ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಬಳಕೆ ಸಾಕಷ್ಟು ಹೆಚ್ಚಾಗಿದೆ. ವೈಯಕ್ತಿಕ ಅಗತ್ಯಗಳಿಂದ ಬ್ಯಾಂಕಿಂಗ್ ಸೇವೆಗಳವರೆಗೆ ಅನೇಕ ಜನರು ಸ್ಮಾರ್ಟ್ ಫೋನ್ಗಳನ್ನೇ ಅವಲಂಬಿಸಿದ್ದಾರೆ. ಅದೇ ಸಮಯಕ್ಕೆ ಸೈಬರ್ ದಾಳಿಗಳೂ ಹೆಚ್ಚಾಗುತ್ತಿವೆ. ಈ ಬಗ್ಗೆ ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆ ಮಹತ್ವದ ದಾಖಲೆಯೊಂದನ್ನು ಬಿಡುಗಡೆ ಮಾಡಿದೆ. ಈ ಡಾಕ್ಯುಮೆಂಟ್ನಲ್ಲಿ ಸೈಬರ್ ದಾಳಿಯ ವಿರುದ್ಧ ನಮ್ಮನ್ನು ಹೇಗೆ ರಕ್ಷಣೆ ಮಾಡಿಕೊಳ್ಳಬಹುದು ಎನ್ನುವ ಕುರಿತು ಪ್ರಮುಖ ಸಲಹೆಗಳನ್ನು ನೀಡಲಾಗಿದೆ. ಆ ಕುರಿತು ಮಾಹಿತಿ ಇಲ್ಲಿದೆ.
ಮೊಬೈಲ್ ಸೆಕ್ಯುರಿಟಿ ಟಿಪ್ಸ್: ನೀವು Android ಅಥವಾ iPhone ಬಳಸುತ್ತಿದ್ದೀರಾ? ನಿಮ್ಮ ಫೋನ್ ಸುರಕ್ಷಿತವಾಗಿದೆಯಾ ಎನ್ನುವ ಭಯ ನಿಮ್ಮಲ್ಲಿದೆಯಾ? ಹಾಗಾದರೆ ನಿಮ್ಮ ಫೋನ್ಗಳನ್ನು ಸುರಕ್ಷಿತವಾಗಿಡಬೇಕಾದರೆ, ಅವುಗಳನ್ನು ಪ್ರತಿ ವಾರ ರಿಸ್ರಾರ್ಟ್ ಮಾಡುತ್ತಿರಬೇಕು ಎಂದು ಅಮೆರಿಕನ್ ರಾಷ್ಟ್ರೀಯ ಭದ್ರತಾ ಸಂಸ್ಥೆ (NSA) ಸಲಹೆ ನೀಡಿದೆ. ಸೈಬರ್ ದಾಳಿಕೋರರಿಂದ ಸ್ಮಾರ್ಟ್ಫೋನ್ಗಳನ್ನು ಸುರಕ್ಷಿತವಾಗಿಡಲು ಅನುಸರಿಸಬೇಕಾದ ವಿಧಾನಗಳನ್ನು ವಿವರಿಸುವ ಕೆಲವು ವರ್ಷಗಳ ಹಿಂದೆ ಸಿದ್ಧಪಡಿಸಿದ ದಾಖಲೆಯನ್ನು NSA ಇತ್ತೀಚೆಗೆ ಬಿಡುಗಡೆ ಮಾಡಿದೆ.
