ಮೈಸೂರು: ನಗರದ ವೆಂಕಟೇಶ್ವರ ದೇವಾಲಯದ ಮುಂದಿರುವ ಕೆಆರ್ಎಸ್ ರಸ್ತೆಗೆ ಈ ಹಿಂದಿನ ಕಡತದಲ್ಲಿ ಪ್ರಿನ್ಸ್ ರಸ್ತೆ ಎಂದು ಹೆಸರು ಇಲ್ಲ. ಆ ರಸ್ತೆಗೆ ಯಾವ ಹೆಸರೂ ಕಡತದಲ್ಲಿಲ್ಲ ಎಂದು ಮಹಾನಗರ ಪಾಲಿಕೆಯ ಆಯುಕ್ತ ಆಶಾದ್ ಉರ್ ರೆಹಮಾನ್ ಷರೀಫ್ ಸ್ಪಷ್ಟಪಡಿಸಿದರು.
ಶ್ರೀ ವೆಂಕಟೇಶ್ವರ ದೇವಾಲಯದಿಂದ ಕೆಆರ್ಎಸ್ ಕಡೆ ಹೋಗುವ ಈ ರಸ್ತೆಗೆ 'ಸಿದ್ದರಾಮಯ್ಯ ಆರೋಗ್ಯ ಮಾರ್ಗ' ಎಂಬ ಹೆಸರಿಡುವ ಬಗ್ಗೆ ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿರುವ ಆಕ್ಷೇಪಣೆಗಳಿಗೆ ಪಾಲಿಕೆ ಸ್ಪಷ್ಟಪಡಿಸಿತು.
ಪಾಲಿಕೆಯ ಆಯುಕ್ತ ಆಶಾದ್ ಉರ್ ರೆಹಮಾನ್ ಷರೀಫ್ (ETV Bharat) ಸಂಸದ ಯದುವೀರ್ ಒಡೆಯರ್ ಆ ರಸ್ತೆಗೆ ಪ್ರಿನ್ಸ್ ರಸ್ತೆಯೆಂದು ಹೆಸರಿಡಲಾಗಿದೆ ಎಂದು ಆಕ್ಷೇಪಣೆ ಎತ್ತಿದ್ದರು. ಜತೆಗೆ ಪರಿಸರ ಬಳಗ ಹಾಗೂ ಇತರ ಪ್ರಗತಿಪರರು ಅದಕ್ಕೆ ಪ್ರಿನ್ಸ್ ರಸ್ತೆ ಹೆಸರಿದ್ದು, ಬದಲಾವಣೆ ಬೇಡವೆಂದು ತಿಳಿಸಿದ್ದರು. ಹಾಗಾಗಿ ಜಟಾಪಟಿ ಮುಂದುವರೆದಿದ್ದು, ಮಾಜಿ ಸಂಸದ ಪ್ರತಾಪ್ ಸಿಂಹ ಸಹ ಆ ರಸ್ತೆಗೆ ಸಿದ್ದರಾಮಯ್ಯ ಹೆಸರಿಡುವ ಬಗ್ಗೆ ಹೇಳಿದ್ದು, ಕೊನೆಗೆ ಯುಟರ್ನ್ ಹೊಡೆದಿದ್ದರು.
ಮಹಾನಗರ ಪಾಲಿಕೆಯ ಕಡತ (ETV Bharat) ಕಾಂಗ್ರೆಸ್ ನಿಯೋಗದಿಂದ ಪಾಲಿಕೆ ಆಯಕ್ತರ ಭೇಟಿ: ಪಾಲಿಕೆಯ ಆಯುಕ್ತ ರೆಹಮಾನ್ ಅವರನ್ನು ನಗರದ ಕಾಂಗ್ರೆಸ್ ನಿಯೋಗ ಇಂದು ಭೇಟಿ ಮಾಡಿ, ಕೆಆರ್ಎಸ್ ರಸ್ತೆಗೆ "ಸಿದ್ದರಾಮಯ್ಯ ಹೆಸರಿಡಬೇಕು" ಎಂದು ಮನವಿ ಸಲ್ಲಿಸಿದರು. ಪಾಲಿಕೆ ಆಯುಕ್ತರು ಮನವಿ ಸ್ವೀಕರಿಸಿದ್ದಾರೆ.
