ETV Bharat / bharat

ಮುಂಬೈಗೆ ಹೊಸ ಪೊಲೀಸ್ ಕಮಿಷನರ್ ನೇಮಕ; ವಿಶ್ವಾಸಮತಕ್ಕೆ 2 ಸಾವಿರ ಸಿಆರ್​ಪಿಎಫ್​ ಭದ್ರತೆ - ಮುಂಬೈ ಹೊಸ ಕಮಿಷನರ್​ ನೇಮಕ

ರಾಜಕೀಯ ಕ್ಷೋಭೆಯ ಮಧ್ಯೆ ಮುಂಬೈ ಪೊಲೀಸ್ ಇಲಾಖೆಗೆ ಹೊಸ್​ ಬಾಸ್​ ನೇಮಕ ಮಾಡಲಾಗಿದೆ. ಅಲ್ಲದೇ, ನಾಳಿನ ವಿಶ್ವಾಸ ಮತಯಾಚನೆಗೆ 2 ಸಾವಿರ ಸಿಆರ್​ಪಿಎಫ್​ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ನಾಳೆ 'ಮಹಾ ವಿಶ್ವಾಸ': 2 ಸಾವಿರ ಸಿಆರ್​ಪಿಎಫ್​ ಯೋಧರ ಭದ್ರತೆ

author img

By

Published : Jun 29, 2022, 9:37 PM IST

ಮುಂಬೈ: ರಾಜಕೀಯ ಹೊಯ್ದಾಟದ ಮಧ್ಯೆಯೇ ಅಲ್ಲಿನ ಸರ್ಕಾರ ಹಿರಿಯ ಐಪಿಎಸ್ ಅಧಿಕಾರಿ ವಿವೇಕ್ ಫನ್ಸಾಲ್ಕರ್ ಅವರನ್ನು ಮುಂಬೈನ ಪೊಲೀಸ್ ಕಮಿಷನರ್ ಆಗಿ ನೇಮಕ ಮಾಡಲಾಗಿದೆ. ಹಾಲಿ ಪೊಲೀಸ್​ ಕಮಿಷನರ್​ ಸಂಜಯ್ ಪಾಂಡೆ ಅವರು ಜೂನ್ 30 ರಂದು ನಿವೃತ್ತರಾಗಲಿದ್ದಾರೆ. ಫನ್ಸಾಲ್ಕರ್ 1989 ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದಾರೆ.

ಅಲ್ಲದೇ, ನಾಳೆ ನಡೆಯುವ ವಿಶ್ವಾಸ ಮತಯಾಚನೆಯ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡಲು 2 ಸಾವಿರ ಸಿಆರ್​ಪಿಎಫ್​ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಬಂಡಾಯ ನಾಯಕ ಏಕನಾಥ್​ ಶಿಂದೆ ನೇತೃತ್ವದಲ್ಲಿ ಅಸ್ಸೋಂನ ಗುವಾಹಟಿಯಲ್ಲಿ ಠಿಕಾಣಿ ಹೂಡಿರುವ ಶಾಸಕರು ನಾಳೆ ಮುಂಬೈಗೆ ಬರಲಿದ್ದು, ಅಹಿತಕರ ಘಟನೆ ನಡೆಯದಂತೆ ಬಿಗಿ ಭದ್ರತೆ ವಹಿಸಲಾಗಿದೆ.

ದೆಹಲಿ, ಪುಣೆ, ಗುಜರಾತ್, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಮುಂಬೈಗೆ ಸಿಆರ್‌ಪಿಎಫ್ ತುಕಡಿಗಳನ್ನು ಕರೆಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಮೂರು ವಿಶೇಷ ವಿಮಾನಗಳಲ್ಲಿ 2 ಸಾವಿರ ಸಿಆರ್‌ಪಿಎಫ್ ಸಿಬ್ಬಂದಿ ಮುಂಬೈಗೆ ಆಗಮಿಸಿದ್ದಾರೆ. ಬಂಡಾಯ ಶಾಸಕರಿಗೆ ಶಿವಸೇನೆ ಬೆದರಿಕೆಯೊಡ್ಡಿದ ಕಾರಣ ಕೇಂದ್ರ ಸರ್ಕಾರ ಈ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ಹೇಳಲಾಗಿದೆ.

ವಿಮಾನ ನಿಲ್ದಾಣದಿಂದ ವಿಧಾನಸೌಧದವರೆಗೂ ಸಿಆರ್‌ಪಿಎಫ್ ಸಿಬ್ಬಂದಿಯ ಕಾವಲಿಗೆ ನಿಯೋಜಿಸಲಾಗಿದೆ. ವಿಶ್ವಾಸಮತದ ವೇಳೆ ಶಾಸಕರು ಯಾವುದೇ ರೀತಿಯ ದಾಳಿಗೆ ಒಳಗಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.

ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಆಘಾಡಿ (ಎಂವಿಎ) ಸರ್ಕಾರವನ್ನು ವಿಶ್ವಾಸಮತ ಸಾಬೀತುಪಡಿಸಲು ನಾಳೆ ಮುಹೂರ್ತ ನಿಗದಿಪಡಿಸಿದ್ದಾರೆ.

ಇದನ್ನೂ ಓದಿ: 'ಮಹಾ ಆಘಾಡಿ'ಗೆ ಸಿಎಂ ಉದ್ಧವ್‌ ಠಾಕ್ರೆ ಕೃತಜ್ಞತೆ; ಮಹಾರಾಷ್ಟ್ರ ಸರ್ಕಾರ ಪತನ ನಿಶ್ಚಿತ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.