ETV Bharat / bharat

ನಾಯಿಯಿಂದ ಕಚ್ಚಿಸಿಕೊಂಡ ಬಗ್ಗೆ ಪೋಷಕರಿಗೆ ತಿಳಿಸದ 14 ವರ್ಷದ ಬಾಲಕ: ಒಂದು ತಿಂಗಳ ಬಳಿಕ ರೇಬಿಸ್​ನಿಂದ ಸಾವು! - etv bharat kannada

14 year old boy dies by rabies: ನಾಯಿ ಕಚ್ಚಿಸಿಕೊಂಡು ರೇಬಿಸ್ ರೋಗಕ್ಕೆ ತುತ್ತಾಗಿದ್ದ ಬಾಲಕ ಒಂದು ತಿಂಗಳ ಬಳಿಕ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

14-year-old-boy-hides-dog-bite-from-parents-for-over-a-month-dies-by-rabies-in-uttar-pradesh
ನಾಯಿಯಿಂದ ಕಚ್ಚಿಸಿಕೊಂಡಿರುವ ಬಗ್ಗೆ ಪೋಷಕರಿಗೆ ತಿಳಿಸದ 14 ವರ್ಷದ ಬಾಲಕ: ಒಂದು ತಿಂಗಳ ಬಳಿಕ ರೇಬಿಸ್​ನಿಂದ ಸಾವು!
author img

By ETV Bharat Karnataka Team

Published : Sep 6, 2023, 7:11 PM IST

ಗಾಜಿಯಾಬಾದ್(ಉತ್ತರಪ್ರದೇಶ): ಒಂದು ತಿಂಗಳ ಹಿಂದೆ ನಾಯಿಯಿಂದ ಕಚ್ಚಿಸಿಕೊಂಡಿದ್ದ ಬಗ್ಗೆ ಪೋಷಕರಿಗೆ ತಿಳಿಸದೇ ಮರೆಮಾಚ್ಚಿದ್ದ 14 ವರ್ಷದ ಬಾಲಕ ರೇಬಿಸ್ ರೋಗಕ್ಕೆ ತುತ್ತಾಗಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಘಟನೆಯ ಸಂಬಂಧ ವಿಡಿಯೋವೊಂದು ವೈರಲ್ ಆಗಿದೆ. ಅದವರಲ್ಲಿ ಬಾಲಕ ತನ್ನ ತಂದೆಯ ಮಡಿಲಲ್ಲಿ ಉಸಿರಾಡಲು ಹೆಣಗಾಡುತ್ತಿರುವ, ಬಾಲಕನ ತಂದೆ ಮಾಸ್ಕ್ ಮತ್ತು ಕೈಗವಸುಗಳನ್ನು ಧರಿಸಿ ಮಗನನ್ನು ಹಿಡಿದುಕೊಂಡು ಸಮಾಧಾನಪಡಿಸಲು ಪ್ರಯತ್ನಿಸುತ್ತಿರುವ ಹಾಗೂ ತನ್ನ ಹದಿಹರೆಯದ ಮಗ ರೇಬಿಸ್​​ನಿಂದ ನರಳುತ್ತಿರುವದನ್ನು ನೋಡಿ ತಂದೆ ಕಣ್ಣೀರಿಡುತ್ತಿರುವ ಹೃದಯ ವಿದ್ರಾವಕ ದೃಶ್ಯಗಳಿವೆ.

ಏನಿದು ಪ್ರಕರಣ?: ವಿಜಯ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಚರಣ್ ಸಿಂಗ್ ಕಾಲೋನಿ ನಿವಾಸಿ ಶಹವಾಜ್ ಒಂದೂವರೆ ತಿಂಗಳ ಹಿಂದೆ ನಾಯಿಯಿಂದ ಕಚ್ಚಿಸಿಕೊಂಡಿದ್ದನು. ಆದರೆ, ಭಯದಿಂದ ಬಾಲಕ ಈ ವಿಷಯವನ್ನು ಪೋಷಕರಿಗೆ ತಿಳಿಸಿರಲಿಲ್ಲ. ರೇಬೀಸ್ ಸೋಂಕಿಗೆ ತುತ್ತಾಗಿದ್ದ ಬಾಲಕ ಅಸಹಜವಾಗಿ ವರ್ತಿಸಲು ಪ್ರಾರಂಭಿಸಿದ್ದಾನೆ ಮತ್ತು ಸೆಪ್ಟೆಂಬರ್ 1ರಿಂದ ಆಹಾರ ಸೇವಿಸುವುದನ್ನು ನಿಲ್ಲಿಸಿದ್ದಾನೆ. ಈ ಬಗ್ಗೆ ಪೋಷಕರು ಬಾಲಕನನ್ನು ವಿಚಾರಿಸಿದಾಗ, ನಾಯಿಯಿಂದ ಕಚ್ಚಿಸಿಕೊಂಡಿರುವ ಬಗ್ಗೆ ಬಾಲಕ ತಿಳಿಸಿದ್ದಾನೆ.

