ನವದೆಹಲಿ: ಯುದ್ಧ ಪೀಡಿತ ಸುಡಾನ್‌ನಿಂದ ಭಾರತೀಯರ ಸ್ಥಳಾಂತರ ಕಾರ್ಯ ಆರಂಭಗೊಳಿಸಲಾಗಿದ್ದು, ಈ ವರೆಗೂ ಒಟ್ಟು 534 ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲಾಗಿದೆ. ಮೊದಲು ಭಾರತೀಯ ನೌಕಾಪಡೆಯ ಹಡಗು ಸುಡಾನ್ ನಿಂದ 278 ನಾಗರಿಕರನ್ನು ರಕ್ಷಿಸಿದ ಒಂದು ದಿನದ ಅಂತರದಲ್ಲೇ, ಭಾರತೀಯ ವಾಯುಪಡೆಯ ಎರಡು C-130J ಮಿಲಿಟರಿ ಸಾರಿಗೆ ವಿಮಾನಗಳು ಬುಧವಾರ ಪೋರ್ಟ್ ಸುಡಾನ್‌ನಿಂದ 256 ಭಾರತೀಯರನ್ನು ಜೆಡ್ಡಾಕ್ಕೆ ಕರೆತಂದಿವೆ. ಅಧಿಕೃತ ಅಂಕಿ - ಅಂಶಗಳ ಪ್ರಕಾರ, ಸುಡಾನ್‌ನಿಂದ ಇಲ್ಲಿಯವರೆಗೆ ಸ್ಥಳಾಂತರಿಸಲಾದ ಒಟ್ಟು ಭಾರತೀಯರ ಸಂಖ್ಯೆ 534 ಆಗಿದೆ.
-
Our efforts to swiftly send Indians back home from Jeddah is paying.
— V. Muraleedharan (@MOS_MEA) April 27, 2023 " class="align-text-top noRightClick twitterSection" data="
246 Indians will be in Mumbai soon, travelling by IAF C17 Globemaster. Happy to see them off at Jeddah airport.#OperationKaveri. pic.twitter.com/vw3LpbbzGw
">Our efforts to swiftly send Indians back home from Jeddah is paying.
— V. Muraleedharan (@MOS_MEA) April 27, 2023
246 Indians will be in Mumbai soon, travelling by IAF C17 Globemaster. Happy to see them off at Jeddah airport.#OperationKaveri. pic.twitter.com/vw3LpbbzGwOur efforts to swiftly send Indians back home from Jeddah is paying.
— V. Muraleedharan (@MOS_MEA) April 27, 2023
246 Indians will be in Mumbai soon, travelling by IAF C17 Globemaster. Happy to see them off at Jeddah airport.#OperationKaveri. pic.twitter.com/vw3LpbbzGw
'ಆಪರೇಷನ್ ಕಾವೇರಿ' ಅಡಿಯಲ್ಲಿ ಸ್ಥಳಾಂತರಿಸಲ್ಪಟ್ಟ ಭಾರತೀಯರನ್ನು ಸೌದಿ ಅರೇಬಿಯಾದ ಜೆಡ್ಡಾ ನಗರಕ್ಕೆ ಕರೆದೊಯ್ಯುಲಾಗುತ್ತಿದೆ. ಅಲ್ಲಿಂದ ಅವರನ್ನು ತಮ್ಮ ತಮ್ಮ ಮನೆಗೆ ಕಳುಹಿಸಿಕೊಡಲಾಗುತ್ತಿದೆ. ಸುಡಾನ್ ನಿಂದ ಭಾರತೀಯ ಪ್ರಜೆಗಳನ್ನು ಕರೆತರುವ ಹಿನ್ನೆಲೆ ಭಾರತವು ಜೆಡ್ಡಾದಲ್ಲಿ ಸಾರಿಗೆ ಸೌಲಭ್ಯವನ್ನು ಸ್ಥಾಪಿಸಿದ್ದು, ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಭಾರತೀಯರ ಸ್ಥಳಾಂತರಿಸುವ ಕಾರ್ಯಾಚರಣೆಯ ಮೇಲ್ವಿಚಾರಣೆ ಮಾಡುತ್ತಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಟ್ವೀಟ್ರನಲ್ಲಿ ಈ ಕುರಿತು ಹಂಚಿಕೊಂಡಿದ್ದು, ಮಂಗಳವಾರ ಭಾರತೀಯ ನೌಕಾಪಡೆಯ ಐಎನ್‌ಎಸ್ ಸುಮೇಧಾ ಹಡಗು ಮೂಲಕ 278 ಭಾರತೀಯರ ಮೊದಲ ಬ್ಯಾಚ್ ಅನ್ನು ಪೋರ್ಟ್ ಸುಡಾನ್‌ನಿಂದ ಸ್ಥಳಾಂತರಿಸಲಾಗಿತ್ತು. ಹಾಗೆಯೇ ಮೊದಲ C-130J ವಿಮಾನದ ಮೂಲಕ 121 ಪ್ರಯಾಣಿಕರನ್ನು ಜೆಡ್ಡಾಕ್ಕೆ ಕರೆತರಲಾಗಿತ್ತು. ಎರಡನೇಯ ವಿಮಾನದಲ್ಲಿ ಸುಡಾನ್‌ನಿಂದ 135 ಪ್ರಯಾಣಿಕರನ್ನು ಜೆಡ್ಡಾಕ್ಕೆ ಸ್ಥಳಾಂತರಿಸಲಾಗಿದೆ. ಈ ಮೂಲಕ ಆಪರೇಷನ್ ಕಾವೇರಿ ಕಾರ್ಯಚರಣೆ ಸಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಸುಡಾನ್ ಸೇನೆ ಮತ್ತು ಅರೆಸೇನಾ ಪಡೆಗಳು (ಆರ್‌ಎಸ್‌ಎಫ್) 72 ಗಂಟೆಗಳ ಕಾಲ ಕದನ ವಿರಾಮ ಘೋಷಿಸಿವೆ. ಒಪ್ಪಿಗೆ ನೀಡಿದ್ದರಿಂದ ಭಾರತವು ಸುಡಾನ್‌ನಿಂದ ಭಾರತೀಯರನ್ನು ಸ್ಥಳಾಂತರಿಸುವ ಪ್ರಯತ್ನಗಳನ್ನು ಹೆಚ್ಚಿಸಿದೆ. ಅಲ್ಲದೇ 360 ಭಾರತೀಯರ ಮೊದಲ ತಂಡವನ್ನು ಜೆಡ್ಡಾ ವಿಮಾನ ನಿಲ್ದಾಣದಿಂದ ಕಳೆದ ರಾತ್ರಿ ನವದೆಹಲಿಗೆ ಕರೆತರಲಾಗಿದೆ. ಆಪರೇಷನ್ ಕಾವೇರಿಯಡಿಯಲ್ಲಿ ಸರ್ಕಾರವು ಸುಡಾನ್‌ನಿಂದ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಮತ್ತು ಅವರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಪಟ್ಟುಬಿಡದೇ ಕೆಲಸ ಮಾಡುತ್ತಿದೆ ಎಂದು ಮುರಳೀಧರನ್ ಟ್ವೀಟ್ ಮಾಡಿದ್ದಾರೆ.
ಜೆಡ್ಡಾದಿಂದ ಮುಂಬೈಗೆ ಸ್ಥಳಾಂತರಿಸಲ್ಪಟ್ಟವರನ್ನು ಮರಳಿ ಕರೆತರಲು ಐಎಎಫ್‌ನ ಸಿ -17 ಮಿಲಿಟರಿ ಸಾರಿಗೆ ವಿಮಾನವು ಬುಧವಾರ ಜೆಡ್ಡಾಕ್ಕೆ ತೆರಳಿವೆ ಎಂದು ಮೂಲಗಳು ತಿಳಿಸಿವೆ. ಗುರುವಾರ ಭಾರತೀಯರನ್ನು ಹೊತ್ತು ಮುಂಬೈಗೆ ಬಂದಿಳಿಯಲಿವೆ. ಸುಡಾನ್ ದೇಶದ ಸೈನ್ಯ ಮತ್ತು ಅರೆಸೈನ್ಯದ ಕದನದಲ್ಲಿ ಸುಮಾರು 400 ಜನರ ಪ್ರಾನವನ್ನು ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ಕರೆತರಲು 'ಆಪರೇಷನ್ ಕಾವೇರಿ' ಭಾರತೀಯರ ಸ್ಥಳಾಂತರ ಕಾರ್ಯಾಚರಣೆಯನ್ನು ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಸೋಮವಾರ ಘೋಷಿಸಿದ್ದರು.
ಇದನ್ನೂ ಓದಿ: ನಕ್ಸಲರು ದೊಡ್ಡಮಟ್ಟದ ದಾಳಿ ಮಾಡುವ ಸಾಮರ್ಥ್ಯ ಹೊಂದಿದ್ದಾರೆ: ಬಿಎಸ್ಎಫ್ ಮಾಜಿ ಡಿಜಿ ಪ್ರಕಾಶ್ ಸಿಂಗ್