Low Budget Cars: ಹಿಂದೆ ಶ್ರೀಮಂತರ ಬಳಿ ಮಾತ್ರ ಕಾರು ಇರುತ್ತಿತ್ತು. ಆದರೆ, ಇಂದಿನ ದಿನಗಳಲ್ಲಿ ಪ್ರತಿ ಮನೆಯಲ್ಲೂ ಕಾರು ಇರುವುದು ಸಾಮಾನ್ಯವಾಗಿದೆ. ಹೆಚ್ಚಿನ ಜನರು ಮನೆ ಖರೀದಿಸಿದ ನಂತರ ಕಾರು ಕೊಂಡುಕೊಳ್ಳಲು ಆಸಕ್ತಿ ತೋರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರುಗಳ ಮಾರಾಟ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದೆ.
ಗ್ರಾಹಕರ ಅಭಿರುಚಿ ಮತ್ತು ಆಸಕ್ತಿಗೆ ತಕ್ಕಂತೆ ಎಲ್ಲ ಕಂಪನಿಗಳು ಕಾಲಕಾಲಕ್ಕೆ ಹೊಸ ಕಾರುಗಳನ್ನು ಬಿಡುಗಡೆ ಮಾಡುತ್ತಿವೆ. ಇದರಿಂದಾಗಿ ಹೊಸ ಕಾರು ಖರೀದಿಸಲು ಬಯಸುವ ಜನರು ಯಾವುದನ್ನು ಖರೀದಿಸಬೇಕು ಎಂಬ ಗೊಂದಲದಲ್ಲಿದ್ದಾರೆ. ಇದಲ್ಲದೇ ತಮ್ಮ ಬಜೆಟ್ನಲ್ಲಿ ಉತ್ತಮ ಮೈಲೇಜ್ ನೀಡುವ ಕಾರು ಸಿಗಬಹುದೇ ಎಂಬ ಅನುಮಾನ ಅವರದ್ದು. ಅಂತಹವರಿಗಾಗಿ ಮಾರುಕಟ್ಟೆಯಲ್ಲಿ ಉತ್ತಮ ವೈಶಿಷ್ಟ್ಯತೆಗಳನ್ನು ಹೊಂದಿರುವ ಟ್ರೆಂಡಿಂಗ್ ಟಾಪ್ ಕಾರುಗಳ ಬಗ್ಗೆ ಲಿಸ್ಟ್ ಇಲ್ಲಿದೆ.
1. Maruti Suzuki Alto K10:
- ಮೈಲೇಜ್: 24.39 ರಿಂದ 33.85 ಕಿಮೀ/ಲೀಟರ್
- ಎಂಜಿನ್: 998 ಸಿಸಿ
- ಸೆಫ್ಟಿ: 2 ಸ್ಟಾರ್ (ಗ್ಲೋಬಲ್ ಎನ್‌ಕ್ಯಾಪ್)
- ಫ್ಯೂಯಲ್ ಟೈಪ್: ಪೆಟ್ರೋಲ್ ಮತ್ತು CNG
- ಟ್ರಾನ್ಸ್ಮಿಷನ್: ಮ್ಯಾನುವಲ್ / ಆಟೋಮೆಟಿಕ್
- ಸಿಟ್ಟಿಂಗ್ ಕೆಪಾಸಿಟಿ: 4 ಮತ್ತು 5 ಆಸನಗಳು
- ಬೆಲೆ: ರೂ. 4.79 ಲಕ್ಷ..