ETV Bharat / assembly-elections

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಕಮಲ ಕಟ್ಟಿಹಾಕಲು ಪ್ರತಿಪಕ್ಷಗಳ ರಣತಂತ್ರ: ಪ್ರಾಬಲ್ಯಕ್ಕಾಗಿ ಕೈ-ದಳ ಪೈಪೋಟಿ - ಕ್ಷೇತ್ರದ ವೈಶಿಷ್ಟ್ಯ

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಚುನಾವಣೆ ಜೋರಾಗಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ತಂತ್ರಗಾರಿಗೆ ತುಸು ಹೆಚ್ಚು ಎಂಏ ಹೇಳಬಹುದು. ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್​​ ತಮ್ಮ ತಮ್ಮ ಅಭ್ಯರ್ಥಿಗಳನ್ನು ಈಗಾಗಲೇ ಕಣಕ್ಕಿಳಿಸಿದ್ದು ಮತದಾರರ ಮನವೊಲಿಸುವ ಯತ್ನ ನಡೆಸಿದ್ದಾರೆ. ಹಾಗಾಗಿ ಕ್ಷೇತ್ರ ರಾಜಕೀಯ ರಂಗು ಪಡೆದಿದೆ.

shivamogga rural election report
shivamogga rural election report
author img

By

Published : Apr 15, 2023, 5:25 PM IST

ಶಿವಮೊಗ್ಗ: ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಶಿವಮೊಗ್ಗ ಮತ್ತು ಭದ್ರಾವತಿ ತಾಲೂಕು ಪ್ರದೇಶಗಳನ್ನು ಒಳಗೊಂಡಿದೆ. ಈ ಹಿಂದೆ ಹೊಸನಗರ ಹಾಗೂ ಹೊಳೆಹೂನ್ನೂರು ವಿಧಾನಸಭೆ ಕ್ಷೇತ್ರವನ್ನು ಹೊಂದಿದ್ದು, ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಹೊಸನಗರ ಹಾಗೂ ಹೊಳೆಹೂನ್ನುರು ಕ್ಷೇತ್ರ ಹೋಗಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಮೀಸಲು ಕ್ಷೇತ್ರವಾಗಿದೆ. ಈ ಕ್ಷೇತ್ರ ಇತರೆ ಕ್ಷೇತ್ರಗಳಿಗೆ ಹೋಲಿಸಿದರೆ ತುಸು ದೊಡ್ಡದಾಗಿದೆ. ಕ್ಷೇತ್ರ ಪುನರ್ ವಿಂಗಡಣೆಯಾದ ನಂತರ ಮೂರು ಪಕ್ಷದವರು ಒಮ್ಮೊಮ್ಮೆ ಶಾಸಕರಾಗಿದ್ದಾರೆ. ಈ ಮೂಲಕ ಕ್ಷೇತ್ರದ ಜನ ಒಂದೇ ಪಕ್ಷಕ್ಕೆ ಮಣೆ ಹಾಕಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಈ ಬಾರಿ ಕ್ಷೇತ್ರದ ಜನ ಯಾರಿಗೆ ಆಶೀರ್ವಾದ ಮಾಡುತ್ತಾರೆ ಎಂಬುದನ್ನು ನೋಡಬೇಕಿದೆ.

shivamogga rural election report
ಶಾರದ ಪೂರ್ಯನಾಯ್ಕ

ಕಾಂಗ್ರೆಸ್​ ಭದ್ರಕೋಟೆ: ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಪುನರ್ ವಿಂಗಡಣೆ ಯಾಗುವ ಮುನ್ನಾ ಹೊಸನಗರ ಹಾಗೂ ಹೊಳೆಹೂನ್ನೂರು ಕ್ಷೇತ್ರಕ್ಕೆ ಹಂಚಿ ಹೋಗಿತ್ತು. ಕ್ಷೇತ್ರ ಪುನರ್ ವಿಂಗಡಣೆಯಾದ ನಂತರ ಹೊಳೆಹೂನ್ನೂರು, ಭದ್ರಾವತಿ ಕ್ಷೇತ್ರದ ಕೆಲ ಭಾಗಗಳು ಸೇರಿಕೊಂಡಿವೆ. ಕಾಂಗ್ರೆಸ್​ನ ಭದ್ರಕೋಟೆಯಾಗಿದ್ದ ಗ್ರಾಮಾಂತರ ಕ್ಷೇತ್ರ 2009 ರಲ್ಲಿ ಬಿಜೆಪಿ, 2013 ರಲ್ಲಿ ಜೆಡಿಎಸ್ ಶಾಸಕರನ್ನು ಆಯ್ಕೆ ಮಾಡಿದೆ. 2018 ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಮತದಾರ ಅವಕಾಶ ನೀಡಿದ್ದಾರೆ.

