2025 Ather 450S And 450X:ಅಥರ್ ಎನರ್ಜಿ ತನ್ನ 450 ರೇಂಜ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು 2025ಕ್ಕೆ ಅಪ್ಡೇಟ್ ಮಾಡಿದೆ. ಹೊಸ 450Sನ ಆರಂಭಿಕ ಎಕ್ಸ್ ಶೋ ರೂಂ ಬೆಲೆಯನ್ನು 1.30 ಲಕ್ಷ ರೂ.ಗಳಲ್ಲಿ ಮಾರಾಟ ಮಾಡುತ್ತಿದ್ದು, 450X 2.9 ರೂಪಾಂತರ 1.47 ಲಕ್ಷ ರೂ.ಗೆ ಸಿಗುತ್ತಿದೆ. ಇದಲ್ಲದೇ ಅಥರ್ 450X 3.7 ಎಕ್ಸ್ ಶೋ ರೂಂ ಬೆಲೆ 1.57 ಲಕ್ಷ ರೂ. ಆಗಿದೆ. ಈ ಶ್ರೇಣಿಯನ್ನು ಮಾರುಕಟ್ಟೆಯಲ್ಲಿ ಹೊಸ ವೈಶಿಷ್ಟ್ಯಗಳೊಂದಿಗೆ ಮತ್ತು ಮೊದಲಿಗಿಂತ ಹೆಚ್ಚಿನ ಶ್ರೇಣಿಯೊಂದಿಗೆ ಬಿಡುಗಡೆ ಮಾಡಿದೆ.
2025 ಅಥರ್ 450 ರೇಂಜ್: ಅಥರ್ 450S
ಅಥರ್ ಅಪ್ಡೇಟ್ಡ್ 450Sನ ಬೆಲೆಯನ್ನು 4,400 ರೂ.ಯಷ್ಟು ಏರಿಸಿದೆ. ಇದು ಈಗ ಮೊದಲಿಗಿಂತ 375W ಫಾಸ್ಟ್ ಚಾರ್ಜರ್‌ನೊಂದಿಗೆ ಬರುತ್ತದೆ. ಹೀಗಾಗಿ ಇ-ಸ್ಕೂಟರ್ ಚಾರ್ಜ್ ಮಾಡಲು ಕಡಿಮೆ ಸಮಯ ಸಾಕಾಗುತ್ತದೆ. Ather 450Sನ ಪ್ರೊ ಪ್ಯಾಕ್‌ನ ಬೆಲೆಯನ್ನು 14,000 ರೂ.ಗೆ ಇಳಿಸಿದೆ. ಪ್ರೊ ಪ್ಯಾಕ್ ಆಯ್ಕೆ ಮಾಡಿದ ನಂತರ Ather 450Sನೊಂದಿಗೆ ಗರಿಷ್ಠ ವೈಶಿಷ್ಟ್ಯಗಳನ್ನು ಪಡೆಯುವಿರಿ.
2025 ಅಥರ್ 450 ರೇಂಜ್: ಅಥರ್ 450X
ಈ ಎಲೆಕ್ಟ್ರಿಕ್ ಸ್ಕೂಟರ್‌ನ ಎರಡೂ ರೂಪಾಂತರಗಳು ಈಗ ಮ್ಯಾಜಿಕ್ ಟ್ವಿಸ್ಟ್ ಮತ್ತು ಟ್ರಾಕ್ಷನ್ ಕಂಟ್ರೋಲ್‌ನಂತಹ ವೈಶಿಷ್ಟ್ಯಗಳನ್ನು ಪಡೆದುಕೊಂಡಿವೆ. ಇದಲ್ಲದೆ, ಅಥರ್ 450X 2.9 ಅನ್ನು ಎರಡು ಹೊಸ ಬಣ್ಣಗಳಲ್ಲಿ ಪರಿಚಯಿಸಲಾಗಿದೆ. ಇದರ ಬೆಲೆಯನ್ನು 6,400 ರೂ.ಗಳಷ್ಟು ಹೆಚ್ಚಿಸಲಾಗಿದೆ. ದೊಡ್ಡ ಪ್ರಯೋಜನವೆಂದರೆ, ಅದು ಈಗ 700-ವ್ಯಾಟ್ ಫಾಸ್ಟ್ ಚಾರ್ಜರ್‌ನೊಂದಿಗೆ ಬರುತ್ತಿದೆ. ಇದು 450Xನ ಚಾರ್ಜಿಂಗ್ ಸಮಯವನ್ನು ಅರ್ಧದಷ್ಟು ತಗ್ಗಿಸುತ್ತದೆ.