ETV Bharat / bharat

ಹಗಲಿಡೀ ದುಡಿದು ಸಿಹಿನಿದ್ರೆಯಲ್ಲಿದ್ದ ಆರು ಮಂದಿ ಕಾರ್ಮಿಕರು ಚಿರನಿದ್ರೆಗೆ ಜಾರಿದ್ರು! - ಆಂಧ್ರಪ್ರದೇಶಧ ಗುಂಟೂರು

ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಆರು ಮಂದಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದಿದೆ.

6 migrant workers found dead
6 migrant workers found dead
author img

By

Published : Jul 30, 2021, 4:44 PM IST

Updated : Jul 30, 2021, 4:59 PM IST

ಗುಂಟೂರು(ಆಂಧ್ರಪ್ರದೇಶ): ಬಿಹಾರ ಹಾಗೂ ಒಡಿಶಾ ಮೂಲದ ಆರು ಕೂಲಿ ಕಾರ್ಮಿಕರು ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ. ರಾತ್ರಿ ಮಲಗಿದ್ದ ಸಂದರ್ಭದಲ್ಲಿ ವಿದ್ಯುತ್​ ಸ್ಪರ್ಶಿಸಿ​ ಇವರು ಸಾವನ್ನಪ್ಪಿರುವ ಅನುಮಾನವಿದೆ.

ಹಗಲಿಡೀ ದುಡಿದು ಸಿಹಿನಿದ್ರೆಯಲ್ಲಿದ್ದ ಆರು ಮಂದಿ ಕಾರ್ಮಿಕರು ಚಿರನಿದ್ರೆಗೆ ಜಾರಿದ್ರು

ಗುಂಟೂರು ಜಿಲ್ಲೆಯ ರೇಪಲ್ಲೆ ಗ್ರಾಮದಲ್ಲಿನ ಮನೆವೊಂದರಲ್ಲಿ ಈ ಘಟನೆ ನಡೆದಿದೆ. ಘಟನೆ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಪೊಲೀಸರು ಸ್ಥಳಕ್ಕಾಗಮಿಸಿದ್ದು, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಮೃತರನ್ನು ರಾಮಮೂರ್ತಿ, ಕಿರಣ್​, ಮನೋಜ್, ಮಹೇಂದ್ರ, ನವೀನ್​ ಹಾಗೂ ಪಂಡೋಬಾ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಆಕ್ಸಿಸ್​ ಬ್ಯಾಂಕ್​ ಮ್ಯಾನೇಜರ್​​​ನಿಂದ ಐಸಿಐಸಿಐ ಬ್ಯಾಂಕ್ ಲೂಟಿ: ತಡೆಯಲು ಬಂದ ಅಧಿಕಾರಿಯ ಕೊಲೆ

ಇಂದು ಬೆಳಗ್ಗೆ ಸಿಗಡಿ ಮರಿ ಸಾಕಾಣಿಕೆ ಕೇಂದ್ರದಲ್ಲಿ ಕಾರ್ಮಿಕರು ಶವವಾಗಿ ಪತ್ತೆಯಾಗಿದ್ದು, ವಿದ್ಯುತ್​ ಶಾಕ್​ ಹೊಡೆದು ಇವರು ಪ್ರಾಣ ಕಳೆದುಕೊಂಡಿದ್ದಾರೆಂದು ಶಂಕಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Last Updated : Jul 30, 2021, 4:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.