ETV Bharat / bharat

ದೇಶೀಯ ಮಾರಾಟಗಾರರಿಂದ ಶೇ 64 ರಷ್ಟು ಶಸ್ತ್ರಾಸ್ತ್ರಗಳ ಸಂಗ್ರಹ: ರಾಜ್ಯಸಭೆಗೆ ಮಾಹಿತಿ ನೀಡಿದ ಕೇಂದ್ರ - ಕೇಂದ್ರವು ಭಾರತೀಯ ಮಾರಾಟಗಾರರಿಂದ ಶೇ 64 ರಷ್ಟು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದೆ

2020-21ರಲ್ಲಿ ಭಾರತೀಯ ಮಾರಾಟಗಾರರಿಂದ 76073.98 ಕೋಟಿ ರೂಪಾಯಿ ಮೌಲ್ಯದ ಶಸ್ತ್ರಾಸ್ತ್ರಗಳ ಖರೀದಿಯಾಗಿದೆ ಎಂದು ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ಹೇಳಿದರು.

ರಾಜ್ಯಸಭೆಗೆ ಮಾಹಿತಿ ನೀಡಿದ ಕೇಂದ್ರ
ರಾಜ್ಯಸಭೆಗೆ ಮಾಹಿತಿ ನೀಡಿದ ಕೇಂದ್ರ
author img

By

Published : Dec 13, 2021, 9:34 PM IST

ನವದೆಹಲಿ: 2020-21ರಲ್ಲಿ 76073.98 ಕೋಟಿ ಮೌಲ್ಯದ ಶೇ.64ರಷ್ಟು ಶಸ್ತ್ರಾಸ್ತ್ರ ಖರೀದಿಯನ್ನು ಭಾರತೀಯ ಮಾರಾಟಗಾರರಿಂದ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ಮಾಹಿತಿ ನೀಡಿದೆ.

ಈ ಮಾಹಿತಿಯನ್ನು ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ಅವರು ನೀಡಿದರು. ಹಾಗೆಯೇ 2020-21ರಲ್ಲಿ ವಿದೇಶಿ ಮಾರಾಟಗಾರರಿಂದ 42,786.54 ಕೋಟಿ ರೂಪಾಯಿ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡಲಾಗಿದೆ ಎಂದು ಇದೇ ವೇಳೆ ತಿಳಿಸಿದರು.

2019-20ರಲ್ಲಿ ಭಾರತೀಯ ಮಾರಾಟಗಾರರಿಂದ ಶಸ್ತ್ರಾಸ್ತ್ರ ಸಂಗ್ರಹಣೆಯು ಬಹುಪಾಲು ಶೇ. 60 ರ ಸಮೀಪದಲ್ಲಿಯೇ ಉಳಿದಿತ್ತು. ಸಂಬಂಧಿತ ಸಂಗ್ರಹಣೆಯು 52,848.11 ಕೋಟಿಗಳಷ್ಟಾಗಿದೆ. ಆ ವರ್ಷದಲ್ಲಿ ಒಟ್ಟು ಸಂಗ್ರಹಣೆಯ ಶೇ 58.07 ರಷ್ಟಿತ್ತು ಎಂದು ಹೇಳಿದರು.

ಇದನ್ನೂ ಓದಿ: ಜಮ್ಮು- ಕಾಶ್ಮೀರದ ಝೀವಾನ್​ನಲ್ಲಿ ಉಗ್ರರ ದಾಳಿ.. 8 ಯೋಧರಿಗೆ ಗಾಯ.. ನಾಲ್ವರ ಸ್ಥಿತಿ ಗಂಭೀರ

ಹಾಗೆಯೇ 2019-20 ರಲ್ಲಿ ವಿದೇಶಿ ಮಾರಾಟಗಾರರಿಂದ ಸಂಗ್ರಹಿಸಲಾದ ಒಟ್ಟು ಮೌಲ್ಯದ ಶಸ್ತ್ರಾಸ್ತ್ರಗಳು 38156.83 ಕೋಟಿ ರೂ.ಗಳು. 2018-19ರಲ್ಲಿ ಭಾರತೀಯ ಮಾರಾಟಗಾರರಿಂದ ಶಸ್ತ್ರಾಸ್ತ್ರಗಳ ಸಂಗ್ರಹವು ವಿದೇಶಿ ಮಾರಾಟಗಾರರಿಂದ ಸಂಗ್ರಹಣೆಗಿಂತ ಹೆಚ್ಚಾಗಿದೆ. ವರ್ಷದಲ್ಲಿ ಭಾರತೀಯ ಮಾರಾಟಗಾರರಿಂದ ಸಂಗ್ರಹಿಸಲಾದ ಶಸ್ತ್ರಾಸ್ತ್ರಗಳು ಒಟ್ಟು ಸಂಗ್ರಹಣೆಯ 51.32 ಪ್ರತಿಶತದಷ್ಟಿದೆ ಎಂದು ರಕ್ಷಣಾ ಖಾತೆ ರಾಜ್ಯ ಸಚಿವರು ಸದನಕ್ಕೆ ಮಾಹಿತಿ ನೀಡಿದರು.

ವರ್ಷದಲ್ಲಿ ಭಾರತೀಯ ಮಾರಾಟಗಾರರಿಂದ 38,956 ಕೋಟಿ ರೂ. ಮೌಲ್ಯದ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲಾಗಿದೆ. ವಿದೇಶಿ ಮಾರಾಟಗಾರರಿಗೆ ಸಂಬಂಧಿಸಿದಂತೆ ಅವರಿಂದ 36957.06 ಕೋಟಿ ರೂ. ಮೌಲ್ಯದ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.