ಮಹಾನಗರ ಪಾಲಿಕೆಯ ಕಡತ (ETV Bharat) ಪ್ರಿನ್ಸ್ ಹೆಸರಿಲ್ಲ: ಮನವಿ ಸ್ವೀಕರಿಸಿ ಮಾತನಾಡಿದ ಆಯುಕ್ತರು, ಪಾಲಿಕೆಯಲ್ಲಿ 1999ರಿಂದ 2024ರ ವರೆಗೆ ಎಲ್ಲ ಕಡತಗಳನ್ನು ಪರಿಶೀಲಿಸಲಾಗಿದೆ. ಎಲ್ಲಿಯೂ ಕೂಡ ಪ್ರಿನ್ಸ್ ಹೆಸರು ಕಂಡು ಬಂದಿಲ್ಲ. ಜತೆಗೆ ಆ ರಸ್ತೆಗೆ ಯಾವ ಹೆಸರೂ ಇಲ್ಲ. ಈಗ 1964ರಿಂದ 1999ರ ವರೆಗಿನ ಕಡತಗಳನ್ನು ಪರಿಶೀಲಿಸುತ್ತಿದ್ದೇವೆ. ಅದು ಕೂಡ ಮುಕ್ತಾಯ ಹಂತದಲ್ಲಿದ್ದು, ಇನ್ನೂ 20 ವರ್ಷಗಳ ಕಡತ ಮಾತ್ರ ಪರಿಶೀಲನೆ ಬಾಕಿ ಉಳಿದಿದೆ. ಇದರ ಜತೆಗೆ ಪಾಲಿಕೆಯ 9 ವಲಯಗಳ ಆಯುಕ್ತರಿಂದ ಮಾಹಿತಿ ಪಡೆಯುತ್ತಿದ್ದೇವೆ. ಎಲ್ಲೂ ಕೂಡ ಪ್ರಿನ್ಸ್ ಹೆಸರಿರುವ ಬಗ್ಗೆ ಅಧಿಕೃತ ದಾಖಲೆಗಳಿಲ್ಲ. ಗೆಜೆಟ್ನಲ್ಲಿ ಆ ಹೆಸರು ಇದೆಯೋ ಏನೋ ಗೊತ್ತಿಲ್ಲ. ಪಾಲಿಕೆ ವ್ಯಾಪ್ತಿಯಲ್ಲಿರುವ ಯಾವ ದಾಖಲಾತಿಗಳಲ್ಲೂ ಪ್ರಿನ್ಸ್ ಹೆಸರಿಲ್ಲ ಎಂದು ಸ್ಪಷ್ಟನೆ ನೀಡಿದರು.
ಮಹಾನಗರ ಪಾಲಿಕೆಯ ಕಡತ (ETV Bharat) ದಾಖಲೆ ಬಿಡುಗಡೆ ಮಾಡಿದ್ದ ಯದುವೀರ್:ಕೆಆರ್ಎಸ್ ರಸ್ತೆಗೆ ಪ್ರಿನ್ಸ್ ಹೆಸರಿದ್ದು, ವೆಂಕಟೇಶ್ವರಸ್ವಾಮಿ ದೇವಸ್ಥಾನದಿಂದ, ಮೇಟಗಳ್ಳಿಯ ರಾಯಲ್ ಇನ್ ಹಾಗೂ ಕೆಆರ್ಎಸ್ ಸರ್ಕಲ್ ವರೆಗಿನ ರಸ್ತೆಗೆ ಪ್ರಿನ್ಸ್ ಎಂದು ರಸ್ತೆ ಹೆಸರಿದೆ. ಆ ಹೆಸರನ್ನು ಬದಲಾವಣೆ ಮಾಡದಂತೆ ದಾಖಲೆ ಸಮೇತ ಸಂಸದ ಯದುವೀರ್ ಒಡೆಯರ್ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಹೆಸರು ಬದಲಾವಣೆ ಮಾಡದಂತೆ ಸಹಿ ಸಂಗ್ರಹ ಅಭಿಯಾನ ಸಹ ನಡೆದಿದೆ.
ಮಹಾನಗರ ಪಾಲಿಕೆಯ ಕಡತ (ETV Bharat) ಇದನ್ನೂ ಓದಿ:ಮೈಸೂರಿನ ಆ ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೆ ತಪ್ಪೇನಿಲ್ಲ: ಶಾಸಕ ಜಿ.ಟಿ. ದೇವೇಗೌಡ - G T DEVEGOWDA