ಕರ್ನಾಟಕ

karnataka

ETV Bharat / state

ಕುಮಟಾದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸಂಪೂರ್ಣ ಬೆಂಬಲ: ಡಿ.ಕೆ.ಶಿವಕುಮಾರ್ - D K Shivakumar - D K SHIVAKUMAR

ಕುಮಟಾದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ನಮ್ಮ ಸರ್ಕಾರದ ಸಂಪೂರ್ಣ ಬೆಂಬಲ ಇದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್ (Etv Bharat)

By ETV Bharat Karnataka Team

Published : May 3, 2024, 10:36 PM IST

Updated : May 3, 2024, 11:04 PM IST

ಡಿ.ಕೆ.ಶಿವಕುಮಾರ್ (ETV Bharat)

ಕುಮಟಾ(ಉತ್ತರ ಕನ್ನಡ):ಸಚಿವ ಮಂಕಾಳ ವೈದ್ಯ ಅವರು ಮುಖ್ಯಮಂತ್ರಿಗಳು ಮತ್ತು ನನ್ನೊಂದಿಗೆ ಮಾತನಾಡಿ ಇಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಲೇಬೇಕೆಂಬ ಸಂಕಲ್ಪ ಮಾಡಿದ್ದಾರೆ. ಅವರಿಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಪ್ರಣಾಳಿಕೆಯಲ್ಲೂ ಇದನ್ನು ಹೇಳಿದ್ದೇವೆ. ಕುಮಟಾದಲ್ಲಿ ಆಸ್ಪತ್ರೆ ನಿರ್ಮಾಣ ಮಾಡೇ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.

ಇಂದು ಪ್ರಜಾಧ್ವನಿ-2 ಸಮಾವೇಶದಲ್ಲಿ ಮಾತನಾಡಿದ ಅವರು, ನಿಮ್ಮ ಸಮಸ್ಯೆಗಳನ್ನು ಅರಿತಿದ್ದೇವೆ. ಗ್ಯಾರಂಟಿ ಕೊಟ್ಟು ಬದುಕನ್ನು ಕಾಂಗ್ರೆಸ್ ಹಸನಾಗಿಸಿದೆ ಎಂದು ಬಿಜೆಪಿಗೆ ಮತ ಹಾಕಿದವರಿಗೆ ತಿಳಿಸಲೇಬೇಕು. ಮಾರ್ಗರೇಟ್ ಆಳ್ವಾ ನಂತರ ಮತ್ತೊಬ್ಬ ಮಹಿಳೆಯನ್ನು ಆರಿಸಿ ಕಳುಹಿಸುತ್ತೀರಿ ಎನ್ನುವ ನಂಬಿಕೆ ಇದೆ. ಕೊಟ್ಟ ಮಾತನ್ನು ಬಿಜೆಪಿ ಉಳಿಸಿಕೊಂಡಿಲ್ಲ. ಜಾತಿ, ಧರ್ಮ ಒಡೆಯುವ ಕೆಲಸ ಮಾಡಿದ್ದಾರೆ. ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮಾಡಿದರು. ನಾವು ಪ್ರಜಾಧ್ವನಿ ಯಾತ್ರೆ ಪ್ರಾರಂಭ ಮಾಡಿದ್ದೇವೆ. ನಾವು ಯಾರೂ ಮೋಸ ಮಾಡಿಲ್ಲ. ನಾವು ಯಾವುದೇ ಗ್ಯಾರಂಟಿ ಯೋಜನೆಗಳನ್ನು ಜಾತಿ, ಧರ್ಮದ ಮೇಲೆ ನೀಡಿಲ್ಲ. ಕೇಂದ್ರದಲ್ಲಿ ಕಾಂಗ್ರೆಸ್​ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ವರ್ಷಕ್ಕೆ 1 ಲಕ್ಷ ರೂಪಾಯಿ ನೀಡುವ ಮಹಾಲಕ್ಷ್ಮಿ ಯೋಜನೆಯನ್ನು ಜಾರಿಗೆ ತರುತ್ತೇವೆ ಎಂದರು.

ಇದನ್ನೂ ಓದಿ:ರೇವಣ್ಣ ಮುಹೂರ್ತ ಇಟ್ಟು ಕ್ಯಾಸೆಟ್ ಬಿಡುಗಡೆ ಮಾಡಲಿ, ನಾನು ಎಲ್ಲದಕ್ಕೂ ರೆಡಿ: ಡಿಕೆಶಿ - D K Shivakumar

Last Updated : May 3, 2024, 11:04 PM IST

ABOUT THE AUTHOR

...view details