shivamogga rural election report
ಕೆ.ಬಿ.ಅಶೋಕ ನಾಯ್ಕ

ತ್ರಿಕೋನ ಸ್ಪರ್ಧೆ: ಹಾಲಿ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ತಮ್ಮ ತಮ್ಮ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದಾರೆ. ಜೆಡಿಎಸ್​ನಿಂದ ಮಾಜಿ ಶಾಸಕರಾದ ಶಾರದ ಪೂರ್ಯನಾಯ್ಕ ಅವರು ಅಭ್ಯರ್ಥಿ ಆಗಿದ್ದಾರೆ. ಬಿಜೆಪಿಯಿಂದ ಹಾಲಿ ಶಾಸಕ ಕೆ.ಬಿ.ಅಶೋಕ ನಾಯ್ಕ ಅವರಿಗೆ ಟಿಕೆಟ್​ ನೀಡಲಾಗಿದೆ. ಕಾಂಗ್ರೆಸ್​ ಪಕ್ಷ ಶ್ರೀನಿವಾಸ್​ ಕರಿಯಣ್ಣ ಅವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿಗೆ ಸ್ಪರ್ಧೆ ನೀಡುವಂತಾದರೆ ಇಲ್ಲಿ ತ್ರಿಕೋನ ಸ್ಪರ್ಧೆ ಖಚಿತ. 2008 ರಿಂದ ಕ್ಷೇತ್ರದಲ್ಲಿ ಒಟ್ಟು 3 ಚುನಾವಣೆಗಳು ನಡೆದಿದ್ದು ಅದರಲ್ಲಿ ಬಿಜೆಪಿ 2 ಬಾರಿ ಮತ್ತು ಜೆಡಿಎಸ್​ 1 ಬಾರಿ ಗೆದ್ದಿದೆ. 2018ರ ಜಿದ್ದಾಜಿದ್ದಿ ಚುನಾವಣೆ ಈ ಬಾರಿಯೂ ಮುಂದುವರೆಯುವ ಸಾಧ್ಯತೆ ಇದೆ.

shivamogga rural election report
ಅಭ್ಯರ್ಥಿಗಳ ಬೆಲುವಿನ ಅಂತರ

ಮತದಾರರ ವಿವರ: ಕ್ಷೇತ್ರದಲ್ಲಿ ಒಟ್ಟು 2,10,412 ಮತದಾರರಿದ್ದಾರೆ. ಇದರಲ್ಲಿ 1,04,640 ಪುರುಷರು, 1,05,768 ಮಹಿಳಾ ಹಾಗೂ 4 ಜನ ಇತರೆ ಮತದಾರರಿದ್ದಾರೆ.

shivamogga rural election report
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ

ಕ್ಷೇತ್ರದ ವೈಶಿಷ್ಟ್ಯ: ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಶಿವಮೊಗ್ಗ ನಗರದ ಸುತ್ತ ಇರುವ ಸುಮಾರು 40 ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ. ಶಿವಮೊಗ್ಗ ಮಹಾನಗರ ಪಾಲಿಕೆಯ 3 ವಾರ್ಡ್​ಗಳು ಗ್ರಾಮಾಂತರದ ವ್ಯಾಪ್ತಿಗೆ ಬರುತ್ತದೆ. ಗ್ರಾಮಾಂತರ ಭಾಗದಲ್ಲಿ ಎಲ್ಲ ಸಮುದಾಯಗಳು ಬರುತ್ತವೆ. ಈ ಭಾಗದಲ್ಲಿ ತುಂಗಾ ನದಿಯಿಂದ ಏತ ನೀರಾವರಿಯ ಮೂಲಕ ಕೆರೆ ತುಂಬಿಸುವ ಯೋಜನೆಯಿಂದ ಆಯನೂರು ಭಾಗದಲ್ಲಿ ಸ್ವಲ್ಪ ಕೃಷಿಕರಿಗೆ ಅನುಕೂಲಕರವಾಗಿದೆ. ಇನ್ನಷ್ಟು ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಯಲ್ಲಿದೆ. ಉಳಿದಂತೆ ಪ್ರತಿ‌ಮನೆಗೆ ಗಂಗೆ ಯೋಜನೆಯು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸೇರ್ಪಡೆಯಾಗಿದೆ.