ನಂತರ ಬಾಲಕ ಶಹವಾಜ್​ನನ್ನು ಪೋಷಕರು ದೆಹಲಿಯ ಸರ್ಕಾರಿ ಆಸ್ಪತ್ರೆಗಳಿಗೆ ಕರೆದೊಯ್ದಿದ್ದಾರೆ. ಆದರೆ, ಅಲ್ಲಿ ಬಾಲಕನನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿಲ್ಲ. ನಂತರ ಪೋಷಕರು ಬಾಲಕನನ್ನು ಬುಲಂದ್‌ಶಹರ್‌ನಲ್ಲಿರುವ ಆಯುರ್ವೇದ ವೈದ್ಯರ ಬಳಿಗೆ ಕರೆತಂದಿದ್ದಾರೆ. ನಂತರ ಅಲ್ಲಿಂದ ಆಂಬ್ಯುಲೆನ್ಸ್‌ನಲ್ಲಿ ಗಾಜಿಯಾಬಾದ್‌ಗೆ ವಾಪಸ್ ಕರೆತರುವಾಗ ಬಾಲಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಸಂಬಂಧ ದೂರು ದಾಖಲಾಗಿದ್ದು, ನಾಯಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕೊತ್ವಾಲಿ ವಲಯದ ಸಹಾಯಕ ಪೊಲೀಸ್ ಆಯುಕ್ತ ನಿಮಿಷ್ ಪಾಟೀಲ್ ತಿಳಿಸಿದ್ದಾರೆ.

ಮಾರಣಾಂತಿಕ ರೇಬೀಸ್​ನಿಂದ ಜೀವ ಉಳಿಸುವ ವಿಧಾನಗಳು ಏನು?: ಶತಮಾನಗಳ ಇತಿಹಾಸ ಹೊಂದಿರುವ ಮಾರಣಾಂತಿಕ ರೇಬೀಸ್​ ಸೋಂಕು ಮಾನವರಿಗೆ ಹೆಚ್ಚಿನ ಹಾನಿಯನ್ನು ಉಂಟು ಮಾಡುತ್ತದೆ. ಈ ಕುರಿತು ಪರಿಣಾಮಕಾರಿಯಾಗಿ ಜಾಗೃತಿ ಮತ್ತು ಶಿಕ್ಷಣ ಹಾಗೂ ಕಾರ್ಯತಂತ್ರ ಮಧ್ಯಸ್ಥಿಕೆಗಳನ್ನು ವಹಿಸುವ ಮೂಲಕ ತಡೆಯಬಹುದಾಗಿದೆ.

ಶಿಕ್ಷಣದ ಮೂಲಕ ಅರಿವು ಮೂಡಿಸುವ ಯತ್ನ: ರೇಬೀಸ್​ ತಡೆಗೆ ಇರುವ ಪ್ರಮುಖ ಮಾರ್ಗ ಎಂದರೆ, ಈ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮತ್ತು ಶಿಕ್ಷಣವನ್ನು ನೀಡುವುದಾಗಿದೆ. ಪ್ರತಿಯೊಬ್ಬರಿಗೂ ಪ್ರಾಣಿಗಳಲ್ಲಿನ ರೇಬೀಸ್​ ಕುರಿತು ಜಾಗೃತಿ ಮೂಡಿಸುವುದು. ಇದರ ಚಿಹ್ನೆಗಳನ್ನು ತಿಳಿಸುವುದು ಮತ್ತು ಪ್ರಾಣಿಗಳು ಕಚ್ಚಿದ ತಕ್ಷಣದ ಕಾರ್ಯವನ್ನು ಅರ್ಥೈಸಿಕೊಳ್ಳುವುದು ಪ್ರಮುಖವಾಗಿದೆ. ಇದು ಮಾರಣಾಂತಿಕ ರೋಗ ತಡೆಯುವಲ್ಲಿನ ಪ್ರಮುಖ ಅರಿವಿನ ಅಂಶವಾಗಿದೆ.

ಪ್ರೊಫಿಲ್ಯಾಕ್ಸಿಸ್​ನ ನಂತರದ ಪರಿಣಾಮ: ಪಿಇಪಿ ರೇಬೀಸ್​ ಲಸಿಕೆಯ ಸರಣಿಯನ್ನು ಹೊಂದಿದ್ದು, ಕೆಲವು ಪ್ರಕರಣದಲ್ಲಿ ರೇಬೀಸ್​ ಇಮ್ಯೂನೊಗ್ಲೋಬಿನ್​ (ಆರ್​ಐಜಿ) ರೇಬೀಸ್ ವಿರುದ್ಧ ಕಾರ್ಯ ನಿರ್ವಹಿಸುತ್ತದೆ. ಉತ್ತಮ ನಿರ್ವಹಣೆ ಮತ್ತು ಗುಣಮಟ್ಟದ ಪಿಇಪಿ ಭರವಸೆಯ ಮಧ್ಯಸ್ಥಿಕೆಯು ರೇಬೀಸ್​​ ಮಾರಣಾಂತಿಕತೆ ವಿರುದ್ಧ ಶೇ 100ರಷ್ಟು ಪ್ರತಿಶತ ಕಾರ್ಯ ನಿರ್ವಹಿಸುತ್ತದೆ. ಇನ್ನೂಳಿದ ವಿಧಾನಗಳನ್ನು ತಿಳಿಯಲು ಇಲ್ಲಿ ಕ್ಲಿಕ್​ ಮಾಡಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.