ಕರ್ನಾಟಕ

karnataka

ETV Bharat / state

ಯುವತಿ ಕೊಲೆ ಬಳಿಕ ಆತ್ಮಹತ್ಯೆಗೆ ವಿಫಲಯತ್ನ; ಹಣವಿಲ್ಲದೆ ಪೊಲೀಸರ ಅತಿಥಿಯಾದ ಆರೋಪಿ! - ASSAM GIRL MURDER CASE

ಅಸ್ಸೋಂ ಮೂಲದ ಯುವತಿ ಕೊಲೆ ಪ್ರಕರಣದ ಆರೋಪಿ ಈಗಾಗಲೇ ಪೊಲೀಸರ ವಶದಲ್ಲಿದ್ದಾನೆ. ಯುವತಿಯ ಹತ್ಯೆ ಬಳಿಕ ಆತ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಅಸ್ಸೋಂ ಯುವತಿ ಹತ್ಯೆ ಬಳಿಕ ಆತ್ಮಹತ್ಯೆಗೆ ವಿಫಲಯತ್ನ: ಹಣವಿಲ್ಲದೆ ಪೊಲೀಸರ ಅತಿಥಿಯಾದ ಆರೋಪಿ!
ಅಸ್ಸೋಂ ಯುವತಿ ಹತ್ಯೆ ಬಳಿಕ ಆತ್ಮಹತ್ಯೆಗೆ ವಿಫಲಯತ್ನ: ಹಣವಿಲ್ಲದೆ ಪೊಲೀಸರ ಅತಿಥಿಯಾದ ಆರೋಪಿ! (ETV Bharat)

By ETV Bharat Karnataka Team

Published : Dec 1, 2024, 1:24 PM IST

ಬೆಂಗಳೂರು:ಇತ್ತೀಚಿಗೆಇಂದಿರಾನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಅಸ್ಸೋಂ ಮೂಲದ ಯುವತಿ ಹತ್ಯೆ ಪ್ರಕರಣದ ಆರೋಪಿ ಆರವ್​​ ಹನೋಯ್​​​ ಕೃತ್ಯದ ಬಳಿಕ ತಾನೂ ಸಹ ಆತ್ಮಹತ್ಯೆಗೆ ಯತ್ನಿಸಿ ವಿಫಲವಾಗಿದ್ದ ಎಂಬ ವಿಚಾರ ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ.

ಮಾಯಾ (19) ಹತ್ಯೆಗೈದ ಬಳಿಕ ಆನ್‌ಲೈನ್‌ನಲ್ಲಿ ನೈಲಾನ್​​ ಹಗ್ಗ ತರಿಸಿಕೊಂಡಿದ್ದ ಆರೋಪಿ 2 ದಿನವೂ ಆತ್ಮಹತ್ಯೆಗೆ ಯತ್ನಿಸಿದ್ದ. ಬಳಿಕ 2 ದಿನಗಳ ಕಾಲ ಮೃತದೇಹದ ಜೊತೆಗೆ ಕಳೆದಿದ್ದ ಆರೋಪಿ, ನವೆಂಬರ್ 26 ರಂದು ಬೆಳಗ್ಗೆ ಕ್ಯಾಬ್​ ಬುಕ್ ಮಾಡಿಕೊಂಡು ಮೆಜೆಸ್ಟಿಕ್ ರೈಲ್ವೆ ನಿಲ್ದಾಣಕ್ಕೆ ತೆರಳಿದ್ದ.

