್ದಾರೆ ಜನಪ್ರಿಯ ನಟ ವಿದ್ಯುತ್​ ಜಮ್ವಾಲ್​​

ರಾಜೇಶ್ವರಿ ಆಸ್ಪತ್ರೆಯ ನುರಿತ ವೈದ್ಯಕೀಯ ತಂಡದ ಪ್ರಯತ್ನದಿಂದಾಗಿ ಉಮಾ ಅವರು ಸದ್ಯ ಆರೋಗ್ಯವಾಗಿದ್ದಾರೆ. ಅವರ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಈ ಬೃಹತ್ ಟ್ಯೂಮರ್ ಅನ್ನು ಯಶಸ್ವಿಯಾಗಿ ತೆಗೆದು ಹಾಕಿರುವುದು ಕೇವಲ ಉಮಾ ಅವರ ನೋವನ್ನು ನಿವಾರಿಸಿದ್ದು ಮಾತ್ರವಲ್ಲದೇ, ಗಂಭೀರ ಆರೋಗ್ಯ ಸಮಸ್ಯೆ ತಡೆಗಟ್ಟುವಲ್ಲಿ ಸಕಾಲಿಕ ವೈದ್ಯಕೀಯ ಚಿಕಿತ್ಸೆಯ ಪ್ರಾಮುಖ್ಯತೆಯನ್ನು ಎತ್ತಿ ಹಿಡಿದಿದೆ. ಹಾಗಾಗಿ ನಿಮ್ಮ ಆರೋಗ್ಯದ ಕಡೆಯೂ ಗಮನ ಇರಲಿ. ಯಾವುದೇ ರೀತಿಯಲ್ಲೂ ನಿರ್ಲಕ್ಷ್ಯ ವಹಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ.

ಇದನ್ನೂ ಓದಿ: ಡಿಜಿಟಲ್ ಮಾಧ್ಯಮ ನ್ಯೂಸ್​ಕ್ಲಿಕ್ ಪ್ರಕರಣ: ಪತ್ರಕರ್ತೆ ಮನೆ ಮೇಲೆ ದಾಳಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.