ಬೆಂಗಳೂರು:ಶರಣಾಗಿರುವ ನಕ್ಸಲರಿಂದ ಶಸ್ತ್ರಾಸ್ತ್ರ ಪತ್ತೆಯಾಗಿರುವ ಮಾಹಿತಿ ಬಂದಿದೆ. ಎಕೆ 56, ರೈಫಲ್ಸ್, ಕಂಟ್ರಿಮೇಡ್ ಪಿಸ್ತೂಲ್ಗಳು ಸಿಕ್ಕಿವೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದರು.
ನಕ್ಸಲ್ ಶಸ್ತ್ರಾಸ್ತ್ರ ಪತ್ತೆ ವಿಚಾರವಾಗಿ ಇಂದು ಸದಾಶಿವನಗರ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಸಚಿವರು, ಕೆಲವು ಶಸ್ತ್ರಾಸ್ತ್ರಗಳು ಸಿಕ್ಕಿವೆ ಅಂತ ಮಾಹಿತಿ ಬಂದಿದೆ. ಎಕೆ 56, ಕಂಟ್ರಿಮೇಡ್ ಪಿಸ್ತೂಲ್ ಎಲ್ಲ ಸಿಕ್ಕಿದೆ. ಇನ್ನೂ ಪತ್ತೆ ಕಾರ್ಯ ನಡೆಯುತ್ತಿದೆ ಎಂದರು.
ಜಿಎಸ್ಟಿ ಬಾಕಿ ತಾರತಮ್ಯ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ಜಿಎಸ್ಟಿ ಕಟ್ಟೋದ್ರಲ್ಲಿ ನಾವು ಎರಡನೇ ಸ್ಥಾನದಲ್ಲಿದ್ದೇವೆ ಅಂತಾ ಮೊದಲಿನಿಂದಲೂ ಹೇಳುತ್ತಿದ್ದೇವೆ. ಅದಕ್ಕೆ ಪೂರಕವಾಗಿ ಅನುದಾನ ಕೊಡಿ ಅಂತಾ ಕೇಳಿದ್ದೆವು. ರಸ್ತೆಗಳಾಗಬೇಕು, ಅಭಿವೃದ್ಧಿಯಾಗಬೇಕು. ಜಿಎಸ್ಟಿ ಬಾಕಿ ಕೊಟ್ಟರೆ ತಾನೇ ಕೆಲಸ ಮಾಡೋದು. ಅವರು (ಕೇಂದ್ರ ಸರ್ಕಾರ) ಕೊಟ್ಟರೆ ಅಭಿವೃದ್ಧಿಯಾಗುತ್ತದೆ. ದೆಹಲಿ ಪ್ರತಿಭಟನೆ ಬಗ್ಗೆ ಗೊತ್ತಿಲ್ಲ. ಮುಖ್ಯಮಂತ್ರಿಗಳು ಇದರ ಬಗ್ಗೆ ಯೋಚಿಸ್ತಿದ್ದಾರೆ. ನೋಡೋಣ ಏನು ಮಾಡ್ತಾರೆ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ವಿಚಾರವಾಗಿ ಮಾತನಾಡಿ, ಅದರ ಬಗ್ಗೆ ನನಗೇನೂ ಗೊತ್ತಿಲ್ಲ. ಯಾವ ಮಾಹಿತಿಯೂ ನನ್ನ ಬಳಿ ಇಲ್ಲ. ದೆಹಲಿ ನಾಯಕರಿಂದಲೂ ಆ ಬಗ್ಗೆ ಮಾಹಿತಿ ಗೊತ್ತಾಗಿಲ್ಲ. ಎರಡು ವರ್ಷ ಯಾಕೆ, ಡಿಕೆಶಿ ಐದು ವರ್ಷ ಸಿಎಂ ಆಗಲಿ ಎಂಬ ರಾಜಣ್ಣ ಹೇಳಿಕೆ ಬಗ್ಗೆ ಗೊತ್ತಿಲ್ಲ. ಅದು ಅವರ ಹೇಳಿಕೆ. ಅವರ ಹೇಳಿಕೆಗೆ ನಾನು ಯಾಕೆ ಪ್ರತಿಕ್ರಿಯೆ ನೀಡಲಿ. ನಾವು ಅದರ ಬಗ್ಗೆ ಯೋಚನೆ ಮಾಡಿಲ್ಲ ಎಂದು ತಿಳಿಸಿದರು.