ETV Bharat / bharat

ಹರಿಯಾಣದ ನಾಲ್ವರು ಶಾಸಕರಿಗೆ ವಿದೇಶದಿಂದ ಕೊಲೆ ಬೆದರಿಕೆ.. ಮೊಬೈಲ್​ ಸಂಖ್ಯೆ​ ಪಾಕ್​ನಲ್ಲಿ ಆ್ಯಕ್ಟಿವ್​ - ಪಂಜಾಬ್‌ನ ಕೆಲವು ಮಾಜಿ ಶಾಸಕರಿಗೂ ಬೆದರಿಕೆ ಕೆರೆಗಳು

ಹರಿಯಾಣ ಶಾಸಕರಿಗೆ ಕೊಲೆ ಬೆದರಿಕೆ - ದೂರವಾಣಿ ಸಂಖ್ಯೆ ಜಾಡು ಹಿಡಿದ ಪೊಲೀಸರಿಗೆ ಸಿಕ್ತು ಮಹತ್ವದ ಮಾಹಿತಿ- ಮೊಬೈಲ್​ ನಂಬರ್​ಗಳು ಪಾಕಿಸ್ತಾನದಲ್ಲಿ ಆ್ಯಕ್ಟಿವ್​

4 Hry MLAs received death threat calls from Middle East: Police
ಹರಿಯಾಣದ ನಾಲ್ವರು ಶಾಸಕರಿಗೆ ವಿದೇಶದಿಂದ ಕೊಲೆ ಬೆದರಿಕೆ ಕೆರೆಗಳು
author img

By

Published : Jul 31, 2022, 7:03 PM IST

ಚಂಡೀಗಢ (ಹರಿಯಾಣ): ಹರಿಯಾಣದ ನಾಲ್ವರು ಶಾಸಕರಿಗೆ ವಿದೇಶದಿಂದ ಕೊಲೆ ಬೆದರಿಕೆ ಮತ್ತು ಸುಲಿಗೆ ಕೆರೆಗಳು ಬಂದಿವೆ. ಜೂನ್ 24ರಿಂದ 28 ರವರೆಗೆ ಈ ಬೆದರಿಕೆ ಕರೆಗಳು ಬಂದಿವೆ. ಇವುಗಳನ್ನು ಪತ್ತೆಹಚ್ಚುವ ಕಾರ್ಯದ ವೇಳೆ ಮಧ್ಯಪ್ರಾಚ್ಯದ ದೇಶಗಳ ವಿವಿಧ ದೂರವಾಣಿ ಸಂಖ್ಯೆಗಳಿಂದ ಬಂದಿರುವುದು ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಶಾಸಕರಿಗೆ ಬಂದ ದೂರವಾಣಿ ಸಂಖ್ಯೆಗಳು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನೋಂದಾಯಿಸಲಾಗಿದೆ ಮತ್ತು ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿವೆ ಎಂದು ಮೊಬೈಲ್‌ಗಳ ತಾಂತ್ರಿಕ ಪರಿಶೀಲನೆಯಲ್ಲಿ ದೃಢಪಟ್ಟಿದೆ. ಈ ಬೆದರಿಕೆ ಕೆರೆಗಳ ಸಂಬಂಧ ಎಫ್‌ಐಆರ್ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಅಲ್ಲದೇ, ಎಸ್​ಪಿ ನೇತೃತ್ವದಲ್ಲಿ ವಿಶೇಷ ತಂಡ ಮಾಡಲಾಗಿದೆ.

ಇದೇ ಸಂಖ್ಯೆಗಳಿಂದ ಪಂಜಾಬ್‌ನ ಕೆಲವು ಮಾಜಿ ಶಾಸಕರಿಗೂ ಬೆದರಿಕೆ ಕೆರೆಗಳು ಬಂದಿವೆ. ಶಾಸಕರೊಂದಿಗಿನ ಸಂಭಾಷಣೆಯ ಸಮಯದಲ್ಲಿ ಮುಂಬೈಕರ್ ಮತ್ತು ಪಂಜಾಬಿ ಭಾಷೆಯಂತಹ ವಿಭಿನ್ನ ಸ್ವರಗಳು ಮತ್ತು ಸಂಭಾಷಣೆಯ ಶೈಲಿಗಳನ್ನು ಬಳಸಲಾಗಿದೆಯಂತೆ.

ಈ ಪ್ರಕರಣಗಳ ತನಿಖೆಗಾಗಿ ಐಜಿಪಿ (ಎಸ್‌ಟಿಎಫ್) ಸತೀಶ್ ಬಾಲನ್ ಅವರು ಎಸ್‌ಪಿ ಸುಮಿತ್ ಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು. ಎರಡು ವಾರಗಳ ಕಾಲ ನಡೆದ ಈ ತನಿಖೆ ಮೇಲೆ ಡಿಜಿಪಿ ಅಗರವಾಲ್ ಖುದ್ದು ನಿಗಾ ವಹಿಸಿದ್ದರು.

ಇದೇ ಬೆದರಿಕೆ ಕೆರೆಗಳ ವಿಷಯವಾಗಿ ಜುಲೈ 19ರಂದು ಕಾಂಗ್ರೆಸ್ ಸಂಸದ ದೀಪೇಂದರ್ ಹೂಡಾ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಶ್ವೇತಪತ್ರ ಹೊರಡಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದರು. ಕಳೆದ 10 ದಿನಗಳಲ್ಲಿ ಹರಿಯಾಣದ ಐವರು ಶಾಸಕರಿಗೆ ಜೀವ ಬೆದರಿಕೆ ಹಾಕಿರುವುದು ದುರದೃಷ್ಟಕರ ಮತ್ತು ಸರ್ಕಾರಕ್ಕೆ ಅಪರಾಧಿಗಳನ್ನು ಪತ್ತೆ ಮಾಡಲು ಅಥವಾ ಶಾಸಕರಿಗೆ ಸುರಕ್ಷಿತ ವಾತಾವರಣ ಕಲ್ಪಿಸಲು ಸಾಧ್ಯವಾಗಿಲ್ಲ. ಇದರ ಹಿಂದೆ ಗಣಿ ಮಾಫಿಯಾ ಇದೆ. ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಸಿಎಂ ಹೊಣೆ ಹೊತ್ತು ಶ್ವೇತಪತ್ರ ಹೊರಡಿಸಬೇಕೆಂದು ಅವರು ಆಗ್ರಹಿಸಿದ್ದರು.

ಇದನ್ನೂ ಓದಿ: ಹಣದೊಂದಿಗೆ ಸಿಕ್ಕಿಬಿದ್ದ ಜಾರ್ಖಂಡ್​ನ ಮೂವರು ಕಾಂಗ್ರೆಸ್​ ಶಾಸಕರು ಅಮಾನತು

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.