ಕರ್ನಾಟಕ

karnataka

ETV Bharat / technology

ಸೋನಿಯ ಅತ್ಯಂತ ಪವರ್​ಫುಲ್​ ಪ್ಲೇಸ್ಟೇಷನ್ ಭಾರತದಲ್ಲಿ ಬಿಡುಗಡೆ ಆಗಲ್ಲ; ಏಕೆ ಗೊತ್ತಾ? - SONY PLAYSTATION

ಸೋನಿಯ ಅತ್ಯಂತ ಪವರ್​ಫುಲ್​ ಪ್ಲೇಸ್ಟೇಷನ್ ಭಾರತದಲ್ಲಿ ಬಿಡುಗಡೆ ಮಾಡಲಾಗುವುದಿಲ್ಲ ಎಂದು ಕಂಪನಿ ಹೇಳಿಕೊಂಡಿದೆ.

most powerful PlayStation  PlayStation 5 Pro  PS5 Pro  PS5 Pro price
ಸೋನಿಯ ಅತ್ಯಂತ ಪವರ್​ಫುಲ್​ ಪ್ಲೇಸ್ಟೇಷನ್ ಭಾರತದಲ್ಲಿ ಬಿಡುಗಡೆ ಇಲ್ಲ (Sony)

By ETV Bharat Tech Team

Published : Nov 9, 2024, 11:17 AM IST

Sony PlayStation: ಈ ವರ್ಷದ ಸೆಪ್ಟೆಂಬರ್‌ನಲ್ಲಿ PS5 ಪ್ರೊ ಅನ್ನು ಜಾಗತಿಕ ಮಾರುಕಟ್ಟೆಗೆ ಸೋನಿ ಪರಿಚಯಿಸಿತು. ಇದು ಶಕ್ತಿಯುತ ಗ್ರಾಫಿಕ್ಸ್ ಚಿಪ್ ಅನ್ನು ಹೊಂದಿರುತ್ತದೆ ಎಂದು ಹೇಳಲಾಗುತ್ತದೆ. ಆದ್ರೆ ಈ ಪ್ಲೇಸ್ಟೇಷನ್​ ಭಾರತದಲ್ಲಿ ಬಿಡುಗಡೆ ಮಾಡಲಾಗುವುದಿಲ್ಲ ಎಂದು ಸೋನಿ ಹೇಳಿದೆ.

ಹೌದು, ನಿಯಂತ್ರಕ ನಿರ್ಬಂಧಗಳಿಂದಾಗಿ ಸೋನಿಯ ಪ್ಲೇಸ್ಟೇಷನ್ 5 ಪ್ರೊ ಭಾರತಕ್ಕೆ ಬರುವುದಿಲ್ಲ ಎಂದು ಎಲೆಕ್ಟ್ರಾನಿಕ್ಸ್ ದೈತ್ಯ ಸ್ಪಷ್ಟಪಡಿಸಿದೆ. “6GHz ವೈರ್‌ಲೆಸ್ ಬ್ಯಾಂಡ್ ಬಳಸುವ ಕೆಲವು ದೇಶಗಳಲ್ಲಿ (ಪ್ರಸ್ತುತ ಭಾರತವನ್ನು ಒಳಗೊಂಡಿರುವ) PS5 ಪ್ರೊ ಲಭ್ಯವಿರುವುದಿಲ್ಲ. IEEE 802.11be (Wi-Fi 7) ಅನ್ನು ಇನ್ನೂ ಅನುಮತಿಸಲಾಗಿಲ್ಲ" ಎಂದು ಸೋನಿ ಹೇಳಿದೆ.

PS5 ಪ್ರೊ ಅನ್ನು ಈ ವರ್ಷದ ಸೆಪ್ಟೆಂಬರ್‌ನಲ್ಲಿ ಮೊದಲ ಬಾರಿಗೆ ಮಾರುಕಟ್ಟೆಗೆ ಪರಿಚಯಿಸಲಾಯಿತು. ಸುಧಾರಿತ ರೇ-ಟ್ರೇಸಿಂಗ್ ಮತ್ತು ಎಐ ಅಪ್‌ಸ್ಕೇಲಿಂಗ್ ಸಾಮರ್ಥ್ಯದ ಸಪೋರ್ಟ್​ನೊಂದ ಪ್ರಬಲ ಗ್ರಾಫಿಕ್ಸ್ ಚಿಪ್ ಅನ್ನು ಒಳಗೊಂಡಿದೆ. ಆಯ್ದ ಮಾರುಕಟ್ಟೆಗಳಲ್ಲಿ 699.99 ಡಾಲರ್​ಗಳಿಗೆ ಮಾರಾಟವಾಗಿದೆ.