ಸೈಬರ್ ದಾಳಿ ಹಾಗೂ ಮಾಲ್ವೇರ್ಗಳಿಂದ ತಪ್ಪಿಸಿಕೊಳ್ಳಲು ಮೊಬೈಲ್ ಬಳಕೆದಾರರು ವಾರಕ್ಕೊಮ್ಮೆ ತಮ್ಮ ಸ್ಮಾರ್ಟ್ಫೋನ್ಗಳನ್ನು ರಿಸ್ಟಾರ್ಟ್ ಮಾಡಬೇಕೆಂದು NSA ಆ ದಾಖಲೆಯಲ್ಲಿ ಸೂಚಿಸಿದೆ ಎಂದು ಫೋರ್ಬ್ಸ್ ನಿಯತಕಾಲಿಕೆ ವರದಿ ಮಾಡಿದೆ. 2010ರ ದಶಕದ ಆರಂಭದಲ್ಲಿ ತಯಾರಿಸಲಾದ ಫೋನ್ಗಳು, ವಿಶೇಷವಾಗಿ ಹೋಮ್ಬಟನ್ ಹೊಂದಿರುವ ಐಫೋನ್ಗಳು ಮತ್ತು ಕೆಲವು Samsung Galaxy ಸಾಧನಗಳನ್ನು ಉಲ್ಲೇಖಿಸಿ, ಎನ್ಎಸ್ಎ ಈ ಸಲಹೆಯನ್ನು ನೀಡಿದೆ. ಇದು ಅಮೂಲ್ಯವಾದ ಸಲಹೆಯಾಗಿದ್ದು, ಸ್ಮಾರ್ಟ್ಫೋನ್ಗಳನ್ನು ರಿಸ್ಟಾರ್ಟ್ ಮಾಡುವುದರಿಂದ ಕನಿಷ್ಠ ಕೆಲವು ಸೈಬರ್ ಅಟ್ಯಾಕ್ಗಳನ್ನು ತಡೆಬಹುದು ಎಂದು ಮ್ಯಾಗಜಿನ್ ಹೇಳಿದೆ.
ಎನ್ಎಸ್ಎ ಡಾಕ್ಯುಮೆಂಟ್ನಲ್ಲಿ, ಅಟೋ ರಿಸ್ಟಾರ್ಟ್ ಆಯ್ಕೆ ಮತ್ತು ಸ್ಮಾರ್ಟ್ಫೋನ್ಗಳ ಬಯೋಮೆಟ್ರಿಕ್ ಲಾಕ್ ಮತ್ತು ಜೊತೆಗೆ ಬೇರೆ ಚಾರ್ಜಿಂಗ್ ಕೇಬಲ್ಗಳನ್ನು ಬಳಸುವ ಬದಲು ಅದರದ್ದೇ ಮೂಲ ಚಾರ್ಜಿಂಗ್ ಕೇಬಲ್ಗಳನ್ನು ಬಳಸಬೇಕು ಎಂದು ಉಲ್ಲೇಖಿಸಲಾಗಿದೆ. ಮೊಬೈಲ್ಗಳನ್ನು ಆಗಾಗ್ಗೆ ರಿಸ್ಟಾರ್ಟ್ ಮಾಡುವುದರಿಂದ ಮೆಮೊರಿ ಸೋರಿಕೆ ಮತ್ತು ದೋಷಯುಕ್ತ ಅಪ್ಲಿಕೇಶನ್ಗಳ ಪ್ರವೇಶವನ್ನು ತಡೆಯಬಹುದು. ವಾರಕ್ಕೊಮ್ಮೆ ರಿಸ್ಟಾರ್ಟ್ ಮಾಡಲು ನೀವು ಮರೆತರೆ, ಇನ್ನೊಂದು ಆಯ್ಕೆಯೂ ಇದೆ. ಸೆಟ್ಟಿಂಗ್ಗಳಲ್ಲಿ built-in option ಸೆಟ್ ಮಾಡಿದರೆ, ನೀವು ಸೆಟ್ ಮಾಡಿದ ವೇಳಾಪಟ್ಟಿಯ ಪ್ರಕಾರ ನಿಮ್ಮ ಫೋನ್ ರಿಸ್ಟಾರ್ಟ್ ಆಗುತ್ತದೆ. ಆಗ ನಿಮ್ಮ ಫೋನ್ ಹೆಚ್ಚು ಸುರಕ್ಷಿತವಾಗಿರುತ್ತದೆ.
