ಕರ್ನಾಟಕ

karnataka

ETV Bharat / state

ಶಿವಮೊಗ್ಗ: ಆಟವಾಡುತ್ತಿದ್ದ 3 ವರ್ಷದ ಬಾಲಕಿ ತೆರೆದ ಬಾವಿಗೆ ಬಿದ್ದು ಸಾವು - Girl died - GIRL DIED

ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಆಟವಾಡುತ್ತಿದ್ದ ಮೂರು ವರ್ಷದ ಬಾಲಕಿಯೊಬ್ಬಳು ತೆರೆದ ಬಾವಿಗೆ ಬಿದ್ದು ಮೃತಪಟ್ಟಿದ್ದಾಳೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

By ETV Bharat Karnataka Team

Published : Apr 17, 2024, 10:58 PM IST

ಶಿವಮೊಗ್ಗ: ಮನೆಯ ಹಿಂಬದಿ ಆಟವಾಡುತ್ತಿದ್ದಾಗ ಆಯತಪ್ಪಿ ತೆರೆದ ಬಾವಿಗೆ ಬಿದ್ದು 3 ವರ್ಷದ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಸಾಗರದಲ್ಲಿ ನಡೆದಿದೆ. ಎಸ್.ಎನ್. ನಗರದ ನಿವಾಸಿ ಮನ್ನತ್ (3) ಮೃತ ರ್ದುದೈವಿ. ಮನೆ ಮುಂದೆ ಆಟವಾಡುತ್ತಿದ್ದ ಮನ್ನತ್, ಮನೆ ಹಿಂಭಾಗಕ್ಕೆ ಆಟವಾಡುತ್ತಾ ಹೋಗಿದ್ದಾಳೆ. ಈ ವೇಳೆ ತೆರದ ಬಾವಿಗೆ ಬಿದ್ದು ಮೃತಪಟ್ಟಿದ್ದಾಳೆ.

ಬಾಲಕಿಯ ತಾಯಿಗೆ ಬಾವಿಗೆ ಬಿದ್ದ ಶಬ್ದ ಕೇಳಿ ಬಾವಿ ಬಳಿಗೆ ಬಂದು ನೋಡಿದಾಗ ಮನ್ನತ್ ಬಾವಿಯಲ್ಲಿ ಇರುವುದು ಕಂಡು ಬಂದಿದೆ. ತಕ್ಷಣ ಮನ್ನತ್ ತಾಯಿ ಕೂಗಿಕೊಂಡಿದ್ದಾರೆ. ಸ್ಥಳೀಯರು ಮಗುವನ್ನು ಮೇಲಕ್ಕೆತ್ತಿದ್ದಾರೆ. ಆದರೆ, ತಲೆ ಹಾಗೂ ಹಣೆಗೆ ಬಲವಾದ ಪೆಟ್ಟು ಬಿದ್ದರಿಂದ ಮಗು ಅಷ್ಟಾರಲ್ಲಾಗಲೇ ಮೃತಪಟ್ಟಿತ್ತು. ಆದರೂ, ಪೋಷಕರು ಮಗುವನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಈ ವೇಳೆ ವೈದ್ಯರು ಮಗು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಸಾಗರ: ನೀರಿನ ಬಕೆಟ್​​ಗೆ ಬಿದ್ದು ಒಂದೂವರೆ ವರ್ಷದ ಕಂದಮ್ಮ ಸಾವು - Child Death

ABOUT THE AUTHOR

...view details