ಯಾವ ಕಡೆ ಹೋಗಬೇಕು ಎಂಬ ಯೋಚನೆಯಲ್ಲಿರುವಾಗ ತನ್ನ ಮುಂದಿದ್ದ ಪ್ರಯಾಣಿಕನೊಬ್ಬ ವಾರಣಾಸಿಗೆ ಹೋಗಲು ಟಿಕೆಟ್ ವಿಚಾರಿಸುತ್ತಿದ್ದುದನ್ನು ನೋಡಿ ತಾನೂ ವಾರಣಾಸಿಗೆ ಟಿಕೆಟ್ ಪಡೆದು ರೈಲು ಹತ್ತಿದ್ದ. ವಾರಣಾಸಿಗೆ ಹೋದ ಬಳಿಕ ಮೊಬೈಲ್​ ಆನ್ ಮಾಡಿದ್ದ ಆರೋಪಿ ತನ್ನ ಅಜ್ಜನಿಗೆ ಕರೆ ಮಾಡಿ ಯುವತಿಯನ್ನು ಹತ್ಯೆಗೈದ ವಿಚಾರ ತಿಳಿಸಿದ್ದ. ಮತ್ತೊಂದೆಡೆ ಅಷ್ಟರಲ್ಲಾಗಲೇ ಪ್ರಕರಣದ ತನಿಖೆ ಆರಂಭಿಸಿದ್ದ ಪೊಲೀಸರು ಆರೋಪಿಯ ಮನೆಗೆ ತಲುಪಿದ್ದರು.

ಹಣವಿಲ್ಲದೆ ಕಂಗಾಲಾದವನ ಮುಂದೆ ನಿಂತಿದ್ದ ಪೊಲೀಸರು:ಮಾಯಾಳೊಂದಿಗೆ ಅಪಾರ್ಟ್‌ಮೆಂಟ್‌ಗೆ ಬಂದಿದ್ದ ಆರವ್​ ಮೊದಲ ದಿನದ ಹಣ ಮಾತ್ರ ಪಾವತಿಸಿ, ಉಳಿದ ಹಣ ಕೊನೆಯಲ್ಲಿ ಪಾವತಿಸುವುದಾಗಿ ಹೇಳಿದ್ದ. ದಿನವೊಂದಕ್ಕೆ ಸರ್ವಿಸ್ ಅಪಾರ್ಟ್‌ಮೆಂಟ್‌ನ ರೂಮ್ ಬೆಲೆ 1,800 ರೂಪಾಯಿ ಇತ್ತು. ರೂಮ್ ಪಡೆದ ಬಳಿಕ ಜೇಬಿನಲ್ಲಿ ಉಳಿದಿದ್ದ 2,500/- ರೂಪಾಯಿಯಲ್ಲಿಯೇ ಆರೋಪಿ ಆನ್‌ಲೈನ್‌ನಲ್ಲಿ ಫುಡ್ ಹಾಗೂ ನೈಲಾನ್ ಹಗ್ಗ ತರಿಸಿಕೊಂಡಿದ್ದ. ಹತ್ಯೆಗೈದ ಬಳಿಕ ಆರೋಪಿ ಬಳಿ ಕೇವಲ 1,500/- ರೂಪಾಯಿ ಮಾತ್ರ ಇತ್ತು. ಮಾರನೇದಿನ ಅದೇ 1500/- ರೂಪಾಯಿಯೊಂದಿಗೆ ಅಪಾರ್ಟ್‌ಮೆಂಟ್‌ನಿಂದ ಪರಾರಿಯಾಗಿದ್ದ. ಬಳಿಕ ರೈಲು ಮಾರ್ಗದ ಮೂಲಕ ವಾರಣಾಸಿ, ಮಧ್ಯಪ್ರದೇಶಕ್ಕೆ ತೆರಳಿ ಬಳಿಕ ಬೆಂಗಳೂರಿಗೆ ವಾಪಸಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಹೆಚ್ಚು ಹಣವಿಲ್ಲದಿದ್ದರಿಂದ ಪ್ರಯಾಣಿಸಲು ಸಾಧ್ಯವಾಗದೆ ಬೆಂಗಳೂರು ಹೊರವಲಯದ ದೇವನಹಳ್ಳಿ ಬಳಿಯಿದ್ದ ಎಂಬುದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ.

ಇದನ್ನೂ ಓದಿ:ಅಸ್ಸಾಂ ಯುವತಿಯ ಹತ್ಯೆ ಪ್ರಕರಣ; ಕೇರಳ ಮೂಲದ ಆರೋಪಿ ಬಂಧನ

ABOUT THE AUTHOR

...view details