ನಕಲಿ ಟೆಲಿಗ್ರಾಮ್ ಹಾಗೂ ಸಿಗ್ನಲ್ ಅಪ್ಲಿಕೇಶನ್ಗಳಿಂದ ಜಾಗರೂಕರಾಗಿರಿ, ಸೈಬರ್ ಅಪರಾಧಿಗಳು ಪ್ರತಿದಿನ ಹೊಸ ಸಮಸ್ಯೆಗಳನ್ನು ಸೃಷ್ಟಿಸುತ್ತಲೇ ಇದ್ದಾರೆ. ಗೂಗಲ್ ಪ್ಲೇ ಸ್ಟೋರ್ನಲ್ಲಿ ನಕಲಿ ಟೆಲಿಗ್ರಾಮ್ ಹಾಗೂ ಸಿಗ್ನಲ್ ಅಪ್ಲಿಕೇಶನ್ಗಳನ್ನೂ ಸೈಬರ್ ಅಪರಾಧಿಗಳು ತುರುಕಿದ್ದಾರೆ. ಇವುಗಳ ಮೂಲ ಅಪ್ಲಿಕೇಶನ್ಗಳನ್ನೇ ಹೋಲುತ್ತವೆ. ಆದ್ದರಿಂದ ಬಳಕೆದಾರರಿಗೆ ಅವುಗಳನ್ನು ಗುರುತಿಸುವುದು ತುಂಬಾ ಕಷ್ಟ. ಈ ಹಿನ್ನೆಲೆಯಲ್ಲಿ ಎಲ್ಲಾ ಆ್ಯಂಡ್ರಾಯ್ಡ್ ಬಳಕೆದಾರರೂ ತುಂಬಾ ಜಾಗರೂಕರಾಗಿರಬೇಕು ಎಂದು ತಾಂತ್ರಿಕ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಟೆಲಿಗ್ರಾಮ್ ಮತ್ತು ಸಿಗ್ನಲ್ ಅಪ್ಲಿಕೇಶನ್ಗಳು WhatsApp ನಂತಹ ಮೆಸೇಂಜರ್ನಂತಹ ಅಪ್ಲಿಕೇಶನ್ಗಳಾಗಿವೆ. ಇವುಗಳನ್ನು ಬಳಸುವವರ ಸಂಖ್ಯೆಯೂ ಬಹಳ ದೊಡ್ಡದಿದೆ. ಅದಕ್ಕಾಗಿಯೇ ಸೈಬರ್ ಅಪರಾಧಿಗಳು ಅವರನ್ನೇ ಗುರಿಯಾಗಿಸುತ್ತಾರೆ. ಟೆಲಿಗ್ರಾಮ್ ಮತ್ತು ಸಿಗ್ನಲ್ ಅಪ್ಲಿಕೇಶನ್ಗಳಿಗೆ ಸಂಬಂಧಿಸಿದ ನಕಲಿ ಮತ್ತು ಕ್ಲೋನಿಂಗ್ ಅಪ್ಲಿಕೇಶನ್ಗಳನ್ನು ಕ್ರಿಯೇಟ್ ಮಾಡಿ, ಅವುಗಳನ್ನು ಗೂಗಲ್ ಪ್ಲೇಸ್ಟೋರ್ನಲ್ಲಿ ಇರಿಸಲಾಗಿದೆ. ಕ್ಯಾಸ್ಪರ್ಸ್ಕೈ ಸೈಬರ್ ಭದ್ರತಾ ತಜ್ಞರು ಈ ಲಕ್ಷಾಂತರ ನಕಲಿ ಅಪ್ಲಿಕೇಶನ್ಗಳನ್ನು ಈಗಾಗಲೇ ಗೂಗಲ್ ಪ್ಲೇಸ್ಟೋರ್ನಿಂದ ಡೌನ್ಲೋಡ್ ಮಾಡಲಾಗಿದೆ ಎಂಬುದನ್ನು ಕಂಡು ಹಿಡಿದಿದ್ದಾರೆ.
ಇದನ್ನೂ ಓದಿ:ದಾಖಲೆ ಮಟ್ಟದ ಆದಾಯಗಳಿಸಿದ Apple; 1.95 ಟ್ರಿಲಿಯನ್ ಡಾಲರ್ ಮೊತ್ತದ iPhone ಮಾರಾಟ - iPhone lifetime salesrose