ನವದೆಹಲಿ: ದೇಶದಲ್ಲಿ ಈವರೆಗೆ 4,54,049 ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಸುಮಾರು 7 ತಿಂಗಳ ಬಳಿಕ 2 ಲಕ್ಷಕ್ಕಿಂತಲೂ ಕಡಿಮೆ ಕೊರೊನಾ ಸಕ್ರಿಯ ಪ್ರಕರಣಗಳು ವರದಿಯಾಗಿದ್ದು, 140 ಸಾವುಗಳು ಸಂಭವಿಸಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಕೇರಳ ಮತ್ತು ಮಹಾರಾಷ್ಟ್ರಗಳಲ್ಲಿ ಮಾತ್ರ 50 ಸಾವಿರಕ್ಕೂ ಅಧಿಕ ಆ್ಯಕ್ಟಿವ್ ಕೇಸ್ಗಳಿವೆ. ವ್ಯಾಕ್ಸಿನ್ ನೀಡಿದ ನಂತರ ಶೇ 0.18 ಜನರಿಗೆ ಮಾತ್ರ ಅಡ್ಡ ಪರಿಣಾಮಗಳಾದವು. ಅದರಲ್ಲಿ 0.002 ರಷ್ಟು ಜನರನ್ನು ಮಾತ್ರ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಬಗ್ಗೆ ಯಾವುದೇ ಅನುಮಾನ ಬೇಡ, ಎರಡು ಲಸಿಕೆಗಳೂ ಸುರಕ್ಷಿತವಾಗಿವೆ. ಒಂದು ವೇಳೆ ಲಸಿಕೆಯಿಂದ ಅಡ್ಡಪರಿಣಾಮಗಳು ಉಂಟಾದರೆ ಆಸ್ಪತ್ರೆ ವೆಚ್ಚವನ್ನು ಅಧಿಕಾರಿಗಳೇ ಭರಿಸುತ್ತಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಲಸಿಕೆ ಬಗೆಗೆ ಜನರಿಗಿರುವ ಗೊಂದಲ ದೂರವಾಗಬೇಕು. ಆಗ ಮಾತ್ರ ನಾವು ಕೋವಿಡ್ಅನ್ನು ಸೋಲಿಸಲು ಸಾಧ್ಯ ಎಂದು ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪಾಲ್ ಹೇಳಿದ್ದಾರೆ. ವ್ಯಾಕ್ಸಿನ್ಗಾಗಿ ಇಡೀ ಜಗತ್ತು ಹಪಹಪಿಸುತ್ತಿದೆ. ಆದರೆ, ನಮ್ಮ ಜತೆ ವ್ಯಾಕ್ಸಿನ್ ಹಿಂಪಡೆಯಲು ಹಿಂದೇಟು ಹಾಕಿದರೆ, ನಾವು ನಮ್ಮ ಸಾಮಾಜಿಕ ಜವಾಬ್ದಾರಿಯನ್ನು ಪೂರೈಸುತ್ತಿಲ್ಲ ಎಂದರ್ಥ. ದಯವಿಟ್ಟು ಆರೋಗ್ಯ ಕಾರ್ಯಕರ್ತರು ವ್ಯಾಕ್ಸಿನ್ ಪಡೆಯಿರಿ ಎಂದು ಮನವಿ ಮಾಡಿದರು. ಶೀಘ್ರದಲ್ಲೇ ಮೂಗಿನ ಮೂಲಕ ಹಾಕುವ ಲಸಿಕೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಆಗ ಚುಚ್ಚುಮದ್ದಿನ ಅವಶ್ಯಕತೆ ಇರಲ್ಲ ಎಂದರು.
ಅಲ್ಲದೆ, ಬ್ರಿಟನ್ನಿಂದ ಬಂದಿರುವ 141 ಜನರಿಗೆ ಕೋವಿಡ್ ರೂಪಾಂತರ ದೃಢಪಟ್ಟಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.