ETV Bharat / bharat

30 ವರ್ಷದ ವಿಧವೆಯ ಕೈ ಹಿಡಿದ 50 ವರ್ಷದ ವರ... ಇದೊಂದು ವಿಭಿನ್ನ ಪ್ರೇಮ ಕಹಾನಿ! - Love Marriage in Aurangabad

ಕೂಲಿ ಕೆಲಸ ಮಾಡ್ತಿದ್ದ ಜಾಗದಲ್ಲಿ ಪರಿಚಯವಾದ ಜೋಡಿ ಇದೀಗ ಎರಡು ಗ್ರಾಮಸ್ಥರನ್ನ ಒಪ್ಪಿಸಿ ಮದುವೆ ಮಾಡಿಕೊಂಡಿದ್ದು, ಬಿಹಾರದ ಔರಂಗಾಬಾದ್​ನಲ್ಲಿ ಈ ವಿಭಿನ್ನ ಮ್ಯಾರೇಜ್​​ ನಡೆದಿದೆ.

50 year old man Marriage
50 year old man Marriage
author img

By

Published : Dec 17, 2021, 1:06 AM IST

ಔರಂಗಾಬಾದ್(ಬಿಹಾರ)​: ಬಿಹಾರದ ಔರಂಗಾಬಾದ್​ನಲ್ಲಿ ವಿಭಿನ್ನ ಪ್ರೇಮ ವಿವಾಹವೊಂದು ನಡೆದಿದ್ದು, 50 ವರ್ಷದ ವರ 30 ವರ್ಷದ ವಿಧವೆಯ ಕೈಹಿಡಿದಿದ್ದಾನೆ. ಇವರಿಬ್ಬರ ಪ್ರೇಮ ವಿವಾಹ ಇದೀಗ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.

ಔರಂಗಾಬಾದ್​ ಜಿಲ್ಲೆಯ ಗೋಹ್​ ಬ್ಲಾಕ್​ನ ರುಕುಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ವರನಿಗೆ 50 ವರ್ಷವಾಗಿದ್ದು, ವಧುವಿಗೆ 30 ವರ್ಷ ವಯಸ್ಸು. ವಿಶೇಷವೆಂದರೆ ಇಬ್ಬರೂ ಬೇರೆ ಬೇರೆ ಜಾತಿಗೆ ಸೇರಿದವರಾಗಿದ್ದು, ಊರಿನ ಜನರನ್ನ ಒಪ್ಪಿಸಿ, ಮದುವೆ ಮಾಡಿಕೊಂಡಿದ್ದಾರೆ. ಈ ನವಜೋಡಿ ನೋಡಲು ಇದೀಗ ಜನಸಾಗರವೇ ಹರಿದು ಬಂದಿದೆ.

30 ವರ್ಷದ ವಿಧವೆಯ ಕೈ ಹಿಡಿದ 50 ವರ್ಷದ ವರ

ರುಕುಂಡಿ ಗ್ರಾಮದ 50 ವರ್ಷದ ಶಿವಬರತ್​ ಪಾಸ್ವಾನ್​ ಅವರ ಪತ್ನಿ ಮೃತಪಟ್ಟಿದ್ದು, ಗಯಾ ಜಿಲ್ಲೆಯ ಶೇರ್ಘಾಟಿ ನಿವಾಸಿಯಾಗಿರುವ 30 ವರ್ಷದ ರಮ್ಮಣಿ ದೇವಿ ಗಂಡ ಸಹ ಸಾವನ್ನಪ್ಪಿದ್ದಾನೆ. ಇಬ್ಬರು ಹಸ್ಪುರ್​ ಬ್ಲಾಕ್​ನ ಟೆಟ್ರಾಹಿ ಗ್ರಾಮದಲ್ಲಿ ಕೂಲಿ ಕೆಲಸ ಮಾಡ್ತಿದ್ದರು. ಈ ಸಮಯದಲ್ಲಿ ಇಬ್ಬರು ಪರಸ್ಪರ ಇಷ್ಟಪಡಲು ಶುರು ಮಾಡಿದ್ದು, ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.

ಇದನ್ನೂ ಓದಿರಿ: ಒಮಿಕ್ರಾನ್​ ಹರಡಲು ಕಾರಣವಾಯ್ತಾ ದೆಹಲಿ ಮ್ಯಾರೇಜ್​​ ಪಾರ್ಟಿ... ಐವರ ಟ್ರಾವೆಲ್​ ಹಿಸ್ಟರಿ ಹೀಗಿದೆ ನೋಡಿ!

ಇದಕ್ಕೆ ಸಂಬಂಧಿಸಿದಂತೆ ತಾವು ಕೆಲಸ ಮಾಡುತ್ತಿದ್ದ ಮಾಲೀಕ ಉಪೇಂದ್ರ ಸಿಂಗ್​​ ಅವರಿಗೆ ಮಾಹಿತಿ ನೀಡಿದ್ದಾರೆ. ಆದರೆ ಆರಂಭದಲ್ಲಿ ಇದಕ್ಕೆ ಜಾತಿ ಅಡ್ಡ ಬಂದಿದೆ. ಆದರೆ ತದನಂತರ ಜನರನ್ನ ಒಪ್ಪಿಸಿದ್ದಾರೆ. ಈ ವೇಳೆ ಎರಡು ಗ್ರಾಮಸ್ಥರು ಮುಂದೆ ನಿಂತು ಸೂರ್ಯನ ದೇವಾಲಯದಲ್ಲಿ ಅದ್ಧೂರಿಯಾಗಿ ಮದುವೆ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.