ಇದು ನಾವು ನಿರ್ಮಿಸಿದ ಅತ್ಯಂತ ಶಕ್ತಿಶಾಲಿ ಕನ್ಸೋಲ್ ಆಗಿದೆ. ಸಾಮಾನ್ಯ PS5 ಗೆ ಹೋಲಿಸಿದರೆ PS5 Pro ಗ್ರಾಫಿಕ್ಸ್ ರೆಂಡರಿಂಗ್‌ನಲ್ಲಿ ಶೇಕಡಾ 45 ರಷ್ಟು ವೇಗವಾಗಿರುತ್ತದೆ ಮತ್ತು ಕಾರ್ಯಕ್ಷಮತೆಯ ಮೋಡ್‌ನಲ್ಲಿ AAA ಟೈಟಲ್ಸ್​ಗಳನ್ನು ನಿರ್ವಹಿಸಲು ಉದ್ದೇಶಿಸಲಾಗಿದೆ ಎಂದು ಸೋನಿಯ ಪ್ರಮುಖ ಪ್ಲೇಸ್ಟೇಷನ್ ಸಿಸ್ಟಮ್ ಆರ್ಕಿಟೆಕ್ಟ್ ಮಾರ್ಕ್ ಸೆರ್ನಿ ಹೇಳಿದರು.

ಕಂಪನಿಯು ಸೀಮಿತ ಆವೃತ್ತಿಯ ಪ್ಲೇಸ್ಟೇಷನ್ 5 ಮತ್ತು ಈಗ ಭಾರತದಲ್ಲಿ ಲಭ್ಯವಿರುವ ಬಿಡಿಭಾಗಗಳನ್ನು ಘೋಷಿಸಿದೆ. ಸೀಮಿತ ಆವೃತ್ತಿಯ PS5 ಗ್ರೇ ಕಲರ್​ನಲ್ಲಿ ಬರಲಿದೆ. ಇದರ ಮೂಲ ಪ್ಲೇಸ್ಟೇಷನ್‌ 1994 ರಲ್ಲಿ ಪ್ರಾರಂಭಿಸಲಾಗಿತ್ತು. ಈ ವರ್ಷದ ಡಿಸೆಂಬರ್‌ನಲ್ಲಿ ತನ್ನ 30 ನೇ ವಾರ್ಷಿಕೋತ್ಸವವನ್ನು ಪೂರ್ಣಗೊಳಿಸುವ ಜನಪ್ರಿಯ ಕನ್ಸೋಲ್ ಸರಣಿಯ ಮುಂದಿನ ಭಾಗವನ್ನು ಬಿಡುಗಡೆ ಮಾಡಲಾಗಿದೆ.

ಈಗಾಗಲೇ PS5 ಹೊಂದಿರುವವರಿಗೆ PS5 30ನೇ ವಾರ್ಷಿಕೋತ್ಸವದ ಸೀಮಿತ ಆವೃತ್ತಿಯು ಹೆಚ್ಚು ಆಪ್ಷನ್​​ಗಳನ್ನು ಒಳಗೊಂಡಿರುವುದಿಲ್ಲ. ಆದರೂ PS5 ಅನ್ನು ಖರೀದಿಸಲು ಪರಿಗಣಿಸುವ ಯಾರಿಗಾದರೂ ಇದು ಪ್ಲೇಸ್ಟೇಷನ್‌ನ ಹಿಂದಿನ ಮತ್ತು ಪ್ರಸ್ತುತ ಎರಡನ್ನೂ ಪ್ರತಿನಿಧಿಸಲಿದೆ.

ಓದಿ:ಸೂಪರ್​ ಫೀಚರ್​ಗಳೊಂದಿಗೆ ಮಾರುಕಟ್ಟೆಗೆ ಕಾಲಿಡಲಿದೆ ವಿವೋ ಎಕ್ಸ್​200 ಸಿರೀಸ್

ABOUT THE AUTHOR

...view details