ETV Bharat / bharat

ಜಮ್ಮು ಕಾಶ್ಮೀರದಲ್ಲಿ ಈ ವರ್ಷ 118 ಉಗ್ರರ ಬೇಟೆಯಾಡಿದ ಭಾರತೀಯ ಸೇನೆ - Army hunting in Jammu and Kashmir

ಜಮ್ಮು ಕಾಶ್ಮೀರದಲ್ಲಿ ಉಗ್ರರ ದಮನ ಕಾರ್ಯಾಚರಣೆ ಚುರುಕಾಗಿದೆ. ಈ ವರ್ಷ ವಿವಿಧ ಉಗ್ರ ಸಂಘಟನೆಗಳ 118 ಪಾತಕಿಗಳನ್ನು ಸೇನಾಪಡೆಗಳು ಬೇಟೆಯಾಡಿ ಬಲಿ ತೆಗೆದುಕೊಂಡಿವೆ.

ಜಮ್ಮು ಕಾಶ್ಮೀರದಲ್ಲಿ ಈ ವರ್ಷ 118 ಉಗ್ರರ ಬೇಟೆಯಾಡಿದ ಸೇನೆ

author img

By

Published : Jun 21, 2022, 9:34 PM IST

ನವದೆಹಲಿ: ಜಮ್ಮು- ಕಾಶ್ಮೀರದಲ್ಲಿ ಇನ್ನಿಲ್ಲದ ಉಪಟಳ ನೀಡುತ್ತಿದ್ದ ಉಗ್ರರ ದಮನ ಕಾರ್ಯಾಚರಣೆ ಈ ವರ್ಷ ಭರ್ಜರಿಯಾಗಿಯೇ ನಡೆದಿದೆ. ಕಾಶ್ಮೀರದಲ್ಲಿ ಇದುವರೆಗೆ 32 ವಿದೇಶಿಯರು ಸೇರಿದಂತೆ 118 ಉಗ್ರರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಕಾಶ್ಮೀರ ಪೊಲೀಸ್ ಮಹಾನಿರೀಕ್ಷಕ ವಿಜಯ್ ಕುಮಾರ್ ಮಂಗಳವಾರ ಹೇಳಿದ್ದಾರೆ.

ಕಾಶ್ಮೀರದಲ್ಲಿ ಹತರಾದ 118 ಉಗ್ರರ ಪೈಕಿ 77 ಮಂದಿ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಗೆ ಸೇರಿದ್ದರೆ, 26 ಜೈಶ್-ಎ-ಮೊಹಮ್ಮದ್‌ ಸಂಘಟನೆಗೆ ಸೇರಿದವರಾಗಿದ್ದಾರೆ. ಉಳಿದ 15 ಮಂದಿ ಇತರ ಉಗ್ರಗಾಮಿ ಗುಂಪುಗಳಿಗೆ ಸೇರಿದವರಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಕಳೆದ ವರ್ಷ ಇದೇ ಅವಧಿಯಲ್ಲಿ ಇಬ್ಬರು ವಿದೇಶಿಯರೂ ಸೇರಿದಂತೆ 55 ಉಗ್ರರನ್ನು ಬೇಟೆಯಾಡಲಾಗಿತ್ತು. ಈ ವರ್ಷ ಅದು ದುಪ್ಪಟ್ಟಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಒಡಿಶಾದಲ್ಲಿ ನಕ್ಸಲರ ಗುಂಡೇಟಿಗೆ ಮೂವರು ಸಿಆರ್​ಪಿಎಫ್​ ಯೋಧರು ಹುತಾತ್ಮ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.