shivamogga rural election report
ಕ್ಷೇತ್ರ ವಿಂಗಡಣೆ ಬಳಿಕ ಗೆಲುವು ಕಂಡ ರಾಜಕೀಯ ಪಕ್ಷಗಳು

2018ರ ವಿಧಾನಸಭಾ ಚುನಾವಣೆಯಲ್ಲಿ 81.48 % ಮತಗಳು ಚಲಾವಣೆಯಾದರೆ 1328 ನೋಟಾ ಮತಗಳು ಚಲಾವಣೆಯಾಗಿದ್ದವು. 2018ರಲ್ಲಿ ಕ್ಷೇತ್ರದಲ್ಲಿ ಒಟ್ಟು 2,11,546 ಮತದಾರರಿದ್ದು, ಇದರಲ್ಲಿ 1,05,698 ಪುರುಷ ಮತ್ತು 1,05,841 ಮಹಿಳಾ ಮತದಾರರಿದ್ದರು. ಪುರುಷರಿಗಿಂತ ಮಹಿಳಾ ಮತದಾರರೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿಯೂ ಮಹಿಳಾ ಮತದಾರರೆ ಹೆಚ್ಚಾಗಿದ್ದಾರೆ ಅನ್ನೋದು ಗಮನಾರ್ಹ. 2018ರ ಅಂಕಿ-ಅಂಶಗಳನ್ನು ಗಮನಿಸಿದರೆ ಇಲ್ಲಿ ಲಿಂಗಾನುಪಾತ 1001 ಆಗಿತ್ತು. (ಲಿಂಗಾನುಪಾತ ಎಂದರೆ ಒಂದು ಸಾವಿರ ಪುರುಷರಿಗೆ ಇರುವ ಮಹಿಳೆಯರ ಸಂಖ್ಯೆ)

shivamogga rural election report
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ವಿವರ

ಒಟ್ಟಾರೆ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಲಿಂಗಾಯತ ಹಾಗೂ ಎಸ್ಸಿ ಮತಗಳು ನಿರ್ಣಾಯಕವಾಗಲಿವೆ. ಕ್ಷೇತ್ರದಲ್ಲಿ ಕುಡಿಯುವ ನೀರು, ರಸ್ತೆ, ಸಾರಿಗೆ ಬಗರ್ ಹುಕುಂ ಸಮಸ್ಯೆಗಳಿವೆ. ಈ ಬಾರಿ ಇಲ್ಲಿ 94(ಸಿ) ಮತ್ತು 94 (ಸಿ) (ಸಿ) ಹಕ್ಕು ಪತ್ರವನ್ನು ಬಿಜೆಪಿ ವಿತರಿಸಿದೆ. ಇನ್ನೂ ಹಾಲಿ ಶಾಸಕ ಕೆ.ಬಿ.ಅಶೋಕ ನಾಯ್ಕ್ ಅವರು ಎಲ್ಲಾ ಸಮುದಾಯವರೂಂದಿಗೆ ಚೆನ್ನಾಗಿಯೇ ಇದ್ದಾರೆ. ಇನ್ನೂ ಬಿಜೆಪಿ ಮತ್ತೆ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದು ಕೊಳ್ಳಲು ಎಲ್ಲಾ ಪ್ರಯತ್ನ ನಡೆಸುತ್ತಿದೆ. ಜೆಡಿಎಸ್​ನ ಶಾರದ ಪೂರ್ಯನಾಯ್ಕ ಅವರು ಸಹ ಕ್ಷೇತ್ರದಲ್ಲಿ ಒಳ್ಳೆಯ ಹೆಸರನ್ನು ಹೊಂದಿದ್ದಾರೆ. ಕೈ ಅಭ್ಯರ್ಥಿ ಶ್ರೀನಿವಾಸ್​ ಕರಿಯಣ್ಣ ಕೂಡ ಗೆಲ್ಲುವ ಉತ್ಸಾಹದಲ್ಲಿದ್ದಾರೆ.

ಇದನ್ನೂ ಓದಿ: ಕಲಬುರಗಿ‌ ಉತ್ತರ ಮತಕ್ಷೇತ್ರದಲ್ಲಿ ಕಾಂಗ್ರೆಸ್​ - ಬಿಜೆಪಿ ನೇರ ಹಣಾಹಣಿ: ಪ್ರಾಬಲ್ಯಕ್ಕಾಗಿ ಇತರ ಪಕ್ಷಗಳಿಂದಲೂ ಪ್ರತಿತಂತ್ರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.