ನವದೆಹಲಿ: ಕೋವಿಡ್ ಸೋಂಕಿತರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ಲಸಿಕೆಯ 'ಮೂರನೇ ಡೋಸ್' ಅಥವಾ 'ಮುಂಜಾಗ್ರತಾ ಡೋಸ್' ಅನ್ನು ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಲಸಿಕೆ ಪಡೆಯುವವರು ಜನವರಿ 8ರಿಂದ ಕೋವಿಡ್ ವೆಬ್ಸೈಟ್ನಲ್ಲಿ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಜನವರಿ 10ರಿಂದ ಮೂರನೇ ಡೋಸ್ ಅನ್ನು ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿದ್ದು, ಸದ್ಯಕ್ಕೆ ಆರೋಗ್ಯ ಕಾರ್ಯಕರ್ತರು, ಕೋವಿಡ್ ವಾರಿಯರ್ಸ್ ಹಾಗೂ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮೂರನೇ ಡೋಸ್ ಹಾಕಿಸಿಕೊಳ್ಳಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ.
-
The feature for online appointments for Precaution Dose for HCWs/FLWs and Citizens (60+) is now live on Co-WIN. To book an appointment, please visit https://t.co/ZC467h2n3a @mansukhmandviya @MoHFW_INDIA @PIB_India @rssharma3 #LargestVaccineDrive
— Vikas Sheel (@iamvikassheel) January 8, 2022 " class="align-text-top noRightClick twitterSection" data="
">The feature for online appointments for Precaution Dose for HCWs/FLWs and Citizens (60+) is now live on Co-WIN. To book an appointment, please visit https://t.co/ZC467h2n3a @mansukhmandviya @MoHFW_INDIA @PIB_India @rssharma3 #LargestVaccineDrive
— Vikas Sheel (@iamvikassheel) January 8, 2022The feature for online appointments for Precaution Dose for HCWs/FLWs and Citizens (60+) is now live on Co-WIN. To book an appointment, please visit https://t.co/ZC467h2n3a @mansukhmandviya @MoHFW_INDIA @PIB_India @rssharma3 #LargestVaccineDrive
— Vikas Sheel (@iamvikassheel) January 8, 2022
ಮೂರನೇ ಡೋಸ್ ಹಾಕಿಸಿಕೊಳ್ಳುವುದಕ್ಕಾಗಿ ಆನ್ಲೈನ್ನಲ್ಲಿ ಬುಕ್ ಮಾಡಲು CoWIN App ಅಥವಾ http://cowin.gov.in ವೆಬ್ಸೈಟ್ಗೆ ಭೇಟಿ ನೀಡಬೇಕೆಂದು ರಾಷ್ಟ್ರೀಯ ಆರೋಗ್ಯ ಮಿಷನ್ನ ನಿರ್ದೇಶಕ, ಐಎಎಸ್ ಅಧಿಕಾರಿ ವಿಕಾಸ್ ಶೀಲ್ ಟ್ವಿಟರ್ನಲ್ಲಿ ಮಾಹಿತಿ ನೀಡಿದ್ದಾರೆ.
ಮೂರನೇ ಕೋವಿಡ್ ಲಸಿಕೆಯ ಡೋಸ್ ಪಡೆದುಕೊಳ್ಳಲು ವ್ಯಕ್ತಿಗಳು ಎರಡನೇ ಡೋಸ್ ಪಡೆದು ಕನಿಷ್ಠ 39 ದಿನ ಪೂರ್ಣಗೊಂಡಿರಬೇಕು ಎಂದು ಸರ್ಕಾರ ಹೇಳಿದೆ.
ಇದನ್ನೂ ಓದಿ: ಕೊರೊನಾ ಸೋಂಕು ಕುರಿತಂತೆ ಇಂದು ಸಂಜೆ ಪ್ರಧಾನಿ ಮೋದಿ ಮಹತ್ವದ ಸಭೆ