2025 Honda Unicorn Launched:ಹೋಂಡಾ ಯೂನಿಕಾರ್ನ್ ಅಭಿಮಾನಿಗಳಿಗೆ ಸಂತಸದ ಸುದ್ದಿ. 2025 ಮಾಡೆಲ್ ಹೋಂಡಾ ಯುನಿಕಾರ್ನ್ ದೇಶೀಯ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಹೋಂಡಾ ದ್ವಿಚಕ್ರ ವಾಹನಗಳಲ್ಲಿ ಯುನಿಕಾರ್ನ್ ಮಾದರಿಗೆ ವಿಶೇಷ ಸ್ಥಾನವಿದೆ ಎಂದು ಹೇಳಬಹುದು. ಏಕೆಂದರೆ ಕಂಪನಿಯಿಂದ ಬಂದ ಮೋಟಾರ್ ಸೈಕಲ್‌ಗಳಲ್ಲಿ, ಇದು ಭಾರಿ ಮಾರಾಟದೊಂದಿಗೆ ಹೆಚ್ಚು ಯಶಸ್ವಿಯಾಗಿದೆ.
ಹಳೆಯ ಮಾದರಿಗಳ ಅಪ್ಡೇಟ್: 2024 ಕೆಲವೇ ದಿನಗಳಲ್ಲಿ ಕೊನೆಗೊಳ್ಳುತ್ತಿದ್ದಂತೆ ಕಂಪನಿಯು ತನ್ನ ಹಳೆಯ ಮಾದರಿಗಳನ್ನು ಅಪ್ಡೇಟ್ ಮಾಡುತ್ತಿದೆ ಮತ್ತು ಕಳೆದ ಕೆಲವು ತಿಂಗಳುಗಳಿಂದ ಹೊಸ ಮಾದರಿಗಳನ್ನು ಬಿಡುಗಡೆ ಮಾಡುತ್ತಿದೆ. ಕಂಪನಿಯು ಇತ್ತೀಚೆಗೆ ತನ್ನ ಅಪ್ಡೇಟ್ ಮಾಡಿದ 'Activa 125', 'SP 125' ಮತ್ತು 'SP160' ಬೈಕ್‌ಗಳನ್ನು ಬಿಡುಗಡೆ ಮಾಡಿದೆ. ಇದು ಈಗ ತನ್ನ '2025 ಹೋಂಡಾ ಯುನಿಕಾರ್ನ್' ಮೋಟಾರ್ ಸೈಕಲ್ ಬಿಡುಗಡೆ ಮಾಡಿದೆ.
ಹೋಂಡಾ ಮೋಟಾರ್‌ಸೈಕಲ್ ಇಂಡಿಯಾತನ್ನ ಉತ್ಪನ್ನಗಳನ್ನು OBD2B ಮಾನದಂಡಗಳನ್ನು ಪೂರೈಸಲು ನವೀಕರಿಸುತ್ತಿದೆ. ಈಗ ಈ ಹೊಸ ಯುನಿಕಾರ್ನ್ ಅದೇ ಅಪ್ಡೇಟ್ಗಳೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇದರೊಂದಿಗೆ ಈ ಹೊಸ ಬೈಕ್ ಹಲವು ನವೀಕರಣಗಳು ಮತ್ತು ವೈಶಿಷ್ಟ್ಯಗಳನ್ನು ಹೊಂದಿದೆ. ಆದರೆ ಅಪ್ಡೇಟ್ಗಳ ಪ್ರಕಾರ, ಈ ಹೊಸ ಯುನಿಕಾರ್ನ್‌ನ ಬೆಲೆಯು ಹಿಂದಿನದಕ್ಕಿಂತ ಹೆಚ್ಚಾಗಿದೆ. ಕಂಪನಿಯು '2025 ಹೋಂಡಾ ಯುನಿಕಾರ್ನ್' ಬೈಕ್ ಅನ್ನು ರೂ. 1.19 ಲಕ್ಷ (ಎಕ್ಸ್ ಶೋ ರೂಂ) ಬೆಲೆಯಲ್ಲಿ ಮಾರಾಟ ಮಾಡುತ್ತಿದೆ. ಇದು ಪ್ರಸ್ತುತ ಮಾದರಿಗಿಂತ 8,000 ರೂ.ಗೂ ಹೆಚ್ಚಾಗಿದೆ.